ಒಲಿಂಪಿಯಾಡ್ ಪ್ರಶಸ್ತಿ: ಮೈಸೂರು ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : May 28, 2025, 12:42 AM IST
45 | Kannada Prabha

ಸಾರಾಂಶ

ಮೈಸೂರು: 2024-25ನೇ ಸಾಲಿನ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಮೈಸೂರಿನ ಮೂವರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಮೈಸೂರು: 2024-25ನೇ ಸಾಲಿನ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಮೈಸೂರಿನ ಮೂವರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಕೆಎನ್ಸಿಲ ಇನ್ನೋವೇಟಿವ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿ ವಿ ಸಿಧ್ವಿಕ್ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ನೂಲ್ಲಿ ಪ್ರಥಮ ರ್ಯಾಂ ಕ್‌‌ಪಡೆದು ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣಪತ್ರವನ್ನು ಗಳಿಸಿದ್ದಾರೆ. ರೋಟರಿ ಮಿಡ್ಟೌಷನ್ ಅಕಾಡೆಮಿಯ ಎ.ಆರ್‌. ತನ್ಮಯಿ ಅಂತಾರಾಷ್ಟ್ರೀಯ ಹಿಂದಿ ಒಲಿಂಪಿಯಾಡ್ನೀಲ್ಲಿ ಎರಡನೇ ರಯಾಂ ಕ್‌‌ ಪಡೆದು ಬೆಳ್ಳಿಯ ಪದಕ ಮತ್ತು ಮೆರಿಟ್ ಪ್ರಮಾಣಪತ್ರವನ್ನು ಪಡೆದರು ಮತ್ತು ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ಮೌರ್ಯ ಗೌತಮ್ ಸಮಾಜ ಅಧ್ಯಯನ ಶಾಲಾ ಒಲಿಂಪಿಯಾಡ್ನೀಲ್ಲಿ ಮೂರನೇ ರ್ಯಾಂ ಕ್‌‌ಪಡೆದು ಕಂಚಿನ ಪದಕ ಮತ್ತು ಮೆರಿಟ್ ಪ್ರಮಾಣ ಪತ್ರವನ್ನು ಗಳಿಸಿದ್ದಾರೆ.

ಈ ವರ್ಷದ ಎಸ್ಓಾಎಫ್ ಒಲಿಂಪಿಯಾಡ್ನಸಲ್ಲಿ ಮೈಸೂರಿನ 30,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 72 ದೇಶಗಳ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೆಎನ್ಸಿಿ ಇನ್ನೋವೇಟಿವ್ ಗ್ಲೋಬಲ್ ಶಾಲೆ; ಪೂರ್ಣ ಚೇತನ ಪಬ್ಲಿಕ್ ಸ್ಕೂಲ್, ಸೇಂಟ್ ಜೋಸೆಫ್ ಸ್ಕೂಲ್, ರೋಟರಿ ಮಿಡ್ಟೌನನ್ ಅಕಾಡೆಮಿ ಸೇರಿದಂತೆ ಮೈಸೂರಿನ ಪ್ರಮುಖ ಶಾಲೆಗಳು ಎಸ್ಓರಎಫ್ ಒಲಿಂಪಿಯಾಡ್ನರಲ್ಲಿ ಭಾಗವಹಿಸಿದ್ದವು.

2024-25ರ ಶೈಕ್ಷಣಿಕ ವರ್ಷಕ್ಕೆ ವಿಜೇತರು, ಅವರ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಗೌರವಿಸಲು ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ನವದೆಹಲಿಯ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿತ್ತು. 750 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಉದ್ಘಾಟಿಸಿದರು.

ಎಸ್ಒ್ಎಫ್ನಾ ಸಂಸ್ಥಾಪಕ ನಿರ್ದೇಶಕ ಮಹಾಬೀರ್ ಸಿಂಗ್, ಒಲಿಂಪಿಯಾಡ್ ಪರೀಕ್ಷೆಗಳನ್ನು ಆಯೋಜಿಸಿ 27 ವರ್ಷಗಳು ಪೂರ್ಣಗೊಂಡಿವೆ ಎಂದು ಹೆಮ್ಮೆಯಿಂದ ಘೋಷಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ, 72 ದೇಶಗಳಿಂದ, ನಾಲ್ಕು ಸಾವಿರ ನಗರಗಳಿಂದ 96,499 ಶಾಲೆಗಳು ಭಾಗವಹಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

----------------

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್