ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರ ಅಥವಾ ಅದರ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧದಿಸಬೇಕು ಎಂದು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಅದೇಶ ನೀಡಿದ್ದರೂ ಇದುವರೆಗೂ ಯಾವು ಅಧಿಕಾರಿಯೂ ಇದನ್ನು ಪಾಲಿಸುತ್ತಿಲ್ಲ.ತಾಲೂಕಿನ ಬಹುತೇಕ ಅಧಿಕಾರಿಗಳಿಗೆ ಕ್ಷೇತ್ರದಲ್ಲಿ ವಾಸ್ತವ್ಯವಿರಲು ಇಷ್ಟವಿಲ್ಲ. ಹೀಗಾಗಿ ಅವರು ಸಮೀಪದ ನಗರದಲ್ಲೇ ವಾಸವಿದ್ದು ದಿನವೂ ಕಚೇರಿಗೆ ಬಂದುಹೋಗುವ ಕಾಯಕ ಮಾಡುತ್ತಿದ್ದಾರೆ. ಅಧಿಕಾರಿಗಳ ಭೇಟಿ ಕಷ್ಟತಾಲೂಕು ಕೇಂದ್ರದಿಂದ ಅಕ್ಕಪಕ್ಕದ ಜಿಲ್ಲಾ ಕೇಂದ್ರಗಳು ಕನಿಷ್ಠ 30-40ಕಿ.ಮೀ. ದೂರದಲ್ಲಿವೆ. ಆಧರೂ ಬಹುತೇಕ ಅಧಿಕಾರಿಗಳು ನಿತ್ಯ ಅಲ್ಲಿಂದಲೇ ತಾಲೂಕು ಕೇಂದ್ರದ ಕಚೇರಿಗೆ ಆಗಮಿಸಿ ಕೆಲಸದ ಅವಧಿ ಬಳಿಕ ಅಥವಾ ಅದಕ್ಕಿಂತ ಮೊದಲೇ ಹಿಂತಿರುಗುತ್ತಿದ್ದಾರೆ. ಇದರಿಂದಾಗ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾಗುವುದು ಕಷ್ಟವಾಗಿದೆ ಎಂಬ ಆರೋಪಿಗಳು ಕೇಳಿಬರುತ್ತಿವೆ.
ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿ ವ್ಯಾಪ್ತಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 50ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಆದರೆ ಬಹುತೇಕ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ವಾಸಮಾಡುತ್ತಿಲ್ಲ. ಅಧಿಕಾರಿಗಲು ತಮ್ಮ ಕುಟುಂಬ ಹಾಗೂ ಮಕ್ಕಳ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರದಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪಿಡಿಒ ಅಧಿಕಾರಿಗಳೂ ದೂರಸ್ಥಳೀಯ ಗ್ರಾಪಂಗಳು ಗ್ರಾಮೀಣ ಭಾಗದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಮುಖ ಕೇಂದ್ರಗಳಾಗಿವೆ. ಇಲ್ಲಿರ ಪಿಡಿಒ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಇವರ ವಾಸ್ತವ್ಯ ಪಂಚಾಯಿತಿ ಕೇಂದ್ರದಿಂದ ಅತ್ಯಲ್ಪ ದೂರದಲ್ಲಿದ್ದರೆ ನಾಗರೀಕರು ಮತ್ತು ಸಿಬ್ಬಂಧಿ ತ್ವರಿತವಾಗಿ ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ಆದರೆ ಸಾಕಷ್ಟು ಮಂದಿ ಪಿಡಿಒ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿಲ್ಲ.