ಅಧಿಕಾರಿಗಳು ಉಡಾಫೆ ಧೋರಣೆ ಬಿಡಬೇಕು

KannadaprabhaNewsNetwork |  
Published : Sep 20, 2026, 02:15 AM IST
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಆಡಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್. | Kannada Prabha

ಸಾರಾಂಶ

ಸಾರ್ವಜನಿಕ ಕೆಲಸ ಮಾಡುವ ಅಧಿಕಾರಿಗಳು ಉಡಾಫೆ ಧೋರಣೆ ಬಿಡಬೇಕು. ಜನರ ಕಷ್ಟ ನಿಮ್ಮಿಂದ ಬಗೆಹರಿಯುತ್ತದೆ ಎಂದಾದರೆ ಕೂಡಲೇ ಬಗೆಹರಿಸಿ ಬಡವರ ಕೆಲಸ ಮಾಡಿದಲ್ಲಿ ಜೀವನ ಪರ್ಯಂತ ನಿಮ್ಮ ಹೆಸರು ಹೇಳುತ್ತಾರೆ. ಕೆಲ ಅಧಿಕಾರಿಗಳು ಮನೋಭಾವ ಬದಲಿಸಿಕೊಳ್ಳಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸಾರ್ವಜನಿಕ ಕೆಲಸ ಮಾಡುವ ಅಧಿಕಾರಿಗಳು ಉಡಾಫೆ ಧೋರಣೆ ಬಿಡಬೇಕು. ಜನರ ಕಷ್ಟ ನಿಮ್ಮಿಂದ ಬಗೆಹರಿಯುತ್ತದೆ ಎಂದಾದರೆ ಕೂಡಲೇ ಬಗೆಹರಿಸಿ ಬಡವರ ಕೆಲಸ ಮಾಡಿದಲ್ಲಿ ಜೀವನ ಪರ್ಯಂತ ನಿಮ್ಮ ಹೆಸರು ಹೇಳುತ್ತಾರೆ. ಕೆಲ ಅಧಿಕಾರಿಗಳು ಮನೋಭಾವ ಬದಲಿಸಿಕೊಳ್ಳಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸಲಹೆ ನೀಡಿದರು. ತಾಲೂಕಿನ ಕಡಬ ಹೋಬಳಿ ಆಡಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಮತ ಹಾಕಿ ಗೆಲ್ಲಿಸಿದ ನಮಗೂ ಕೂಡಾ ಜನರ ಕಷ್ಟ ಕೇಳಿ ಬರುತ್ತದೆ. ನಮ್ಮಿಂದ ಸಾಧ್ಯವಾದಷ್ಟು ಬಗೆಹರಿಸಿ ಬಡವರ ಸಮಾಧಾನ ಪಡಿಸಿದಲ್ಲಿ ನನಗೂ ಸಹ ಸಾರ್ಥಕ ಭಾವ ಮೂಡುತ್ತದೆ ಎಂದರು. ತಾಲೂಕು ಆಡಳಿತವನ್ನು ಗ್ರಾಮಗಳಿಗೆ ಮನೆ ಮುಂದೆ ತಂದು ನಿಮ್ಮ ಕಷ್ಟಗಳಿಗೆ ತ್ವರಿತ ಇತ್ಯರ್ಥಕ್ಕಾಗಿ ಈ ಪ್ರಜಾ ಸೇವಾ ಅಭಿಯಾನ ನಡೆಸುವ ಕನಸು ಮುಖ್ಯಮಂತ್ರಿಗಳು ಕಂಡಿದ್ದರು. ಅದರಂತೆ ಪ್ರತಿ ಶನಿವಾರ ಹೋಬಳಿ ಮಟ್ಟ ನಡೆಯುತ್ತಿದೆ. ಚೇಳೂರು ಕಡಬ ಮುಗಿದು ಉಳಿದ ಹಾಗಲವಾಡಿ ನಿಟ್ಟೂರು ಶೀಘ್ರದಲ್ಲಿ ಮುಗಿಯಲಿದೆ ನಂತರ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಈ ಅಭಿಯಾನ ಮುಂದುವರೆಯಲಿದೆ ಎಂದರು. ಕಂದಾಯ ಗ್ರಾಮ ರಚನೆ, ಪವತಿ ಖಾತೆ ಆಂದೋಲನ, ಪೋಡಿ ಮುಕ್ತ ಗ್ರಾಮ ಈ ಮೂರು ಕಾರ್ಯಕ್ರಮದಲ್ಲಿ ಗುಬ್ಬಿ ತಾಲ್ಲೂಕು ಮೊದಲ ಸ್ಥಾನದಲ್ಲಿದೆ. ಇಡೀ ತಾಲೂಕು ಆಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು 4300 ಉಳುಮೆ ಚೀಟಿ ನೀಡಲು ಅವಕಾಶ ಕಲ್ಪಿಸಿದ ಕಾಗೋಡು ತಿಮ್ಮಪ್ಪ ಅವರನ್ನು ಯಾರೂ ಮರೆಯುವಂತಿಲ್ಲ. ಹಾಗೆಯೇ ತಮ್ಮ ಕೆಲಸ ನಿಷ್ಠೆಯಿಂದ ಮಾಡಿದಲ್ಲಿ ಅಧಿಕಾರಿಗಳನ್ನು ಜನ ಸ್ಮರಿಸುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ನೂರಕ್ಕೂ ಅಧಿಕ ಅರ್ಜಿ ಪರಿಶೀಲನೆ ನಡೆಸಿದರು. ವೇದಿಕೆಯಲ್ಲಿ ತಹಸೀಲ್ದಾರ್ ಆರತಿ.ಬಿ., ತಾಪಂ ಇಓ ರಂಗನಾಥ್, ಕಡಬ ಉಪ ತಹಶೀಲ್ದಾರ್ ವರುಣ್, ನಿಟ್ಟೂರು ಉಪ ತಹಶೀಲ್ದಾರ್ ಪ್ರಶಾಂತ್, ಸಿ.ಎಸ್.ಪುರ ಉಪ ತಹಸೀಲ್ದಾರ್ ರಂಗನಾಥ್, ಪಿಎಸ್ಐ ರಾಜೇಶ್ವರಿ, ಕಂದಾಯ ನಿರೀಕ್ಷಕ ರಾಜಶೇಖರ್, ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ 98ನೇ ಜನ್ಮೋತ್ಸವ
ಮುನ್ನೊಳಿ ಪಂಚಾಯಿತಿಯಲ್ಲಿ ಪ್ರಜಾಸೇವೆಗೆ ಚಾಲನೆ