ರಾಮನಗರ: ನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಧಾರ್ಮಿಕ ಕಾರ್ಯಕ್ಕೆ ಬೆಂಗಳೂರಿನ ವಿಜಯನಗರ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅವರ ಪುತ್ರ ಪ್ರದೀಪ್ ಎಂ.ಕೃಷ್ಣಪ್ಪ ಭೇಟಿ ನೀಡಿ 10 ಲಕ್ಷ ರು.ಗಳ ಸಹಾಯಧನ ಚೆಕ್ ವಿತರಣೆ ಮಾಡಿದರು.
ಶ್ರೀ ಅರ್ಕೇಶ್ವರಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್ ಮಾತನಾಡಿ, ಅರ್ಕಾವತಿ ದಂಡೆಯಲ್ಲಿರುವ ದಕ್ಷಿಣಾಭಿಮುಖವಾಗಿರುವ ಶ್ರೀ ಅರ್ಕೆಶ್ವರ ದೇವಾಲಯ ಇಲ್ಲಿನ ವಿಶೇಷವಾಗಿದೆ. ಇದಕ್ಕೆ ಪುರಾತನ ಇತಿಹಾಸವಿದ್ದು, ಈಗ ಜೀಣೋದ್ದಾರ ಕಾರ್ಯ ನಡೆಯುತ್ತಿದೆ. ಇದಕ್ಕೆ ನೆರವು ನೀಡುವಂತೆ ಸಮಿತಿಯ ಪರವಾಗಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಲ್ಲಿ ಮನವಿ ಮಾಡಿದ್ದೆವು. ಇಂದು ಅವರ ಪುತ್ರ ಪ್ರದೀಪ್ ಎಂ.ಕೃಷ್ಣಪ್ಪ ಮೂಲಕ 10 ಲಕ್ಷ ರು. ನೆರವು ನೀಡಿ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅವರಿಗೆ ಸಮಿತಿಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಶ್ರೀ ಅರ್ಕೇಶ್ವರಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ಎಸ್.ಟಿ.ನಂದೀಶ್, ಖಜಾಂಚಿ ಕೆ.ಆರ್.ನಾಗೇಶ್, ಸಮಿತಿ ಸದಸ್ಯರಾದ ಅರ್ಕೇಶ್ವರ, ಚಂದ್ರಶೇಖರ್, ಪುಟ್ಟರಾಜು, ಪಾರುಪತ್ತೇದಾರರಾದ ಮುದುರೈವೀರನ್, ನಗರಸಭಾ ಸದಸ್ಯ ಸೋಮಶೇಖರ್, ಮುಖಂಡರಾದ ಬಾನಂದೂರು ಗಂಗಾಧರ್, ವಕೀಲ ಮಂಜೇಶ್‌ಗೌಡ ಮತ್ತಿತರರು ಹಾಜರಿದ್ದರು.31ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಧಾರ್ಮಿಕ ಕಾರ್ಯಕ್ಕೆ ಬೆಂಗಳೂರಿನ ವಿಜಯನಗರ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅವರ ಪುತ್ರ ಪ್ರದೀಪ್ ಎಂ.ಕೃಷ್ಣಪ್ಪ 10 ಲಕ್ಷ ರು.ಗಳ ಸಹಾಯಧನ ಚೆಕ್ ವಿತರಣೆ ಮಾಡಿದರು.