ಕನಕಗಿರಿ: ಚರ್ಮರೋಗ ಕಾಣಿಸಿಕೊಂಡ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಜಾಲಿಹುಡಾ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬೋರ್‌ವೆಲ್ ಇರುವ ಪ್ರದೇಶ ಮೊದಲು ತಗ್ಗು ಪ್ರದೇಶವಾಗಿತ್ತು. ಇದೀಗ ಸಮತಟ್ಟಾಗಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದಕ್ಕಾಗಿ ಬಳಕೆಗೆ ಮಾತ್ರ ಉಪಯೋಗಿಸುತ್ತಿದ್ದೇವು. ಆದರೆ, ಗ್ರಾಮದ ಹಲವರಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಈ ನೀರಿನ ಬಳಕೆಯಿಂದಲೇ ಎನ್ನುವ ಅನುಮಾನವಿದ್ದು, ಕೂಡಲೇ ಈ ನೀರಿನ ಪರೀಕ್ಷೆ ನಡೆಸಬೇಕು ಎಂದು ಕನಕಪ್ಪ ಮಮ್ಮಳಿ, ರೈತ ಮುಖಂಡ ನಿಂಗಪ್ಪ ಅಧಿಕಾರಿಗಳ ಗಮನಕ್ಕೆ ತಂದರು.
ಈ ಬೋರವೆಲ್ ನೀರು ಬಳಕೆಗೆ ಯೋಗ್ಯ ಇದೆಯೋ ಇಲ್ಲವೋ ಎನ್ನುವುದನ್ನು ಕೂಡಲೇ ತಪಾಸಣೆ ಮಾಡಿಸುವಂತೆ ಪಿಡಿಒ ಬಸವರಾಜ ಸಂಕನಾಳರಿಗೆ ತಹಸೀಲ್ದಾರ್ ಸೂಚಿಸಿದರು.ಚರ್ಮರೋಗದ ತಪಾಸಣೆ:
ಚರ್ಮರೋಗ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ತಾಲೂಕಿನ ಮುಸಲಾಪೂರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಚರ್ಮರೋಗದ ಕುರಿತು ತಪಾಷಣೆ ನಡೆಸಿದರು. ನೀರು, ಅನೈರ್ಮಲ್ಯ, ಆಹಾರದಿಂದಲೂ ಈ ರೀತಿಯ ಚರ್ಮರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಹಸೀಲ್ದಾರ್‌ಗೆ ತಿಳಿಸಿದರು.