ಗೃಹ ಬಳಕೆಯ 9 ಸಿಲಿಂಡರ್ ವಶಪಡಿಸಿಕೊಂಡ ಅಧಿಕಾರಿಗಳು

KannadaprabhaNewsNetwork |  
Published : Mar 18, 2026, 03:00 AM IST
ಪೊಟೋ ಮಾ.17ಎಂಡಿಎಲ್ 1ಎ, 1ಬಿ.. ಮುಧೋಳ ನಗರದ ವಿವಿಧ ಹೊಟೇಲ್ ಮತ್ತು ಖಾನಾವಳಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 9 ಗೃಹ ಬಳಕೆಯ ಸಿಲೆಂಡರ್ ಗಳನ್ನು ಒಶಪಡಿಸಿಕೊಂಡಿದ್ದಾರೆ  | Kannada Prabha

ಸಾರಾಂಶ

ಮುಧೋಳ ನಗರದ ವಿವಿಧ ಹೊಟೇಲ್ ಮತ್ತು ಖಾನಾವಳಿಗಳ ಮೇಲೆ ಮಂಗ‍ಳವಾರ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ 9 ಗೃಹ ಬಳಕೆಯ ಸಿಲಿಂಡರ್‌ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ನಗರದ ವಿವಿಧ ಹೊಟೇಲ್ ಮತ್ತು ಖಾನಾವಳಿಗಳ ಮೇಲೆ ಮಂಗ‍ಳವಾರ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ 9 ಗೃಹ ಬಳಕೆಯ ಸಿಲಿಂಡರ್‌ ವಶಪಡಿಸಿಕೊಂಡಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಹಾಗೂ ತಹಸೀಲ್ಡಾರ್‌ ಚಿಕ್ಕಪ್ಪ ನಾಯಿಕ ಅವರ ಮಾರ್ಗದರ್ಶನದ ಮೇರೆಗೆ ಮುಧೋಳ ತಾಲೂಕು ಆಹಾರ ಇಲಾಖೆಯ ನಿರೀಕ್ಷಕರಾದ ರತ್ನಾ ಬಡಿಗೇರ ಹಾಗೂ ಸತ್ಯವ್ವ ಮಾದರ, ಆಹಾರ ಶಿರಸ್ತೆದಾರ ಡಿ.ಬಿ. ದೇಶಪಾಂಡೆ, ಪುಡ್ ಸೆಪ್ಟಿ ಆಫೀಸರ್ ಸದಾಶಿವ ಹಡಪದ, ನಗರಸಭೆ ಆರೋಗ್ಯ ನಿರೀಕ್ಷಕರಾದ ಸಿದ್ದರಾಜ ಅರಳಿಮಟ್ಟಿ ಮತ್ತು ಸುಭಾಷ ಕಾಂಬಳೆ ಇವರ ತಂಡವು ಖಚಿತ ಮಾಹಿತಿ ಪಡೆದುಕೊಂಡು ಮಂಗಳವಾರ ನಗರದ ವಿವಿಧ ಹೊಟೇಲ್ ಮತ್ತು ಖಾನಾವಳಿಗಳ ಮೇಲೆ ದಿಢೀರ್‌ ದಾಳಿ ಮಾಡಿ ಗೃಹ ಬಳಕೆಯ ಒಟ್ಟು 9 ಸಿಲಿಂಡರ್ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಜಮಖಂಡಿ ಉಪ ವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ ದರ್ಬಾರ್‌-2, ಶ್ರೀ ಲಕ್ಷ್ಮೀ ಲಿಂಗಾಯತ ಖಾನಾವಳಿ-2, ಅನ್ನಪೂರ್ಣೆಶ್ವರಿ ಹೊಟೇಲ್-2, ಶಬರಿ ಸಾಗರ ಹೊಟೇಲ್-1, ಪ್ರಶಾಂತ ಖಾನಾವಳಿ-1, ಶ್ರೀ ಶಿವಶಕ್ತಿ ರೈಸ್ ಸೆಂಟರ್-1 ಒಟ್ಟು 9 ಸಿಲಿಂಡರ್ ಅಧಿಕಾರಿಗಳು ವಪಡಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಹೊರತರುವ ಮುಹೂರ್ತ, ಜಾತ್ರೆಗೆ ಕ್ಷಣಗಣನೆ
ಮಧ್ಯಪ್ರಾಚ್ಯ ಯುದ್ಧ ಬೆನ್ನಿಗೇ ಕೈಸುಡುತ್ತಿದೆ ಮೊಬೈಲ್‌ ಫೋನ್‌ ದರ!