ಬಾಬೂಜಿ ಜಯಂತಿ ಆಚರಣೆಯಲ್ಲಿ ಲೋಪ: 15ರಂದು ದಸಂಸ ಪ್ರತಿಭಟನೆ

KannadaprabhaNewsNetwork |  
Published : May 11, 2026, 01:45 AM IST
ನರಸಿಂಹರಾಜಪುರ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್  ಘಟಕದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ  ಹಿರಿಯ ಪ್ರಗತಿಪರ ಕೃಷಿಕ ಬಿ.ಕೆ.ಜಾನಕೀರಾಂ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಬದಲ್ಲಿ ಸೀನಿಯರ್ ಛೇಂಬರ್ ರಾಷ್ಟೀಯ ನಿಕಟಪೂರ್ವ ಅಧ್ಯಕ್ಷ ಎಂ.ಆರ್.ಜಯೇಶ್, ರಾಷ್ಟೀಯ ಉಪಾಧ್ಯಕ್ಷೆ ಶಶಿಕಲಾ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಏ.5ರಂದು ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆಯಲ್ಲಿ ಲೋಪ ಎಸಗಿದ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ನಿರ್ಲಕ್ಷ್ಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಮಿತಿಯಿಂದ ಮೇ 15ರಂದು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

- ಕಾರ್ಯಕ್ರಮದಲ್ಲಿ ಒಬ್ಬರು, ಇಬ್ಬರು, ಮೂವರು ಮಾತ್ರ ಭಾಗಿ

- ಮತ್ತೆ ಕೆಲವೆಡೆ ಬಾಬೂಜಿ ಫೋಟೋಗೆ ಪ್ಲಾಸ್ಟಿಕ್‌ ಹೂವಿನ ಹಾರ

- - -

ಕನ್ನಡಪ್ರಭ ವಾರ್ತೆ ಹರಿಹರ

ಏ.5ರಂದು ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆಯಲ್ಲಿ ಲೋಪ ಎಸಗಿದ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ನಿರ್ಲಕ್ಷ್ಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಮಿತಿಯಿಂದ ಮೇ 15ರಂದು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಹೊಳೆಸಿರಿಗೆರೆ, ಬೆಳ್ಳೂಡಿ ಗ್ರಾಪಂ ಕಚೇರಿಯಲ್ಲಿ ನಡೆದ ಬಾಬೂಜಿ ಜಯಂತಿ ಆಚರಣೆ ಸಂದರ್ಭದಲ್ಲಿ ಒಬ್ಬರು, ಯಲವಟ್ಟಿ, ಕಡರನಾಯಕನಹಳ್ಳಿ, ಕುಣಿಬೆಳೆಕೆರೆ, ನಂದಿಗಾವಿ ಗ್ರಾಪಂ ಕಚೇರಿಯಲ್ಲಿ ಇಬ್ಬರು, ಭಾನುವಳ್ಳಿ, ರಾಜನಹಳ್ಳಿ, ಹನಗವಾಡಿ, ಕೊಂಡಜ್ಜಿ, ಉಕ್ಕಡಗಾತ್ರಿ, ಬನ್ನಿಕೋಡು ಗ್ರಾಪಂ ಕಚೇರಿಯಲ್ಲಿ ಮೂವರು ಮಾತ್ರ ಭಾಗವಹಿಸಿದ್ದಾರೆ. ಹೊಳೆಸಿರಿಗೆರೆ, ಹನಗವಾಡಿ, ಕಡರನಾಯಕನಹಳ್ಳಿ, ಕುಂಬಳೂರು, ರಾಜನಹಳ್ಳಿ, ಕೊಂಡಜ್ಜಿ, ಕುಣೆಬೆಳೆಕೆರೆ, ಬೆಳ್ಳೂಡಿ, ಸಾಲಕಟ್ಟೆ, ಸಾರಥಿ, ವಾಸನ ಗ್ರಾಪಂ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಹೂವಿನ ಹಾರವನ್ನೂ ಹಾಕಿಲ್ಲ. ಭಾನುವಳ್ಳಿ ಗ್ರಾಪಂನಲ್ಲಿ ಪ್ಲಾಸ್ಟಿಕ್ ಹಾರ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಹಲವೆಡೆ ಗ್ರಾಪಂ ಪಿಡಿಒ, ಆಡಳಿತಾಧಿಕಾರಿ, ಬಿಲ್ ಕಲೆಕ್ಟರ್ ಹಾಗೂ ಇತರೆ ಸಿಬ್ಬಂದಿ ಆಚರಣೆಯಲ್ಲಿ ಭಾಗವಹಿಸಿಲ್ಲ. ಹಸಿವಿನಿಂದ ಬಳಲುತ್ತಿದ್ದ ಅವಧಿಯಲ್ಲಿ ಹಸಿರು ಕ್ರಾಂತಿಯನ್ನು ಜಾರಿ ಮಾಡಿ, ಆಹಾರ ಧಾನ್ಯ ಉತ್ಪನ್ನ ಹೆಚ್ಚಿಸಿ, ದೇಶದ ವಾಸಿಗಳ ಹಸಿವನ್ನು ನೀಗಿಸಿದ ಖ್ಯಾತಿ ಬಾಬು ಜಗಜೀವನರಾಂ ಅವರದು. ಇಂಥರನ್ನು ಅವಮಾನಿಸಿರುವ ಸಂಬಂಧಿತ ಗ್ರಾಪಂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಪಂ ಸಿಇಒ, ತಾಪಂ ಇಒ ಅವರಿಗೆ ದೂರು ಸಲ್ಲಿಸಲಾಗಿತ್ತು.

ತಾಪಂ ಇಒ ಮೇ 5ರಂದು ಜಿಪಂ ಸಿಇಒ ಅವರಿಗೆ ತಪ್ಪು ಎಸಗಿದ ಗ್ರಾಪಂ ಸಿಬ್ಬಂದಿ ಕುರಿತು ವರದಿ ನೀಡಿದ್ದಾರೆ. ಸದರಿ ವರದಿ ಆಧರಿಸಿ ಜಿಪಂ ಸಿಇಒ ಕೂಡಲೇ ತಪ್ಪಿತಸ್ಥ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವಿರುದ್ಧ ನಿಯಮಾವಳಿ ಪ್ರಕಾರ ಶಿಸ್ತು ಕ್ರಮಕೈಗೊಳ್ಳಬೇಕು. ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ 15 ರಂದು ಜಿಪಂ ಕಚೇರಿ ಮುಂದೆ ಪ್ರತಿಭಟನೆ ಕೈಗೊಳ್ಳುವುದಾಗಿ ಸಂಘಟನೆ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ತಿಳಿಸಿದ್ದಾರೆ.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸ್‌ ಡಿಕ್ಕಿ ನವವಿವಾಹಿತ ಬೈಕ್‌ ಸವಾರ ಸಾವು
ಸಾಮಾಜಿಕ ಸಮಾನತೆ ಸಾರಿದ ಮಹಾ ಮಾನವತಾವಾದಿ ಬಸವಣ್ಣ: ಡಾ.ಮಂಜುನಾಥ