ಒಕ್ಕಲಿಗರ ವಿದ್ಯಾಸಂಸ್ಥೆ ಪಾಪು ಸಿಂಡಿಕೇಟ್‌ಗೆ ತೆಕ್ಕೆಗೆ

KannadaprabhaNewsNetwork |  
Published : Jul 21, 2026, 01:45 AM IST
ಪೊಟೋ೨೦ಸಿಪಿಟಿ೨: ಸೋಮವಾರ ಬೆಳಗ್ಗಿನ ಜಾವದವರೆಗೆ ನಡೆದ ಮತ ಎಣಿಕೆ ಕಾರ್ಯ. | Kannada Prabha

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಟಿ.ಕೆ.ಯೋಗೇಶ್ (ಪಾಪು) ಸಿಂಡಿಕೇಟ್‌ನ ೧೧ ನಿರ್ದೇಶಕರು ಜಯಗಳಿಸಿದ್ದು, ಆಡಳಿತ ಮಂಡಳಿ ಎರಡನೇ ಬಾರಿ ಪಾಪು ಸಿಂಡಿಕೇಟ್ ಪಾಲಾಗಿದೆ. ಇವರೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ

ಚನ್ನಪಟ್ಟಣ: ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಟಿ.ಕೆ.ಯೋಗೇಶ್ (ಪಾಪು) ಸಿಂಡಿಕೇಟ್‌ನ ೧೧ ನಿರ್ದೇಶಕರು ಜಯಗಳಿಸಿದ್ದು, ಆಡಳಿತ ಮಂಡಳಿ ಎರಡನೇ ಬಾರಿ ಪಾಪು ಸಿಂಡಿಕೇಟ್ ಪಾಲಾಗಿದೆ. ಇವರೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ೧೫ ನಿರ್ದೇಶಕ ಸ್ಥಾನಗಳಿಗೆ ಟಿ.ಕೆ.ಯೋಗೇಶ್ ಸಿಂಡಿಕೇಟ್‌ನಿಂದ ೧೫ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ೧೩ ಮಂದಿ ಸೇರಿದಂತೆ ಒಟ್ಟು ೨೮ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಇವರಲ್ಲಿ ಪಾಪು ಸಿಂಡಿಕೇಟ್‌ನಿಂದ ೧೧ ಮಂದಿ ಹಾಗೂ ೪ ಸ್ವತಂತ್ರ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ೩೪೦೦ ಮತದಾರರ ಮತದಾನದ ಹಕ್ಕನ್ನು ಹೊಂದಿದ್ದು, ಚುನಾವಣೆಯಲ್ಲಿ ೨೭೬೦ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.

೧೧ ನಿರ್ದೇಶಕರು ಆಯ್ಕೆ: ಚುನಾವಣೆ ಎದುರಿದ್ದ ೧೫ ಅಭ್ಯರ್ಥಿಗಳಲ್ಲಿ ಮಾಜಿ ಅಧ್ಯಕ್ಷ ಟಿ.ಕೆ. ಯೋಗೇಶ್(ಪಾಪು), ಮಾಜಿ ಖಜಾಂಚಿ ಎಸ್.ಟಿ. ನಾರಾಯಣಗೌಡ, ಮಾಜಿ ನಿರ್ದೇಶಕರಾದ ಬಿ.ವಿ. ಚಂದ್ರಯ್ಯ, ಮೆಹರೀಶ್(ಮನು), ಟಿ.ಪಿ. ಹನುಮಂತರಾಜು, ಎಂ.ಎ. ಮಾಲಿನಿ, ನಾಗವಾರ ಶಂಭೂಗೌಡ, ಚಕ್ಕೆರೆ ವೆಂಕಟರಾಮೇಗೌಡ, ಎ.ಎಂ. ಅನಂತಮೂರ್ತಿ, ಎನ್.ಎಸ್. ಬಸವರಾಜು, ನಾಗವಾರ ರಂಗಸ್ವಾಮಿ, ಸೇರಿ ೧೧ ನಿರ್ದೇಶಕರು ಜಯಭೇರಿ ಭಾರಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದ ೧೩ ಅಭ್ಯರ್ಥಿಗಳಲ್ಲಿ ಟಿ.ಎಸ್. ಅಭಿಲಾಷ್, ಪುಟ್ಟರಾಜೇಗೌಡ, ಡಿ.ಎಂ. ರವಿ, ಯುಪಿ ಧರಣೀಶ್ ಸೇರಿ ನಾಲ್ವರು ಜಯಗಳಿಸಿದರು.

ಬೆಳಗಿನನ ಜಾವದವರೆಗೆ ಮತ ಎಣಿಕೆ: ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ಬೆಳಗ್ಗೆಯಿಂದ ಸಂಜೆ ೪ ಗಂಟೆಯವರಿಗೆ ಚುನಾವಣೆ ನಡೆದಿದ್ದು, ನಂತರ ಮತ ಎಣಿಕೆ ನಿಗದಿಯಾಗಿತ್ತು. ಆದರೆ, ಮತ ಎಣಿಕೆ ಕಾರ್ಯ ಸಂಪೂರ್ಣ ಮುಗಿದು ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗುವ ವೇಳೆ ಸೋಮವಾರ ಬೆಳಗ್ಗಿನ ಜಾವ ೫.೩೦ಗಂಟೆಯಾಗಿತ್ತು.

ಪೊಟೋ೨೦ಸಿಪಿಟಿ೨:

ಚನ್ನಪಟ್ಟಣದಲ್ಲಿ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಮ್ ವಾಂಗ್ಚೂಕ್ ಸತ್ಯಾಗ್ರಹಕ್ಕೆ ಸಿಪಿಐ(ಎಂ) ಬೆಂಬಲ
ವಿದ್ಯಾರ್ಥಿಗಳ ಪಾಠಕ್ಕೆ ಕುತ್ತು ತಂದ ಎಸ್ಐಆರ್