ಬಿ ಖಾತೆ ವಿತರಣೆಯಲ್ಲಿ ಅಧಿಕಾರಿಗಳು ಪಾರದರ್ಶಕತೆ ಕಾಪಾಡಿ

KannadaprabhaNewsNetwork |  
Published : Aug 29, 2025, 01:00 AM IST
28ಕೆಜಿಎಲ್13ಕೊಳ್ಳೇಗಾದ ಅಂಬೇಡ್ಕರ್  ಪ್ರತಿಮೆಗೆ ಶಾಸಕರಾದ ಎ ಆರ್ ಕೖಷ್ಣಮೂರ್ತಿ ಮಾಲಾರ್ಪಣೆ ಮಾಡಿದರು.  ನಗರಸಭಾಧ್ಯಕ್ಷೆ ರೇಖಾ ರಮೇಶ್, ಮಾಜಿ ಅಧ್ಯಕ್ಷ ರಮೇಶ್, ತೋಟೇಶ್,  ನಂಜಪ್ಪ, ಶಾಂತರಾಜು ಇದ್ದರು. | Kannada Prabha

ಸಾರಾಂಶ

ನಾನು ಬಿ ಖಾತೆ ವಿಚಾರದಲ್ಲಿ ಸದನದಲ್ಲಿ ಗಮನ ಸೆಳೆದು ಅನುಮತಿ ಕೊಡಿಸಿದ್ದೇನೆ. ಅಂತಹ ಬಿ ಖಾತೆ ವಿತರಣೆ ರಾಜ್ಯಾದ್ಯಂತ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದೆ, ಆದರೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲಗಳುಂಟಾಗಿವೆ. ಈ ವಿಚಾರದಲ್ಲಿ ನನ್ನ ಹೆಸರು ಹಾಳಾಗುತ್ತಿದೆ ಎಂದು ಶಾಸಕ ಎ. ಆರ್‌. ಕೃಷ್ಣಮೂರ್ತಿ ಅಸಮಾಧಾನ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಾನು ಬಿ ಖಾತೆ ವಿಚಾರದಲ್ಲಿ ಸದನದಲ್ಲಿ ಗಮನ ಸೆಳೆದು ಅನುಮತಿ ಕೊಡಿಸಿದ್ದೇನೆ. ಅಂತಹ ಬಿ ಖಾತೆ ವಿತರಣೆ ರಾಜ್ಯಾದ್ಯಂತ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದೆ, ಆದರೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲಗಳುಂಟಾಗಿವೆ. ಈ ವಿಚಾರದಲ್ಲಿ ನನ್ನ ಹೆಸರು ಹಾಳಾಗುತ್ತಿದೆ ಎಂದು ಶಾಸಕ ಎ. ಆರ್‌. ಕೃಷ್ಣಮೂರ್ತಿ ಅಸಮಾಧಾನ ಹೊರಹಾಕಿದರು.

ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖಾತೆ ವಿತರಣೆಗೆ ವಿಳಂಬಕ್ಕೆ ನಗರಸಭೆಯಲ್ಲಿನ ಅಧಿಕಾರಿಗಳು ಕಾರಣವೇ, ಇಲ್ಲ ನೌಕರರು ಕಾರಣನಾ ಅಥವಾ ಕೆಲವು ಸದಸ್ಯರು ಕಾರಣರಾಗುತ್ತಿದ್ದಾರಾ ಎಂಬುದು ತಿಳಿಯುತ್ತಿಲ್ಲ. ನೀವೆ ನನಗೆ ಮಾಹಿತಿ ನೀಡಿ ಯಾರ ಲೋಪದಿಂದಾಗಿ ಇಲ್ಲಿ ಖಾತೆ ವಿಚಾರದಲ್ಲಿ ಅಧ್ವಾನವಾಗುತ್ತಿದೆ ಎಂದು ಕೆಲ ನಗರಸಭೆ ಸದಸ್ಯರನ್ನೇ ಶಾಸಕರು ಪ್ರಶ್ನಿಸಿದರು.

ಬಿ ಖಾತಾ ವಿಚಾರದಲ್ಲಿ ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪಟ್ಟಣದಲ್ಲಿ ಸಾಕಷ್ಟು ಕಡೆ ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಆಗಾಗ್ಗೆ ದುರಸ್ತಿಯಾಗುತ್ತಿವೆ, ಇದರಿಂದ ಸಾರ್ವಜನಿಕರಿಗೆ ತೊಂದೆಯಾಗುತ್ತಿದೆ ಎಂದು ಸದಸ್ಯರ ದೂರಿನ ಹಿನ್ನೆಲೆ ಎಂಜಿನಿಯರ್ ನಟರಾಜುಗೆ ಸಮಗ್ರ ವರದಿ ನೀಡಬೇಕು ಎಂದು ಸೂಚಿಸಿದರು.ಪಟ್ಟಣದಲ್ಲಿ ಒಂದೇ ಒಂದು ಶುದ್ದ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಅದಿಕಾರಿಗಳು ಗುತ್ತಿಗೆಗಾರರಿಗೆ ದುರಸ್ತಿಗೆ ಆದೇಶ ನೀಡುವಲ್ಲಿ ಸತಾಯಿಸುತ್ತಾರೆ ಎಂದು ದೂರಿದರು.

ಶಾಸಕ ಕೃಷ್ಣಮೂರ್ತಿ ಮಾತನಾಡಿ, ಈ ಸಂಬಂಧ ನೀರಿನ ಘಟಕಗಳು ಯಾವ ವರ್ಷ ಪ್ರಾರಂಭವಾಗಿವೆ, ಎಷ್ಟು ಬಾರೀ ದುರಸ್ತಿಯಾಗಿವೆ. ಈ ದುರಸ್ತಿಗೆ ಬಳಕೆಯಾದ ಅನುದಾನದ ಕುರಿತಂತೆ ಸಮಗ್ರ ಮಾಹಿತಿ ನೀಡಿ. ಹೊಣೆ ಹೊತ್ತ ಅಧಿಕಾರಿಗಳು ಇದನ್ನ ನಿರ್ವಹಿಸುವಲ್ಲಿ ಲೋಪದ ಕುರಿತು ನನಗೆ ಸಲ್ಲಿಸುವ ವರದಿಯಲ್ಲಿ ನೀಡಿ ಕ್ರಮವಹಿಸುವೆ ಎಂದರು.

ಬಸ್ತಿಪುರ ಗ್ರಾಮದಲ್ಲಿನ ಬಡಾವಣೆಗಳಿಗೆ ಬೇಟಿ ನೀಡಿ ಮೂಲಭೂತ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಿದರು

ಇದಕ್ಕೂ ಮುನ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

PREV

Recommended Stories

ಬೆಂಗಳೂರು : ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ - ಎಲ್ಲೆಲ್ಲಿ?, ಯಾವಾಗ?
ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ : ಡಿಕೆಶಿ