ಜಪ್ತಿಗೆ ಬಂದಾಗ ಪರಿಹಾರ ಚೆಕ್ ನೀಡಿದ ಅಧಿಕಾರಿಗಳು

KannadaprabhaNewsNetwork |  
Published : Nov 01, 2025, 01:15 AM IST
31ಕೆಆರ್ ಎಂಎನ್ 8.ಜೆಪಿಜಿಭೂ ಸ್ವಾಧೀನ ಕಚೇರಿಯಲ್ಲಿ ಜಪ್ತಿ ಕಾರ್ಯಕ್ಕೆ ಆಗಮಿಸಿದ್ದ ವೇಳೆ ಅಧಿಕಾರಿಗಳು ಚೆಕ್ ಮುಖಾಂತರ ಪರಿಹಾರದ ಹಣ ಸಂದಾಯ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಕೋರ್ಟ್ ಪ್ರಕರಣ‍‍‍ವೊಂದಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಂಕೀರ್ಣದಲ್ಲಿರುವ ಭೂ ಸ್ವಾಧೀನ ಕಚೇರಿಯಲ್ಲಿ ಜಪ್ತಿ ಕಾರ್ಯಕ್ಕೆ ಆಗಮಿಸಿದ್ದ ವೇಳೆ ಅಧಿಕಾರಿಗಳು ಚೆಕ್ ಮುಖಾಂತರ ಪರಿಹಾರದ ಹಣ ಸಂದಾಯ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ರಾಮನಗರ: ಕೋರ್ಟ್ ಪ್ರಕರಣ‍‍‍ವೊಂದಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಂಕೀರ್ಣದಲ್ಲಿರುವ ಭೂ ಸ್ವಾಧೀನ ಕಚೇರಿಯಲ್ಲಿ ಜಪ್ತಿ ಕಾರ್ಯಕ್ಕೆ ಆಗಮಿಸಿದ್ದ ವೇಳೆ ಅಧಿಕಾರಿಗಳು ಚೆಕ್ ಮುಖಾಂತರ ಪರಿಹಾರದ ಹಣ ಸಂದಾಯ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಜಿಲ್ಲೆಯ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ, ಚಿಕ್ಕಕಲ್ಯ, ಗ್ರಾಮದ ಸ.ನಂ: 27/2ಸಿರ ಜಮೀನನ್ನು ಬೆಂಗಳೂರು-ಹಾಸನ ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದು, ಹಿರಿಯ ಸಿವಿಲ್ ನ್ಯಾಯಾಲಯ, ಮಾಗಡಿ ನ್ಯಾಯಾಧೀಶರ ಆದೇಶದಂತೆ ಹೆಚ್ಚಿನ ಪರಿಹಾರದ ಹಣವನ್ನು ನ್ಯಾಯಾಲಯಕ್ಕೆ ಠೇವಣಿ ಇಡುವಂತೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಗಂಗಣ್ಣ ಅವರಿಗೆ ಪರಿಹಾರ ನೀಡುವ ಭರವಸೆಯನ್ನು ಭೂಸ್ವಾಧೀನ ಅಧಿಕಾರಿ ನೀಡಿದ್ದರು. ಆದರೆ, 2024ರಲ್ಲಿ ನೀಡಿದ್ದ ಭರವಸೆಯಂತೆ ನಡೆದುಕೊಳ್ಳದ ಕಾರಣ ಯಾವುದೇ ಕಾರಣಕ್ಕೂ ಈ ಬಾರಿ ಜಪ್ತಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕೋರ್ಟ್ ಅಮೀನರಾದ ಬಿ.ಕೆ.ಗಿರೀಶ್ ಪಟ್ಟು ಹಿಡಿದಿದ್ದರು.

ನ್ಯಾಯಾಲಯದ ನೋಟಿಸ್ ನೀಡಿದ್ದರೂ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್‌ಗೆ ಗಂಗಣ್ಣ ಪರ ವಕೀಲ ಪ್ರದೀಪ್.ಎಂ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ನ್ಯಾಯಾಲಯ ವಿಶೇಷ ಭೂಸ್ವಾಧೀನ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಪ್ರದೀಪ್ ಅವರು ನ್ಯಾಯಾಲಯ ಆದೇಶದ ಪಾಲನೆ ಮುಂದಾಗಿ ನ್ಯಾಯಾಲಯದ ಅಮೀನರೊಂದಿಗೆ ಇಲಾಖೆಯ ವಸ್ತುಗಳನ್ನು ಜಪ್ತಿ ಮಾಡಲು ಆಗಮಿಸಿದ್ದರು.

ಈ ವೇಳೆ ಗಾಬರಿಗೊಂಡ ಅಧಿಕಾರಿಗಳು ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ. ನ್ಯಾಯಾಲದಯ ಆದೇಶದಂತೆ ನ್ಯಾಯಾಲಯದ ಒಟ್ಟು 6,14,067 ರು. ಚೆಕ್ ನೀಡಲಾಗಿದೆ.

31ಕೆಆರ್ ಎಂಎನ್ 8.ಜೆಪಿಜಿ

ಭೂ ಸ್ವಾಧೀನ ಕಚೇರಿಯಲ್ಲಿ ಜಪ್ತಿ ಕಾರ್ಯಕ್ಕೆ ಆಗಮಿಸಿದ್ದ ವೇಳೆ ಅಧಿಕಾರಿಗಳು ಚೆಕ್ ಮುಖಾಂತರ ಪರಿಹಾರದ ಹಣ ಸಂದಾಯ ಮಾಡಿದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!