ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ತಾಲೂಕು ಸೌಧ ಸಭಾಂಗಣದಲ್ಲಿ ಶುಕ್ರವಾರ ಕರೆದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಿನ ಮೂಲ ಇದ್ದರೇ ಅದನ್ನು ಪಡೆದುಕೊಂಡು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕು. ಕುಡಿಯುವ ನೀರಿನ ಮೂಲವೇ ಇಲ್ಲದ ಸಮಸ್ಯಾತ್ಮಕ ಗ್ರಾಮಗಳು ಇದ್ದರೇ ಆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಬರವನ್ನು ಯುದ್ಧೋಪಾದಿಯಲ್ಲಿ ಎದುರಿಸಿ ಯಾವುದೇ ಗ್ರಾಮಕ್ಕೆ, ಜನವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕೆರೆ, ಹಳ್ಳ, ಕಾಲುವೆಗಳ ಸುತ್ತಲು ಇರುವ ಬಾವಿ, ಬೊರವೆಲ್‌ಗಳನ್ನು ಪತ್ತೆ ಹಚ್ಚಿ ಅವುಗಳು ತಮ್ಮ ವ್ಯಾಪ್ತಿಗೆ ಪಡೆದುಕೊಂಡು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬೇಕು. ಇಂದಿನಿಂದ ಜೂನ್ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿರುವ ಇರುವ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಟ್ಯಾಂಕರ್ ಮೂಲಕ ನೀರು ಸರಿಯಾಗಿ ಸರಬರಾಜು ಆಗುತ್ತದೆಯೋ ಇಲ್ಲವೊ, ಟ್ಯಾಂಕರ್ ಮಾಲೀಕರು ಅನುಮತಿ ಪಡೆದ ಟ್ರೀಪ್‌ದಂತೆ ನೀರು ಸರಬರಾಜು ಮಾಡುತ್ತಾರೆಯೊ ಇಲ್ಲವೊ ಎಂಬುವುದನ್ನು ಪ್ರತಿನಿತ್ಯ ಪರಿಶೀಲಿಸಬೇಕು ಎಂದರು.15 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಗೆ ಬಾಡಿಗೆ ಹಣ ನೀಡಿದರೇ ಟ್ಯಾಂಕರ್ ಸರಬರಾಜು ಮಾಡುವವರಿಗೂ ಅನುಕೂಲವಾಗುತ್ತದೆ. ತಾಲೂಕಿನ ಅಥರ್ಗಾ, ಹೊರ್ತಿ (ಮೊರಾರ್ಜಿ ವಸತಿ ಶಾಲೆಗಳು), ಬಳ್ಳೊಳ್ಳಿ, ಗಣವಲಗಾ, ಚಿಕ್ಕಬೇವನೂರ, ಅಂಜುಟಗಿ, ಕಪನಿಂಬರಗಿ, ಅಗಸನಾಳ, ತೆಗ್ಗಿಹಳ್ಳಿ ಗ್ರಾಮಗಳಿಗೆ ತುರ್ತಾಗಿ 15 ದಿನಗಳ ಒಳಗಾಗಿ ಟ್ಯಾಂಕರ್ ಮಂಜೂರು ಮಾಡಲು ಸಭೆಯಲ್ಲಿ ಚಿರ್ಚಿಸಲಾಯಿತು.
ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಸರ್ಕಾರಿ ಘೋಷಣೆ ಮಾಡಿದ್ದು, ಯಾವ ತಾಂಡಾಗಳಿಗೆ ಹಕ್ಕುಪತ್ರ ನೀಡಿರುವುದಿಲ್ಲ ಎಂಬುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಎಲ್ಲರಿಗೂ ಹಕ್ಕುಪತ್ರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
-ಅಬೀದ್ ಗದ್ಯಾಳ,