ವೇಮನರು ಧಾರ್ಮಿಕ ಚಿಂತನೆ ಸಾರಿದ ಮಹಾನ್ ಜ್ಞಾನಿ: ಪ್ರೊ. ಸಿದ್ದಣ್ಣ ಲಂಗೋಟಿ

KannadaprabhaNewsNetwork | Published : Jan 20, 2024 2:00 AM

ಸಾರಾಂಶ

ಮಹಾಯೋಗಿ ವೇಮನರು ಜಗಜ್ಯೋತಿ ಬಸವೇಶ್ವರರ ವಿಶ್ವಮಾನವನ್ನು ಸಂದೇಶ ಭೋದಿಸಿದ್ದಾರೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟವರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾಯೋಗಿ ವೇಮನರು ಕವಿಯಾಗಿ, ಯೋಗಿಯಾಗಿ, ದಾರ್ಶನಿಕನಾಗಿ ಬಸವಣ್ಣನವರ ಚಿಂತನೆಯಂತೆ ಧಾರ್ಮಿಕ ಸೌಹರ್ಯದ್ಯತೆ ಸಾರಿದ ಮಹಾನ ಜ್ಞಾನಿ. ವೇಮನರು ಸಮಾಜದಲ್ಲಿನ ಮೌಢ್ಯಗಳು, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರ ಶ್ರಮಿಸಿದವರು ಎಂದು ಪ್ರೊ. ಸಿದ್ದಣ್ಣ ಲಂಗೋಟಿ ಅವರು ತಿಳಿಸಿದರು.

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ ನಡೆದ ಮಹಾಯೋಗಿ ವೇಮನ ಜಯಂತಿ-2024ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾಯೋಗಿ ವೇಮನರು ಜಗಜ್ಯೋತಿ ಬಸವೇಶ್ವರರ ವಿಶ್ವಮಾನವನ್ನು ಸಂದೇಶ ಭೋದಿಸಿದ್ದಾರೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟವರು. ತೆಲಗು ನಾಡಿನಲ್ಲಿ ಬಸವಣ್ಣನವರ ವಚನ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮಣಿ, ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಗೌರವಾಧ್ಯಕ್ಷರು ಇಂದಿರಾಭಾಯಿ ಮಳಲಿ, ಉಪಾಧ್ಯಕ್ಷರು ಕಾಂತು ಜಾಲಿಬೇರಿ, ಟಿ.ಕೆ ಪಾಟೀಲ,ಸಮಾಜದ ಮುಖಂಡರಾದ ಡಾ. ಗಿರೀಶ ಸೋಮವಾಳಕರ, ಮಂಜುನಾಥ ಪಾಟೀಲ, ಕಲ್ಯಾಣಮ್ಮ ಲಂಗೋಟಿ ಮತ್ತಿತರು ಉಪಸ್ಥಿತರಿದ್ದರು. ಸುನೀತಾ ದೇಸಾಯಿ ನಿರೂಪಿಸಿ, ವಂದಿಸಿದರು.

ಮೆರವಣಿಗೆ ಕಾರ್ಯಕ್ರಮ: ಇದಕ್ಕೂ ಮುಂಚೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಮಹಾಯೋಗಿ ವೇಮನ ಭಾವಚಿತ್ರ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಆವರಣದಿಂದ ಪ್ರಾರಂಭಗೊಂಡು ಚನ್ನಮ್ಮ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.

ಈ ಸಂದರ್ಭದಲ್ಲಿ ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಗೌರವಾಧ್ಯಕ್ಷರು ಇಂದಿರಾ ಭಾಯಿ ಮಳಲಿ, ಉಪಾಧ್ಯಕ್ಷರಾದ ಕಾಂತು ಜಾಲಿಬೇರಿ, ಟಿ.ಕೆ ಪಾಟೀಲ, ಸಮಾಜದ ಸಮಾಜದ ಮುಖಂಡರಾದ ಡಾ. ಗಿರೀಶ ಸೋಮವಾಳಕರ, ಮುಖಂಡರಾದ ಮಂಜುನಾಥ ಪಾಟೀಲ ಹಾಜರಿದ್ದರು.

Share this article