12ರಂದು ವೀರಶೈವ ಲಿಂ. ಜಂಗಮ ವಧು-ವರರ ಮೇಳ: ಚಂದ್ರಶೇಖರ ನಾಗರಾಳಮಠ

KannadaprabhaNewsNetwork |  
Published : Jan 10, 2025, 12:46 AM IST
ಕ್ಯಾಪ್ಷನ7ಕೆಡಿವಿಜಿ37 ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಮಹಾಮೇಳ ಆಯೋಜಿಸಿರುವ ಕುರಿತು ಚಂದ್ರಶೇಖರ ನಾಗರಾಳಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಮಹಾಮೇಳವನ್ನು ಜ.12ರಂದು ಬೆಳಗ್ಗೆ 10 ಗಂಟೆಯಿಂದ ನಗರದ ತ್ರಿಶೂಲ್ ಕಲಾಭವನದಲ್ಲಿ ಸಂಘಟಿಸಲಾಗಿದೆ ಎಂದು ವೀರಶೈವ ಕಲ್ಯಾಣ ಕೇಂದ್ರ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾಗರಾಳಮಠ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಮಹಾಮೇಳವನ್ನು ಜ.12ರಂದು ಬೆಳಗ್ಗೆ 10 ಗಂಟೆಯಿಂದ ನಗರದ ತ್ರಿಶೂಲ್ ಕಲಾಭವನದಲ್ಲಿ ಸಂಘಟಿಸಲಾಗಿದೆ ಎಂದು ವೀರಶೈವ ಕಲ್ಯಾಣ ಕೇಂದ್ರ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾಗರಾಳಮಠ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಕುಮಾರಪಟ್ಟಣಂ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ಮೇಳದಲ್ಲಿ ಎಂಜಿನಿಯರ್, ಸ್ನಾತಕೋತ್ತರ, ಪದವೀಧರರ ಜೊತೆ ರೈತಾಪಿ ವರ್ಗದ ವಧು-ವರರು ಭಾಗವಹಿಸಲಿದ್ದಾರೆ. ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದಲೂ ರೈತ ಮಕ್ಕಳು ಪಾಲ್ಗೊಳ್ಳಲ್ಲಿದ್ದಾರೆ. ರೈತರ ಮಕ್ಕಳಿಗೆ ಇತ್ತೀಚೆಗೆ ವಧುಗಳು ಸಿಗುತ್ತಿಲ್ಲ. ಆದ್ದರಿಂದ ಪ್ರತಿ ಹಳ್ಳಿಗಳಲ್ಲೂ ವ್ಯವಸಾಯ ವೃತ್ತಿಯ ವರಗಳ ಕುರಿತು ಜಾಗೃತಿ ಅಭಿಯಾನ ಆರಂಭಿಸಿದೆ. ಮೇಳಕ್ಕೆ ಆಗಮಿಸುವವರು ಅನುಮತಿ ಪತ್ರಗಳ ಜೊತೆ ಸ್ವವಿವರ, ಭಾವಚಿತ್ರ ತರಬೇಕು. ಅನುಮತಿ ಪತ್ರ ಮತ್ತಿತರೆ ವಿವರಗಳಿಗೆ ಮೊ.9590121008, ಮೊ.94480 86175 ಇಲ್ಲಿಗೆ ಸಂಪರ್ಕಿಸುವಂತೆ ಮನವಿ ಮಾಡಿದರು.

ಸಂಸ್ಥೆಯ ಸುಮಿತ್ರಾ ನಾಗರಾಳಮಠ, ಇತರರು ಹಾಜರಿದ್ದರು.

- - - -7ಕೆಡಿವಿಜಿ37:

ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಮಹಾಮೇಳ ಕುರಿತು ಚಂದ್ರಶೇಖರ ನಾಗರಾಳಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!