ಕಚೇರಿಗಳಿಗೆ ಬರುವ ಜನ ಸಾಮಾನ್ಯರನ್ನು ಅಲೆದಾಡಿಸಬೇಡಿ: ಶಾಸಕ ಗೋವಿಂದಪ್ಪ ತಾಕೀತುಕನ್ನಡಪ್ರಭ ವಾರ್ತೆ ಹೊಸದುರ್ಗ
ಕಂದಾಯ ಇಲಾಖೆ ಹಾಗೂ ಉಪನೋಂದಣಿ ಕಚೇರಿ ಪ್ರಗತಿ ಕಾರ್ಯವು ಸರ್ವೇ ಇಲಾಖೆಯನ್ನು ಅವಲಂಬಿಸಿದೆ. ಹಾಗಾಗಿ ಸರ್ವೇ ಇಲಾಖೆ ಯವರು ಸರಿಯಾಗಿ ಕೆಲಸ ಮಾಡಿದರೆ ಕಂದಾಯ ಇಲಾಖೆ ಪ್ರಕರಣಗಳು ಕಡಿಮೆ ಆಗುತ್ತವೆ. ಇಲ್ಲದಿದ್ದರೆ ಕಡತಗಳು ಬಾಕಿ ಉಳಿಯುತ್ತವೆ. ಸರ್ವೇ ಇಲಾಖೆ ತಾತ್ಸಾರ ಸಹಿಸುವುದಿಲ್ಲ. ಪೋಡಿಮುಕ್ತ ಗ್ರಾಮ ಘೋಷಣೆ ಮಾಡಿದ ಮೇಲೆ ಅಲ್ಲಿನ ಜನರನ್ನು ಸೇರಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ಬಗ್ಗೆ ನಮಗೆ ಒಂದು ಗ್ರಾಮದ ಮಾಹಿತಿಯನ್ನು ಕೊಟ್ಟಿಲ್ಲ. ಇಟ್ಟಿಗೆಹಳ್ಳಿ ಸಿಮೆಂಟ್ ಫ್ಯಾಕ್ಟರಿ ವ್ಯಾಜ್ಯ ಹೈಕೋರ್ಟ್ ನಲ್ಲಿದೆ. ಯಾವುದೇ ಕಾರಣಕ್ಕೂ ಮತ್ತೆ ಆ ಸಿಮೆಂಟ್ ಫ್ಯಾಕ್ಟರಿಯವರಿಗೆ ಅವಕಾಶ ಕೊಡಕೂಡದು ಎಂದು ತಹಸೀಲ್ದಾರ್ ಅವರಿಗೆ ತಾಕೀತು ಮಾಡಿದರು. ಉಪನೋಂದಣಿ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ಲೇಔಟ್ ಮಾಲೀಕರ ಬ್ಲಾಕ್ ಮೇಲ್ ತಂತ್ರಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು. ಆಸ್ತಿ ಇ-ಸ್ವತ್ತು ಇರುವ ಹಾಗೂ ಇಲ್ಲದಿರುವುದನ್ನು ನೋಂದಣಿಗೆ ಮಾಡಿಕೊಡಲು ನಿಮ್ಮ ಕಚೇರಿಯಲ್ಲಿ ನಿಗದಿಪಡಿಸಿರುವ ದರ ಪಟ್ಟಿ ಕೊಡಿ. ಆಸ್ತಿ ಮಾಟ್ ಗೇಜ್ ಮಾಡಿಕೊಡಲು ಸಾಕಷ್ಟು ಹಣ ಪಡೆಯುತ್ತಿದ್ದೀರಿ. ನಮ್ಮದೇ ಆಸ್ತಿಗೆ ಲಕ್ಷಗಟ್ಟಲೇ ಲಂಚ ಪಡೆದಿದ್ದೀರಿ. ಈ ಅವ್ಯವಹಾರ ಇಂದಿಗೆ ನಿಲ್ಲಬೇಕು. ಎಲ್ಲದಕ್ಕೂ ಒಂದು ಚೌಕಟ್ಟು ಇರುತ್ತದೆ. ಅದನ್ನು ಮೀರಿ ಯಾರು ನಡೆದುಕೊಳ್ಳಬಾರದು. ಇನ್ನಾದರೂ ಅರ್ಥ ಮಾಡಿಕೊಂಡು ನಡೆದುಕೊಳ್ಳದಿದ್ದರೆ ಸಹಿಸುವುದಿಲ್ಲ ಖಡಕ್ ಎಚ್ಚರಿಕೆ ನೀಡಿದರು. ಜನರನ್ನು ಅಲೆದಾಡಿಸದಂತೆ ಕೆಲಸ ಮಾಡಿ: ಸಭೆಯಲ್ಲಿ ತಿಳಿಸಿರುವ ಕೆಲಸವನ್ನು ಕಂದಾಯ ಇಲಾಖೆ ತುರ್ತಾಗಿ ಮಾಡಬೇಕು. ಮದ್ಯವರ್ತಿಗಳ ಹಾವಳಿ ತಪ್ಪಿಸಿ, ಜನರನ್ನು ಅಲೆದಾಡಿಸದಂತೆ ಕೆಲಸ ಮಾಡಿಕೊಡಬೇಕು. ತಾಲೂಕು ಆಡಳಿತದ ವಿರುದ್ಧ ಶಾಸಕರಾದ ಗೋವಿಂದಪ್ಪನವರಿಗೆ ದೂರು ಹೋದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದರೆ ಸಹಿಸುವುದಿಲ್ಲ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ಅವರು ತಮ್ಮ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಭೂಮಾಪನ ಇಲಾಖೆ ಪ್ರಭಾರ ಅಧಿಕಾರಿ ಏಕನಾಥ್ ಸೇರಿ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.