ಶಿರಸಿ: ಹಳಿಯಾಳ ಕ್ಷೇತ್ರದ ನನ್ನ ಬೆಂಬಲಿಗರು ಬಹುತೇಕ ಬಿಜೆಪಿ ಕಡೆ ಒಲವು ಹೊಂದಿದ್ದಾರೆ. ಈಗಾಗಲೇ ಕೆಲವರು ಬಿಜೆಪಿ ಸೇರ್ಪಡೆಗೊಂಡಿದ್ದು, ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಯದ ಮೇರೆಗೆ ಬಿಜೆಪಿಗೆ ನ. 30ರಂದು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಲ್. ಘೋಟ್ನೇಕರ ತಿಳಿಸಿದರು.ಶುಕ್ರವಾರ ನಗರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತಮ್ಮ ಬೆಂಬಲಿಗರ ಜತೆ ಭೇಟಿಯಾದ ವೇಳೆ ಮಾಧ್ಯಮದವರ ಜತೆ ಮಾತನಾಡಿ, ಜೆಡಿಎಸ್ ಮೇಲೆ ಬೇಜಾರಿಲ್ಲ. ಹಳಿಯಾಳ ಭಾಗದ ಮೂಲ ಬಿಜೆಪಿಗರು ನನ್ನ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದೆ. ಈ ಹಿಂದೆ ಕಾಂಗ್ರೆಸ್ ತೊರೆದಾಗಲೇ ಬಿಜೆಪಿ ಸೇರಬೇಕಿತ್ತು. ಆದರೆ ಕೆಲ ಕಾರಣಕ್ಕೆ ಜೆಡಿಎಸ್ ಸೇರುವಂತಾಗಿತ್ತು. ಈಗ ಬಿಜೆಪಿ ಸೇರಿ ಮುಂಬರುವ ಎಲ್ಲ ಚುನಾವಣೆಯಲ್ಲಿ ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಪ್ರಯತ್ನ ಮಾಡಲಾಗುವುದು ಎಂದರು. ಜನರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ನುಡಿದಂತೆ ನಡೆಯುತ್ತಿಲ್ಲ ಎಂದು ಟೀಕಿಸಿದರು.
ರೈತರ ಪ್ರಗತಿಗೆ ನೆರವಾದ ಸಹಕಾರ ಸಂಘಗಳು
ನಮ್ಮ ಜಿಲ್ಲೆಯ ಸಹಕಾರಿ ಸಂಘಗಳು ರೈತರಿಗೆ ಕಲ್ಪಿಸುತ್ತಿರುವ ವಿವಿಧ ಬಗೆಯ ವ್ಯವಸ್ಥೆಗಳು ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೂ ಲಭ್ಯವಾಗದು. ನಮ್ಮಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಅಗತ್ಯವಿರುವ ಅನೇಕ ಸೌಲಭ್ಯಗಳನ್ನು ಜಿಲ್ಲೆಯ ಬಹುತೇಕ ಸಂಘಗಳು ಪೂರೈಸುತ್ತಿವೆ ಎಂದರು.
ಕುಂದರಗಿ ಸೇ.ಸ. ಸಂಘದ ಅಧ್ಯಕ್ಷ ಎಚ್.ಪಿ. ಹೆಗಡೆ ಭರತನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕುಮಟಾದ ಜಿಲ್ಲಾ ಸಹಕಾರಿ ಯುನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ ಸ್ವಾಗತಿಸಿದರು. ಶಿಕ್ಷಕರಾದ ಆದಿತ್ಯ ಶಂಕರ ನಿರ್ವಹಿಸಿದರು. ಪ್ರಕಾಶ ಭಟ್ಟ ವಂದಿಸಿದರು.