ಹಿರಿಯೂರು: ವಿದ್ಯುತ್ ಲೈನ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಶ್ರೀಶೈಲ ಎನ್ನುವ ಲೈನ್ ಮ್ಯಾನ್ ಸ್ಥಿತಿ ಗಂಭೀರಗೊಂಡ ಘಟನೆ ತಾಲೂಕಿನ ಹಾಲಮಾದೇನಹಳ್ಳಿಯಲ್ಲಿ ನಡೆದಿದೆ. ಗಾಯಾಳು ಶ್ರೀಶೈಲ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದ್ದು, ಲೈನ್ ಮ್ಯಾನ್ ಕೆಲಸದ ವೇಳೆ ಏಕಾಏಕಿ ಲೈನ್ ಆನ್ ಮಾಡಿದ ಆರೋಪ ಮಾಡಲಾಗಿದೆ. ಸ್ಥಳೀಯರು ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬೆಸ್ಕಾಂ ಎಸ್ ಓ ರವಿ ನಾಯ್ಕ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿತ್ರ 1 ಲೈನ್ ಮ್ಯಾನ್ ಶ್ರೀಶೈಲ