ಆಲಂಬನ ವೃದ್ಧಾಶ್ರಮಕ್ಕೆ 6.5 ಲಕ್ಷ ರು. ಮೌಲ್ಯದ ವಿದ್ಯುತ್ ಸಾಮಾಗ್ರಿ ಕೊಡುಗೆ

KannadaprabhaNewsNetwork |  
Published : Jul 31, 2026, 02:45 AM IST
ಆಲಂಬನ ವೃದ್ದಾಶ್ರಮಕ್ಕೆ ವಿದ್ಯುತ್‌ ಸಾಮಾಗ್ರಿ ಹಸ್ತಾಂತರ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಮಂಗಳೂರು ರೋಟರಿ ಕ್ಲಬ್ ಮೆಟ್ರೊ ಸಂಸ್ಥೆ ವತಿಯಿಂದ ‘ಚಿರಂತನ ಚಾರಿಟೇಬಲ್ ಟ್ರಸ್ಟ್’ ನಡೆಸುವ ವಿಟ್ಲ ವೃದ್ಧಾಶ್ರಮ ‘ಆಲಂಬನಕ್ಕೆ’ 6.5 ಲಕ್ಷ ರು. ಮೌಲ್ಯದ ವಿದ್ಯುತ್ ಸಾಮಾಗ್ರಿಗಳ ಕೊಡುಗೆಯನ್ನು ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹಸ್ತಾಂತರಿಸಿದರು.

ಮಂಗಳೂರು: ಮಂಗಳೂರು ರೋಟರಿ ಕ್ಲಬ್ ಮೆಟ್ರೊ ಸಂಸ್ಥೆ ವತಿಯಿಂದ ‘ಚಿರಂತನ ಚಾರಿಟೇಬಲ್ ಟ್ರಸ್ಟ್’ ನಡೆಸುವ ವಿಟ್ಲ ವೃದ್ಧಾಶ್ರಮ ‘ಆಲಂಬನಕ್ಕೆ’ 6.5 ಲಕ್ಷ ರು. ಮೌಲ್ಯದ ವಿದ್ಯುತ್ ಸಾಮಾಗ್ರಿಗಳ ಕೊಡುಗೆಯನ್ನು ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹಸ್ತಾಂತರಿಸಿದರು. ಮಾಜಿ ಜಿಲ್ಲಾ ಗವರ್ನರ್ ಪಿ. ರಂಗನಾಥ್ ಭಟ್ ತನ್ನ ಕ್ಲಬ್ ಪರವಾಗಿ ಒಂದು ಲಕ್ಷ ರು. ದೇಣಿಗೆ ನೀಡಿದರು.

ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಅಧ್ಯಕ್ಷ ಶ್ಯಾಮ್ ಪ್ರಕಾಶ್, ಸಹಾಯಕ ಗವರ್ನರ್ ಡಾ.ಅರವಿಂದ್ ಪಿ., ಮಾಜಿ ಜಿಲ್ಲಾ ಗವರ್ನರ್ ಪಿ.ರಂಗನಾಥ್ ಭಟ್, ಕಾರ್ಯದರ್ಶಿ ನರೇಂದ್ರ ಪ್ರಭು, ರೋಟರಿ ಕ್ಲಬ್ ವಿಟ್ಲದ ಅಧ್ಯಕ್ಷ ಕ್ಯಾಪ್ಟನ್ ದಾಸಪ್ಪ ಪೂಜಾರಿ, ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್, ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಹಾಗೂ ರೋಟರಿ ಕ್ಲಬ್ ವಿಟ್ಲದ ಹಲವು ಸದಸ್ಯರು ಹಾಗೂ ಬಂಟ್ವಾಳದ ರಿತೇಶ್ ಬಾಳಿಗ ಇದ್ದರು.

ಚಿರಂತನದ ಆಡಳಿತ ಟ್ರಸ್ಟಿ ಭಾರಾವಿ ದೇರಾಜೆ ಸಂಸ್ಥೆ ನಡೆದು ಬಂದ ಬಗ್ಗೆ, ಪ್ರಸ್ತುತ ಸಾಲಿನಲ್ಲಿನ ರೋಟರಿ ಕ್ಲಬ್ ಬೆಳ್ತಂಗಡಿಯ ಡಾ.ಗೋವಿಂದ ಕಿಶೋರ್ ಅವರ ದೇಣಿಗೆ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಕಾರ್ಯದರ್ಶಿ ಜಗನ್ನಾಥ್‌ ಅರಿಯಡ್ಕ ಅವರ ರೇಖಾಚಿತ್ರಗಳ ಕೊಡುಗೆಯನ್ನು ಸ್ಮರಿಸಿದರು.

-----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ವೆಂಕಟರಾಮ್ ಕಟ್ಟಿಗೆ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ
ಸಮಾಜಕ್ಕೆ ಅರ್ಪಿತವಾದ ಜೀವನವೇ ಪಾವನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು