- ಕುಂಚ ಕಲಾವಿದ ಗ್ಯಾಂಗ್‌ಸ್ಟರ್ ಆಗುವ ಕಥೆ: ಗುರುತೇಜ ಶೆಟ್ಟಿ ಹೇಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿಭಾವಂತ ಕುಂಚ ಕಲಾವಿದನೊಬ್ಬ ಗ್ಯಾಂಗ್ ಸ್ಟರ್ ಹೇಗಾದ ಎಂಬ ಕಥಾ ತಿರುಳಿನ ರಾನಿ ಸಿನಿಮಾ ಸೆ.12ರಂದು ರಾಜ್ಯಾದ್ಯಂತ ಸುಮಾರು 200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಸಿನಿಮಾ ನಿರ್ದೇಶಕ ಗುರುತೇಜ ಶೆಟ್ಟಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ಚಂದ್ರಕಾಂತ ಪೂಜಾರಿ, ಉಮೇಶ ಹೆಗ್ಡೆ ನಿರ್ಮಿಸಿರುವ ರಾನಿ ಸಿನಿಮಾ ಈ ವರ್ಷದ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಿದೆ. ರಾನಿ ಸಿನಿಮಾದಲ್ಲಿ ಆಕ್ಷನ್ ಎಲಿಮೆಂಟ್ಸ್ ಹೆಚ್ಚಾಗಿದ್ದರೂ, ಅದರ ಹಿಂದೊಂದು ಕೌಟುಂಬಿಕ ಕಥೆ, ನವಿರಾದ ಪ್ರೇಮಕಥೆ ಸಹ ಇದೆ ಎಂದರು.ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್‌ರಾಜ್ ಇದೇ ಮೊದಲ ಸಲ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕ ರಾಘವ ಅದ್ಭುತ ಕುಂಚ ಕಲಾವಿದ. ಆತನ ಕೈಗೆ ಕುಂಚದ ಬದಲು ಗನ್ ಹೇಗೆ ಬಂದಿತು, ಗ್ಯಾಂಗ್ ಸ್ಟರ್ ರಾನಿ ಹೇಗಾದ ಎಂಬುದರ ಹಿಂದೆ ಚಿತ್ರಕತೆ ಸಾಗುತ್ತದೆ. ರಾಧ್ಯ, ಅಪೂರ್ವ, ಸಮೀಕ್ಷಾ ಮೂವರು ನಾಯಕರಿರುವ ಸಿನಿಮಾ ಇದಾಗಿದೆ ಎಂದು ಹೇಳಿದರು.
ರಾನಿ ಸಿನಿಮಾದಲ್ಲಿ ವಿನೋದ್ ಮಾಸ್ಟರ್ ಆ್ಯಕ್ಷನ್ ಕಂಪೋಸ್ ಮಾಡಿದ್ದಾರೆ. 4 ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಕುನಾಲ್ ಗಾಂಜಾವಾಲಾ, ಹಂಸಿಕಾ ಅಯ್ಯರ್ ಹಾಡಿದ್ದಾರೆ. ಗಿರೀಶ್ ಹೆಗ್ಡೆ, ಕರಿಸುಬ್ಬು, ಮೈಕೋ ನಾಗರಾಜ, ಉಗ್ರಂ ಮಂಜು, ಉಗ್ರಂ ರವಿ, ಯಶ್ ಶೆಟ್ಟಿ, ಶ್ರೀಧರ್, ಲಕ್ಷ್ಮಿ ಸಿದ್ದಯ್ಯ ಮುಂತಾದವರು ತಾರಾಗಣದಲ್ಲಿದ್ದಾರೆ ಎಂದು ಗುರುತೇಜ ಶೆಟ್ಟಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾನಿ ಸಿನಿಮಾದ ನಿರ್ಮಾಪಕ ಚಂದ್ರಕಾಂತ್ ಪೂಜಾರಿ ಇದ್ದರು.
ಕೋಟ್
- ಗುರುತೇಜ್ ಶೆಟ್ಟಿ, ನಿರ್ದೇಶಕ
ದಾವಣಗೆರೆಯಲ್ಲಿ ರಾನಿ ಚಿತ್ರದ ನಿರ್ದೇಶಕ ಗುರುತೇಜ್ ಶೆಟ್ಟಿ, ನಾಯಕ ನಟ ಕಿರಣ್ ರಾಜ್, ನಿರ್ಮಾಪಕ ಚಂದ್ರಕಾಂತ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.