ಕನ್ನಡಪ್ರಭ ವಾರ್ತೆ ಕೋಲಾರ೨೦೨೫ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ೧೮ ಮಂದಿ ಸಾಧಕರನ್ನು ಗುರುತಿಸಿ ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಕಟಿಸಲಾಗಿದೆ.ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಸಾಧಕರ ಆಯ್ಕೆ ನಡೆಯಿತು. ಪ್ರಶಸ್ತಿ ಆಯ್ಕೆಗೆ ಸಮಿತಿ
ಮಾಧ್ಯಮ ವಿಭಾಗ:
ಪತ್ರಿಕೋಧ್ಯಮ ವಿಭಾಗದಲ್ಲಿ ಕೋಲಾರದ ನಾ.ಮಂಜುನಾಥ್, ಕನ್ನಡ ಪರ ಹೋರಾಟಗಾರರ ವಿಭಾಗದಲ್ಲಿ ಮಾಲೂರು ತಾಲೂಕು ನಕ್ಕನಹಳ್ಳಿಯ ವೀರವೆಂಕಟಪ್ಪ, ಸಂಗೀತ ಕ್ಷೇತ್ರದಲ್ಲಿ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಎಸ್.ಮಂಜುನಾಥ್, ಸಾಹಿತ್ಯ ವಿಭಾಗದಲ್ಲಿ ಡಾ.ಕುಪ್ಪನಹಳ್ಳಿ ಎಂ.ಬೈರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.ಕನ್ನಡ ಪರ ಹೋರಾಟಗಾರರ ವಿಭಾಗದಲ್ಲಿ ಬಂಗಾರಪೇಟೆಯ ಕೆ.ಎಂ.ವಿ.ಪ್ರಸಾದ್, ಯೋಗ ಮತ್ತು ಸಮಾಜಸೇವಾ ವಿಭಾಗದಲ್ಲಿ ಶ್ರೀನಿವಾಸಪುರದ ಮಾಯಾ ಬಾಲಚಂದ್ರ, ಸಮಾಜಸೇವೆಯಲ್ಲಿ ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ ಮತ್ತು ನಿವೃತ್ತ ಪೊಲೀಸರ ಸಂಘದ ಅಧ್ಯಕ್ಷ ವೆ.ಮು.ಸೊಣ್ಣಪ್ಪ ಆಯ್ಕೆಯಾಗಿದ್ದಾಗೆ.
ಶಿಕ್ಷಣ- ಆಯುರ್ವೇದ ಕ್ಷೇತ್ರಆಯುರ್ವೇದ ಕ್ಷೇತ್ರದಲ್ಲಿ ಮುಳಬಾಗಿಲು ಹರೀಶ್ ಬಾಬು, ಶಿಕ್ಷಣ ಕ್ಷೇತ್ರದಲ್ಲಿ ಮುಳಬಾಗಿಲು ಶಾರದಾ ವಿದ್ಯಾ ಪೀಠದ ಟಿ.ಎಸ್.ರಮೇಶ್, ಕನ್ನಡ ಪರ ಹೋರಾಟಗಾರರ ವಿಭಾಗದಲ್ಲಿ ಕೆಜಿಎಫ್ ನ ಕೆ.ಲಕ್ಷ್ಮಣ ಕುಮಾರ್, ಗಮಕ ಕ್ಷೇತ್ರದಲ್ಲಿ ಬೇತಮಂಗಲ ಆರ್.ವೆಂಕಟರವಣಪ್ಪ ಮತ್ತು ಕೃಷಿ ಕ್ಷೇತ್ರದಲ್ಲಿ ಮಾಲೂರು ತಾಲೂಕು ನೀಲಕಂಠ ಅಗ್ರಹಾರದ ಬಿಳಿ ರಾಗಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.