ಸಾಮಾನ್ಯವಾಗಿ ಕಡಲಾಮೆ ಮೊಟ್ಟೆ ಇಟ್ಟ 45ರಿಂದ 50 ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಆದರೆ ಪರಿಸರ ವೈಪರೀತ್ಯದ ಪರಿಣಾಮ 55 ದಿನಗಳ ನಂತರ ಮರಿಯೊಡೆದು ಹೊರ ಬರುತ್ತಿರುವುದು ಮರೈನ್ ಸೆಲ್‌ಗೆ ಇನ್ನೊಂದು ಹೊಸ ಆತಂಕಕ್ಕೂ ಕಾರಣವಾಗಿದೆ. ಹಾಗೆ ಕರಾವಳಿಯಲ್ಲಿ ಕಳೆದ ವರ್ಷಗಳಿಂದ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿರುವದರಿಂದ ಹೆಣ್ಣು ಮರಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಮೊಟ್ಟೆಗೆ ಮರಳಿನಲ್ಲಿ 27 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ ಸಿಕ್ಕರೆ ಗಂಡು ಮರಿಗಳು, 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣಾಂಶ ಸಿಕ್ಕರೆ ಹೆಣ್ಣು ಮರಿ ಹುಟ್ಟುತ್ತದೆ. ಉಷ್ಣಾಂಶ ಹೆಚ್ಚು ಮೊಟ್ಟೆಗಳಿಗೆ ಸ್ಪರ್ಶಿಸುವದರಿಂದ ಹೆಣ್ಣು ಮರಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದು ಆಮೆಗಳ ಸಂತತಿಯ ಸರಪಣಿಗೆ ತೊಡಕಾಗಿ ಪರಿಗಣಿಸಿದೆ.
ಹವಾಮಾನ ವೈಪರೀತ್ಯ ಹೊಡೆತಕ್ಕೆ ಸಂಕಷ್ಟ । ಆಲಿವ್ ರಿಡ್ಲೇ ರಕ್ಷಣೆಗೆ ಮರೈನ್ ಸೆಲ್ ಹೋರಾಟ । ಕರಾವಳಿಯಲ್ಲಿ ಉಷ್ಣಾಂಶ ಏರಿಕೆ; ಕಡಲಾಮೆಗಳ ಸಂತತಿ ಸರಪಳಿಗೆ ತೊಡಕು । ಅಂಕೋಲಾದಲ್ಲಿ ಕಡಿಮೆಯಾಗುತ್ತಿರುವ ಕಡಲಾಮೆಗಳ ಹೆಜ್ಜೆ ಗುರುತು
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾ
ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೇ ಪ್ರಭೇದದ ಕಡಲಾಮೆಗಳ ಸಂತತಿ ರಕ್ಷಿಸುವ ಕಾರ್ಯಾಚರಣೆ ಅಂಕೋಲಾದ ಕಡಲ ತೀರದಲ್ಲಿ ನಡೆಯುತ್ತಿದ್ದು, ಈ ಬಾರಿ ಮರಿಗಳ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಶೇ.60ರಷ್ಟು ಕಡಿಮೆಯಾಗಿದೆ. ಇದಕ್ಕೆ ಅತಿಯಾದ ಹವಾಮಾನ ವೈಪರೀತ್ಯ ಸಹಿತ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
2025-26ನೇ ಸಾಲಿನಲ್ಲಿ ಅಂಕೋಲಾದ 13 ಸ್ಥಳಗಳಲ್ಲಿ ಕಡಲಾಮೆಗಳು 1347 ಮೊಟ್ಟೆಗಳನ್ನಿಟ್ಟಿದ್ದು ಕೃತಕ ಗೂಡಿನ ವ್ಯವಸ್ಥೆ ಮಾಡಿ 1045 ಮರಿಗಳನ್ನು ರಕ್ಷಿಸಿ ಸಮುದ್ರಕ್ಕೆ ಬಿಡಲಾಗಿದೆ. 2024-25ನೇ ಸಾಲಿನಲ್ಲಿ 34 ಸ್ಥಳಗಳಲ್ಲಿ ಮೊಟ್ಟೆ ಇಟ್ಟಿದ್ದು, ಹಿಂದಿನ ವರ್ಷಗಳಿಗಿಂತ ಶೇ.60 ರಷ್ಟು ಕಡಿಮೆಯಾಗಿದೆ.
ಮಂಜಗುಣಿಯಲ್ಲಿ ಅತಿ ಹೆಚ್ಚು ಮೊಟ್ಟೆಗಳನ್ನು ಇಟ್ಟಿದ್ದು, ಸಮುದ್ರದ ಸಂಗಮ ಪ್ರದೇಶವಾದ ಈ ಪ್ರದೇಶವು ಕಡಲಾಮೆಗಳಿಗೆ ಮೊಟ್ಟೆಗಳನ್ನಿಡಲು ಹಾಟ್‌ಸ್ಪಾಟ್ ಪ್ರದೇಶವಾಗಿರುವುದು ಕಂಡು ಬಂದಿದೆ.
ಇಲ್ಲಿನ ಕಡಲ ಕಿನಾರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಡಲಾಮೆಗಳು ಮೊಟ್ಟೆ ಇಡಲು ಬರುತ್ತಿವೆ. ನವೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕಡಲಿನಿಂದ ಹೆಣ್ಣು ಆಲಿವ್ ರಿಡ್ಲೇ ಆಮೆಗಳು ಮೊಟ್ಟೆ ಇಡಲು ಸುರಕ್ಷಿತ ತಾಣಗಳನ್ನು ಹುಡುಕಿಕೊಂಡು ದಡಕ್ಕೆ ಬರುತ್ತವೆ. ಒಂದುವರೆ ಅಡಿಯಷ್ಟು ಆಳದ ಗುಂಡಿ ಮಾಡಿ ಅದರಲ್ಲಿ ಮೊಟ್ಟೆ ಇಟ್ಟು ಮಣ್ಣು ಹಾಕಿ ಮತ್ತೆ ಸಮುದ್ರಕ್ಕೆ ತೆರಳುತ್ತವೆ. ಮೊಟ್ಟೆ ಇಟ್ಟ 45ರಿಂದ 50 ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಮೊಟ್ಟೆ ಇಡುವ ಪ್ರಕ್ರಿಯೆ ಹಾಗೂ ಮೊಟ್ಟೆಯೊಡೆದು ಹೊರಬರುವ ಪ್ರಕ್ರಿಯೆಯೂ ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ನಡೆಯುತ್ತದೆ. ಈ ಜಾಗಗಳಲ್ಲಿ ವಾಚರ್‌ಗಳನ್ನು ನೇಮಿಸಿ ಮೊಟ್ಟೆಗಳ ರಕ್ಷಣೆ ಮಾಡಲಾಗುತ್ತದೆ.ಸಾಮಾನ್ಯವಾಗಿ ಕಡಲಾಮೆ ಮೊಟ್ಟೆ ಇಟ್ಟ 45ರಿಂದ 50 ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಆದರೆ ಪರಿಸರ ವೈಪರೀತ್ಯದ ಪರಿಣಾಮ 55 ದಿನಗಳ ನಂತರ ಮರಿಯೊಡೆದು ಹೊರ ಬರುತ್ತಿರುವುದು ಮರೈನ್ ಸೆಲ್‌ಗೆ ಇನ್ನೊಂದು ಹೊಸ ಆತಂಕಕ್ಕೂ ಕಾರಣವಾಗಿದೆ. ಹಾಗೆ ಕರಾವಳಿಯಲ್ಲಿ ಕಳೆದ ವರ್ಷಗಳಿಂದ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿರುವದರಿಂದ ಹೆಣ್ಣು ಮರಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಮೊಟ್ಟೆಗೆ ಮರಳಿನಲ್ಲಿ 27 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ ಸಿಕ್ಕರೆ ಗಂಡು ಮರಿಗಳು, 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣಾಂಶ ಸಿಕ್ಕರೆ ಹೆಣ್ಣು ಮರಿ ಹುಟ್ಟುತ್ತದೆ. ಉಷ್ಣಾಂಶ ಹೆಚ್ಚು ಮೊಟ್ಟೆಗಳಿಗೆ ಸ್ಪರ್ಶಿಸುವದರಿಂದ ಹೆಣ್ಣು ಮರಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದು ಆಮೆಗಳ ಸಂತತಿಯ ಸರಪಣಿಗೆ ತೊಡಕಾಗಿ ಪರಿಗಣಿಸಿದೆ.ಮೊಟ್ಟೆ ಇಡುವ ತಾಣಗಳು
ಅಂಕೋಲಾದ ಮಂಜಗುಣಿಯಲ್ಲಿ 9 ಸ್ಥಳಗಳಲ್ಲಿ, ಬೆಳಂಬಾರದಲ್ಲಿ 2 ಸ್ಥಳ, ಭಾವಿಕೇರಿ ಹಾಗೂ ಬೇಲೆಕೇರಿಯಲ್ಲಿ ತಲಾ ಒಂದು ಒಟ್ಟು 13 ಕಡೆಗಳಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶಗಳನ್ನು ಮರೈನ್ ಸೆಲ್ ಗುರುತಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.