ಒಕ್ಕಲಿಗ ಕಾಲಕ್ಕೆ ತಕ್ಕಂತೆ ಬದಲಾಗಬೇಕು

KannadaprabhaNewsNetwork |  
Published : Jun 23, 2025, 11:50 PM IST
೨೧ಕೆಎಲ್‌ಆರ್-೪ಕೋಲಾರದ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಉದ್ಯಮ ಒಕ್ಕಲಿಗ ಸಂಸ್ಥೆಯಿಂದ ಪ್ರತಿನಿಧಿಗಳ-ಹೂಡಿಕೆದಾರರ ೨ನೇ ವಾರ್ಷಿಕ ಸಮಾವೇಶದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ್ ಮಹಾಸ್ವಾಮೀಜಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಒಕ್ಕಲಿಗರು ಉದ್ಯೋಗಿಗಳಾಗುವ ಬದಲಾಗಿ ಉದ್ಯಮಿಗಳಾಗಿ ಸಮಾಜದ ಸುಧಾಕರಾಗಬೇಕು.ಉದ್ಯಮಿ ಒಕ್ಕಲಿಗ ಸ್ಥಾಪನೆಯಾದ ೨ನೇ ವರ್ಷದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ, ಒಕ್ಕಲಿಗರು ಎಚ್ಚೆತ್ತುಕೊಳ್ಳದಿದ್ದರೆ ಕಾಲದ ತುಳಿತಕ್ಕೆ ಗುರಿಯಾಗಬೇಕಾಗುತ್ತದೆ. ಒಕ್ಕಲಿಗರು ಆಧುನಿಕತೆಗೆ ಹೊಂದಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರ ಸಮುದಾಯದವರ ಹೃದಯಗಳನ್ನು ಬೆಸುಗೆ ಮಾಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಕರೆ ನೀಡಿದರು.ನಗರದ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಉದ್ಯಮ ಒಕ್ಕಲಿಗ ಸಂಸ್ಥೆಯಿಂದ ಪ್ರತಿನಿಧಿಗಳ-ಹೂಡಿಕೆದಾರರ ೨ನೇ ವಾರ್ಷಿಕ ಸಮಾವೇಶ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸಮುದಾಯದ ಶಿಕ್ಷಣ ಪಡೆದು ವಿಕಸನ ಹೊಂದುವ ಮೂಲಕ ಸಂಶೋಧನೆಗಳಿಗೆ ತಕ್ಕಂತೆ ಬದಲಾಗುವಂತಾಗಬೇಕು. ಉದ್ಯೋಗಿಗಳಾಗುವ ಬದಲಾಗಿ ಉದ್ಯಮಿಗಳಾಗಿ ಸಮಾಜದ ಸುಧಾಕರಾಗಬೇಕು ಎಂದು ಹೇಳಿದರು.ಮಾರ್ಗದರ್ಶನ ಪಡೆಯಿರಿ

ಉದ್ಯಮಿ ಒಕ್ಕಲಿಗ ಸಂಸ್ಥಾಪಕ ಜಯರಾಮ್ ರಾಯಪುರ ಅಧಿಕಾರಿಯಾಗಿದ್ದರೂ ಸಹ ಸಮುದಾಯದ ಉನ್ನತಿಗಾಗಿ ಭವಿಷ್ಯದ ದೂರದೃಷ್ಟಿಯ ಚಿಂತನೆ ಮಾಡಿ ಈ ಸಂಸ್ಥೆ ಸ್ಥಾಪಿಸಿ ಮಾದರಿಯಾಗಿದ್ದಾರೆ, ಆಸಕ್ತರು ಉದ್ಯಮಿಗಳಾಲು ಬಯಸುವವರು ಇವರ ಮಾರ್ಗದರ್ಶನದಲ್ಲಿ ಈ ಸಂಸ್ಥೆಯ ಸಹಕಾರ ಸದ್ಬಳಿಸಿಕೊಂಡು ಮುಂದುವರೆಯುವಂತಾಗಬೇಕೆಂದು ಕಿವಿಮಾತು ತಿಳಿಸಿದರು.ಉದ್ಯಮಿ ಒಕ್ಕಲಿಗ ಸ್ಥಾಪನೆಯಾದ ೨ನೇ ವರ್ಷದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ, ಒಕ್ಕಲಿಗರು ಎಚ್ಚೆತ್ತುಕೊಳ್ಳದಿದ್ದರೆ ಕಾಲದ ತುಳಿತಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಒಕ್ಕಲಿಗರು ಆಧುನಿಕತೆಗೆ ಮತ್ತು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಬದಲಾಗಬೇಕಾಗಿದೆ ಎಂದರು.ನಂದಿ ತಪ್ಪಲಿನಲ್ಲಿ ಶಾಲೆ ಸ್ಥಾಪನೆ

ಕೋಲಾರ-ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗೆ ಪೂರಕವಾಗಿ ಕಡುಬಡವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿಶಾಲೆ ನಂದಿ ಬೆಟ್ಟದ ತಪಲಿನಲ್ಲಿ ಸ್ಥಾಪಿಸಲು ಉದ್ದೇಶಿಸಿದೆ, ಶೇ.೮೦ರಷ್ಟು ಸಮುದಾಯ ಮಕ್ಕಳಿಗೆ ಹಾಗೂ ಶೇ.೨೦ ರಷ್ಟು ಹೊರಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು. ಶಾಲೆಯನ್ನು ಅಕ್ಸೇಸಲ್ ಪಾಲುದಾರ ಪ್ರಶಾಂತ ಪ್ರಕಾಶ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಸಚಿವ ಡಾ.ಎಂ.ಸಿ.ಸುಧಾಕರ್, ಎಂಎಲ್ಸಿ ಇಂಚರ ಗೋವಿಂದರಾಜು. ಅಕ್ಸೇಸಲ್ ಪಾಲುದಾರ ಪದ್ಮಶ್ರೀ ಪುರಸ್ಕೃತ ಪ್ರಶಾಂತ್ ಪ್ರಕಾಶ್, ಫಸ್ಟ್ ಸರ್ಕಲ್ ಮುಖ್ಯಸ್ಥರಾದ ಸಿಎಂಆರ್ ಶ್ರೀನಾಥ್, ಬಿ.ಜೆ.ರಾಮಕೃಷ್ಣಪ್ಪ ಕೆ.ವಿ.ಶಂಕರಪ್ಪ, ಚೌಡೇಶ್ವರಿರಾಮು, ಅ.ಮು.ಲಕ್ಷ್ಮೀನಾರಾಯಣ, ಆಂಜನೇಯರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ಡಿ.ವಿ.ರಮೇಶ್, ಯಲುವಳ್ಳಿ ಎನ್.ರಮೇಶ್, ಇಂಟರ್ ನ್ಯಾಷನಲ್ ಅಕಾಡಮಿ ಡಿ.ಮುನಿರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!