ನೂತನ ಪಿಂಚಣಿಯೋಜನೆಯಿಂದ ಹಳೆಯ ಪಿಂಚಣಿಯೋಜನೆ ಜಾರಿ, ಇದು ನಮ್ಮೆಲ್ಲರ ಧ್ವನಿ
ಕೊಪ್ಪಳ: ಹಳೆ ಪಿಂಚಣಿ ಯೋಜನೆ ಜಾರಿಗೆ ಹಕ್ಕೊತ್ತಾಯ ಮಾಡಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಹೇಳಿದರು.
ನಗರದ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜು. ೧೧ ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಜತೆಗೆ ಮುಖ್ಯಮಂತ್ರಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಸಂಘದ ಬಹುದಿನಗಳ ಬೇಡಿಕೆ ನೂತನ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆ ಜಾರಿಗೆ ಹಕ್ಕೊತ್ತಾಯ ಮಾಡಲಿದ್ದೇವೆ. ಜು.೨೬ ರಂದು ಕೊಪ್ಪಳದಲ್ಲಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಜರುಗಲಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಕಾರ್ಯಕ್ರಮ ಯಲಬುರ್ಗಾ ತಾಲೂಕಿನ ಕ್ಯಾನ್ಸರ್ ಪೀಡಿತ ನೌಕರನಿಗೆ ಸುಮಾರು ಎರಡು ಲಕ್ಷ ಕರ್ನಾಟಕ ಆರೋಗ್ಯ ಸಂಜೀವಿನಿಯಲ್ಲಿ ಪಾವತಿಸುವಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶ್ರಮಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಸಂಘ ಕೆಲಸ ಮಾಡುತ್ತಿದೆ. ಜಿಲ್ಲೆಯ ಆಸ್ಪತ್ರೆಗಳನ್ನು ಅದರಲ್ಲಿ ಸೇರಿಸುವ ಕಾರ್ಯ ನೌಕರರ ಸಂಘದಿಂದ ಮಾಡುತ್ತಿದ್ದೇವೆ ಎಂದರು.
ಕಾರಟಗಿ ತಾಲೂಕಾಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ, ನೂತನ ಪಿಂಚಣಿಯೋಜನೆಯಿಂದ ಹಳೆಯ ಪಿಂಚಣಿಯೋಜನೆ ಜಾರಿ, ಇದು ನಮ್ಮೆಲ್ಲರ ಧ್ವನಿ, ಈ ನಿಟ್ಟಿನಲ್ಲಿ ಅತೀ ಹೆಚ್ಚು ನೌಕರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೌಕರರ ಸಂಘದ ಮಹತ್ವದ ಕಾರ್ಯಕ್ಕೆ ಕೈ ಜೋಡಿಸೋಣ ಎಂದರು.
ಯಲಬುರ್ಗಾ ತಾಲೂಕಾಧ್ಯಕ್ಷ ಶಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಆದಷ್ಟು ಸರ್ಕಾರಿ ನೌಕರರನ್ನು ರಜಾ ದಿನಗಳಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವಂತೆ ಮಾಡಬೇಕಿದೆ. ಒತ್ತಡದ ಇಂದಿನ ದಿನಗಳಲ್ಲಿ ಬದುಕುತ್ತಿರುವ ನಾವೆಲ್ಲರೂ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುವಂಥ ಅದೆಷ್ಟು ಸರ್ಕಾರಿ ನೌಕರರು ನಮ್ಮ ಮಧ್ಯೆ ಇದ್ದಾರೆ. ಅಧಿಕಾರಿಗಳು ತಮ್ಮಅಧಿಕಾರ ಬಳಸಿ ನೌಕರರ ಮೇಲೆ ಒತ್ತಡ ಹಾಕಿ ರಜಾ ದಿನಗಳಲ್ಲೂ ಕೆಲಸ ಮಾಡುತ್ತಿರುವುದರ ಕುರಿತು ಸಂಘ ಧ್ವನಿಯಾಗಬೇಕಿದೆ. ಇದರೊಂದಿಗೆ ಕೆನೆಪದರ ನೀತಿಯಿಂದ ಸರ್ಕಾರಿ ನೌಕರರ ಮಕ್ಕಳಿಗೆ ಅನುಕೂಲವಾಗುವ, ಕಲ್ಯಾಣ ಕರ್ನಾಟಕ ಭಾಗದ ನಮ್ಮ ಸರ್ಕಾರಿ ನೌಕರರಿಗೆ ಅರ್ಹತೆ ಇದ್ದಾಗಲೂ ಮುಂಬಡ್ತಿಯಲ್ಲಿ ವಿಳಂಬವಾಗುತ್ತಿವೆ, ೩೭೧ ಜೆ ಸಮರ್ಪಕವಾಗಿ ಅನುಷ್ಠಾನವಾಗಲಿ ಎಂದರು.
ಕನಕಗಿರಿ ತಾಲೂಕಾಧ್ಯಕ್ಷೆ ಶಂಶಾದ ಬೇಗಂ, ಗಂಗಾವತಿ ತಾಲೂಕಾಧ್ಯಕ್ಷ ಶಿವಶಂಕರ ಕಲ್ಮಠ, ಸರ್ದಾರ ಅಲಿ ಮಾತನಾಡಿದರು. ಗೌರವಾಧ್ಯಕ್ಷ ಸಿದ್ಧಪ್ಪ ಮೆಳ್ಳಿ, ಉಪಾಧ್ಯಕ್ಷ ಗೋಪಾಲಕೃಷ್ಣ ಮುಂಡರಗಿ, ರಾಜ್ಯ ಪದಾಧಿಕಾರಿ ಮಂಜುನಾಥ, ಹೇಮಣ್ಣ ಕವಲೂರ, ಖಚಾಂಚಿ ಜಯತೀರ್ಥದೇಸಾಯಿ, ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು, ಚುನಾಯಿತ ನಿರ್ದೇಶಕರಿದ್ದರು.
ಭಾರತಿ ಹವಳೆಪ್ರಾರ್ಥಿಸಿದರು. ನಾಗರಾಜ ನಾಯಕಡಿ ಡೊಳ್ಳಿನ ಸ್ವಾಗತಿಸಿದರು. ಯಮನೂರಪ್ಪ ಕಟಗಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.