ಅಧಿಕೃತ ಸ್ಥಾನಮಾನ: ವಿಶ್ವದಾಂದ್ಯತ ತುಳುವರ ಸಂಭ್ರಮ

KannadaprabhaNewsNetwork |  
Published : Sep 19, 2026, 02:30 AM IST
ಬೆಳಗಾವಿ | Kannada Prabha

ಸಾರಾಂಶ

ಭಾಷಾವಾರು ಪ್ರಾಂತ್ಯಗಳ ರಚನೆ ಆಗುವಾಗ ತುಳು ಭಾಷೆ ಮಾತನಾಡುವ ಕರಾವಳಿ ಕರ್ನಾಟಕವನ್ನು ತುಳುನಾಡು ಎಂದು ಘೋಷಿಸಬೇಕು ಎಂಬ ಬೇಡಿಕೆ ಇತ್ತು. ಆದರೆ ಕಾರಣಾಂತರಗಳಿಂದ ತುಳುನಾಡು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಯಿತು. ಈ ಬಗ್ಗೆ ತುಳುವರಲ್ಲಿ ಅಸಮಾಧಾನ ಇದ್ದರೂ ಅದು ದೊಡ್ಡ ಮಟ್ಟದ ಪ್ರತಿಭಟನೆಯಾಗಿ ಪರಿವರ್ತನೆ ಆಗಿರಲಿಲ್ಲ.

ಮಂಗಳೂರು : ಭಾಷಾವಾರು ಪ್ರಾಂತ್ಯಗಳ ರಚನೆ ಆಗುವಾಗ ತುಳು ಭಾಷೆ ಮಾತನಾಡುವ ಕರಾವಳಿ ಕರ್ನಾಟಕವನ್ನು ತುಳುನಾಡು ಎಂದು ಘೋಷಿಸಬೇಕು ಎಂಬ ಬೇಡಿಕೆ ಇತ್ತು. ಆದರೆ ಕಾರಣಾಂತರಗಳಿಂದ ತುಳುನಾಡು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಯಿತು. ಈ ಬಗ್ಗೆ ತುಳುವರಲ್ಲಿ ಅಸಮಾಧಾನ ಇದ್ದರೂ ಅದು ದೊಡ್ಡ ಮಟ್ಟದ ಪ್ರತಿಭಟನೆಯಾಗಿ ಪರಿವರ್ತನೆ ಆಗಿರಲಿಲ್ಲ.

ತಮಿಳು, ತೆಲುಗು, ತುಳು ಮಲಯಾಳಂ, ಕನ್ನಡ ಈ ಪಂಚ ದ್ರಾವಿಡ ಭಾಷೆಗಳಲ್ಲಿ ತುಳುವಿಗೆ ಪ್ರಮುಖ ಸ್ಥಾನ ಇದೆ. ತುಳು ಪ್ರಾಚೀನ ಭಾಷೆ ಎಂಬುದನ್ನು ಭಾಷಾ ವಿದ್ವಾಂಸರು, ತಜ್ಞರು ಕಂಡು ಕೊಂಡಿದ್ದಾರೆ. ಗ್ರಂಥಗಳೂ ರಚನೆಯಾಗಿವೆ. ತುಳು ಭಾಷೆಗೆ ಕರ್ನಾಟಕದಲ್ಲಿ ಸ್ಥಾನಮಾನ ಸಿಗಬೇಕು, ತುಳು ಎಂಟನೇ ಪರಿಚ್ಛೇದಕ್ಕೆ ಸೇರಬೇಕು, ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಬೇಕು ಎಂಬ ಬೇಡಿಕೆ ದಶಕಗಳಿಂದ ಕೇಳಿ ಬಂದಿತ್ತು. ಈ ಭಾಗದಲ್ಲಿರುವ ಕೊಂಕಣಿ, ಬ್ಯಾರಿ ಮತ್ತಿತರ ಭಾಷೆ ಮಾತನಾಡುವವರು ಕೂಡಾ ತುಳು ಭಾಷೆಯ ಸ್ಥಾನಮಾನಕ್ಕಾಗಿ ಹೋರಾಟ ಮಾಡಿರುವುದು ಒಂದು ವಿಶೇಷ.ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತುಳು ಭಾಷೆಯ ಬಗ್ಗೆ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ತುಳು ಕರ್ನಾಟಕದ ಎರಡನೇ ರಾಜ್ಯ ಭಾಷೆಯ ಸ್ಥಾನಕ್ಕೆ ಏರಿದೆ. ಈ ಘೋಷಣೆ ಮಂಗಳೂರು ಉಡುಪಿ ಮತ್ತು ಉತ್ತರ ಕೇರಳದ ಕಾಸರಗೋಡಿನ ಭಾಗದಲ್ಲಿ ತುಳುವರ ಸಂಭ್ರಮಕ್ಕೆ ಕಾರಣವಾಗಿದೆ.

ಉದ್ಯೋಗ ನಿಮಿತ್ತ ಮುಂಬೈ, ದೆಹಲಿ, ಗುಜರಾತ್, ಚೆನ್ನೈ ಮಾತ್ರವಲ್ಲದೆ ಪ್ರಪಂಚದ ವಿವಿಧ ದೇಶಗಳಗೆ ತೆರಳಿ ಅಲ್ಲಲ್ಲಿ ತುಳು ಸಂಘಟನೆಗಳನ್ನು ಕಟ್ಟಿಕೊಂಡ ತುಳುವರು ದೇಶ ಮಾತ್ರವಲ್ಲ ಪ್ರಪಂಚದಾದ್ಯಂತ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ತುಳುಭಾಷೆಗೆ ರಾಜ್ಯದ ಎರಡನೇ ಭಾಷೆಯಾಗಿ ಸ್ಥಾನಮಾನ ಕಲ್ಪಿಸಿಕೊಟ್ಟ ಮುಖ್ಯಮಂತ್ರಿಯವರನ್ನು ತುಳುನಾಡಿ ಮಂದಿ ಪಕ್ಷಬೇಧ ಮರೆತು ಪ್ರಶಂಸಿಸುತ್ತಿದ್ದಾರೆ. ಜಾಲತಾಣಗಳಲ್ಲಿ ತುಳುವಿಗೆ ಅಧಿಕೃತ ಸ್ಥಾನಮಾನ ಬಗ್ಗೆ ವ್ಯಾಪಕವಾಗಿ ಸಂದೇಶಗಳು ಹರಿದಾಡುತ್ತಿದ್ದು, ಸಂಭ್ರಮ ಮುಗಿಲು ಮುಟ್ಟಿದೆ.ಸ್ಥಾನಮಾನದ ಪರಿಣಾಮವೇನು?

ಅಳಿವಿನ ಅಂಚಿನಲ್ಲಿರುವ ಪ್ರಾದೇಶಿಕ ಭಾಷೆಗಳ ಪಟ್ಟಿಯಲ್ಲಿ ತುಳು ಸ್ಥಾನ ಪಡೆದಿತ್ತು. ಕರ್ನಾಟಕದ ರಾಜ್ಯದ ಎಡನೇ ಅಧಿಕೃತ ರಾಜ್ಯ ಭಾಷೆಯಾಗಿ ತುಳು ಎಂದು ಘೋಷಣೆ ಮಾಡಿರುವುದರಿಂದ ಈ ಭಾಷೆ ಅಳಿವಿನಂಚಿನಿಂದ ಮೇಲೆದ್ದಿದೆ.

ಮನೆ ಮನೆಗಳಲ್ಲಿ ಮಾತನಾಡುತ್ತಿದ್ದ ಭಾಷೆಯೊಂದು ರಾಜ್ಯಭಾಷೆ ಎಂದು ಪರಿಗಣಿಸಲ್ಪಟ್ಟರೆ ಸರಕಾರಿ ಕಚೇರಿಗಳಲ್ಲಿ ಅದರ ಬಳಕೆಗೆ ಯಾವುದೇ ಅಡ್ಡಿ ಇರುವುದಿಲ್ಲ. ಇದರಿಂದ ಈ ಭಾಷೆಗೆ ರಾಜಕೀಯ ಪ್ರೋತ್ಸಾಹ ಸಿಗುತ್ತದೆ. ಇತರ ಭಾಷಿಗರು ಕಲಿಯುವುದಕ್ಕೆ ಪ್ರೇರಣೆಯಾಗುತ್ತದೆ. ತುಳು ಭಾಷೆಯಲ್ಲಿ ಸಹಸ್ರಾರು ವರ್ಷಗಳಿಂದ ಹರಿದು ಬಂದ ಮೌಖಿಕ ಸಾಹಿತ್ಯವಿದೆ. ದೈವಾರಾಧನೆ ಮತ್ತು ಇತರ ಸಾಂಪ್ರದಾಯಿಕ ಆಚರಣೆಗಳಲ್ಲಿ ಇದು ಯಥೇಚ್ಛವಾಗಿ ಬಳಕೆಯಾಗುತ್ತದೆ. ಸರಕಾರದಿಂದ ಇದರ ದಾಖಲೀಕರಣಕ್ಕೆ ಅಧಿಕೃತ ಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ತುಳು ಭಾಷೆಯ ಪುಸ್ತಕಗಳ ಬಿಡುಗಡೆಗೆ ಅನುದಾನ ಪ್ರೋತ್ಸಾಹ ಹೆಚ್ಚಾಗುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಆರಂಭವಾಗಿ ಮುಂದಿನ ತಲೆಮಾರು ಈ ಬಗ್ಗೆ ಆಸಕ್ತಿಯನ್ನು ಹೊಂದುತ್ತದೆ.ಪ್ರಮುಖವಾಗಿ ಆಧುನಿಕ ತಂತ್ರಜ್ಞಾನಕ್ಕೆ ಭಾಷೆಯ ಅಳವಡಿಕೆ ಸಾಧ್ಯವಾಗುತ್ತದೆ. ಜಗತ್ತಿನ ಇತರ ಭಾಷೆಗಳಿಗೆ ತುಳು ಭಾಷೆಯ ತರ್ಜುಮೆ ಸಾಧ್ಯವಾಗುತ್ತದೆ. ತುಳು ಸಾಹಿತ್ಯ ಜಗತ್ತಿಗೆ ಪರಿಚಯವಾಗುತ್ತದೆ. ತುಳುನಾಡಿನ ಸಾಂಸ್ಕೃತಿಕ ಸೌಂದರ್ಯ, ಕಲೆ ಜಗತ್ತಿಗೆ ಪರಿಚಯವಾಗಿ ಪ್ರವಾಸೋದ್ಯಮಕ್ಕೆ ಅನುಕೂಲತೆಯನ್ನು ಒದಗಿಸುತ್ತದೆ.ತುಳು ಭಾಷೆಯ ಸ್ಥಾನ ಮಾನದ ಬಗ್ಗೆ 69-70 ನೇ ಇಸವಿಯಿಂದ ಒತ್ತಾಯ ಮಾಡುತ್ತಾ ಬಂದಿದ್ದೇವೆ, ಕರಾವಳಿ ಭಾಗದ ಕೊಂಕಣಿ, ಬ್ಯಾರಿ ಭಾಷೆ ಮಾಡುವವರು ಎಲ್ಲರೂ ತಾವು ತುಳುವರು ಎಂದು ಯಾವುದೇ ಬೇಧ ಇಲ್ಲದೆ ತುಳು ಭಾಷೆಯ ಹೊರಾಟಕ್ಕೆ ಒತ್ತಾಯವನ್ನು ಮಾಡುತ್ತಾ ಬಂದಿದ್ದಾರೆ. ಜಗತ್ತಿನಾದ್ಯಂತ ಇರುವ ತುಳುವರು ಅಲ್ಲಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ನಾವು ತುಳುವರು ಎಂಬ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ ಘೋಷಣೆ ಜಗತ್ತಿನಾದ್ಯಂತದ ತುಳುವರಿಗೆ ಸಂತಸವನ್ನು ಉಂಟು ಮಾಡಿದೆ. ತುಳುವರ ಆಸೆ ಈಡೇರಿದ

-ಎ.ಸಿ. ಭಂಡಾರಿ, ಮಾಜಿ ಅಧ್ಯಕ್ಷರು ತುಳುಸಾಹಿತ್ಯ ಅಕಾಡಮಿ.ಕೆಲವು ದಿನಗಳ ಹಿಂದೆ ಮಾನ್ಯ ಮುಖ್ಯಮಂತ್ರಿಯವರನ್ನು ನಿಯೋಗದ ಮೂಲಕ ಭೇಟಿ ಮಾಡಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡಬೇಕು, ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರನ್ನು ಬ್ರಿಟಿಷರು ಇಟ್ಟ ಕಾರಣ ಅದನ್ನು ಮಂಗಳೂರು ಎಂದು ಬದಲಾಯಿಸಬೇಕು. ಆರ್ಥಿಕ ದುಸ್ಥಿತಿಯಲ್ಲಿರುವ ಮಠ ಮಂದಿರಗಳಿಗೆ ಧನಸಹಾಯವನ್ನು ನೀಡಬೇಕು ಎಂಬಿತ್ಯಾದಿಯಾಗಿ ಐದು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದರಲ್ಲಿ ಈಗ ತುಳು ಭಾಷೆಯ ಬಗೆಗಿನ ಬೇಡಿಕೆ ಈಡೇರಿದೆ. ತುಳು ಭಾಷೆಯ ಮಹತ್ವವನ್ನು ಅರಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಾನು ಅಭಿನಂದಿಸುತ್ತಿದ್ದೇನೆ.

-ಉಮಾನಾಥ ಕೋಟ್ಯಾನ್, ಶಾಸಕರು, ಮಾಜಿ ಅಧ್ಯಕ್ಷರು ತುಳುಸಾಹಿತ್ಯ ಅಕಾಡಮಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ: ಶಿವಶೇಖರ್
ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 77.45 ಲಕ್ಷ ರು. ಲಾಭ