ಕನ್ನಡಪ್ರಭ ವಾರ್ತೆ ಸರಗೂರು
ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷರಾಗಿ ಡಾ.ವೈ.ಡಿ. ರಾಜಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ತಾಲೂಕು ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ ನೇತೃತ್ವದಲ್ಲಿ ವ್ಯವಸ್ಥೆ ಗಳು ಭರದಿಂದ ಸಾಗಿದ್ದು, ಸಮ್ಮೇಳನ ಎಲ್ಲ ರೀತಿಯಲ್ಲಿ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಲಿದ್ದು, ಶಾಸಕ ಅನಿಲ್ ಚಿಕ್ಕಮಾದು ಅವರು ಹೆಚ್ಚು ಆಸಕ್ತಿ ಯಿಂದ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡುತ್ತಿದ್ದಾರೆ. ಸರಗೂರು ತಾಲೂಕಿನ ಸಮಸ್ತರು ಈ ಕನ್ನಡದ ಹಬ್ಬದಲ್ಲಿ ಭಾಗಿಯಾಗುವ ಹಾಗೆ ಶ್ರಮಿಸಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ತಿಳಿಸಿದ್ದಾರೆ.ಸಮ್ಮೇಳಾಧ್ಯಕ್ಷ ಡಾ. ವೈ.ಡಿ. ಪರಿಚಯ ಪರಿಚಯ:
ಚಿತ್ತ ಚಿತ್ತಾರ.., ಮತ ಅಭಿಮತ, ಇವರ ಜನಪ್ರಿಯ ಕವನ ಸಂಕಲನಗಳು. ಬಣ್ಣದ ಲೋಕ.., ಅಮೃತ ಕಾವಲು ಕೃತಿಗಳು ಸೇರಿದಂತೆ ಹಲವು ಕೃತಿಗಳ ಲೇಖಕಕಾರರಾಗಿ ಸಂಪಾದಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷತೆಯ ಅವಧಿಯಲ್ಲಿ 715 ಕ್ಕೂ ಹೆಚ್ಚು ಕನ್ನಡ ಕಾರ್ಯಕ್ರಮ ಆಯೋಜಿಸಿರುವ ದಾಖಲೆಯ ನೆಲೆ- ಹಿನ್ನೆಲೆ ಇವರಿಗಿದೆ. ಸ್ವತಃ ಕವಿಯಾಗಿ ವಿಶ್ವ ವಿಖ್ಯಾತ ದಸರಾ ಕವಿ ಗೋಷ್ಠಿ ಹಾಗೂ ನಾಡಿನ ಇತರೆಡೆ ತಮ್ಮ ಕವಿತೆ ವಾಚನ ಮಾಡಿದ್ದಾರೆ.
ಹತ್ತಾರು ಕವಿಗೋಷ್ಟಿ, ವಿಚಾರ ಗೋಷ್ಟಿ, ನೂರಾರು ಪುಸ್ತಕ ಬಿಡುಗಡೆ, ಗಮಕ ಸಿನಿಮಾ, ರಂಗಭೂಮಿ, ವಿಜ್ಞಾನ ತಂತ್ರಜ್ಞಾನದಲ್ಲೂ ಕನ್ನಡದ ಇತ್ತೀಚಿನ ಬೆಳವಣಿಗೆವರೆಗೂ ಕಾರ್ಯಕ್ರಮ ಸಂಘಟಿಸಿದ ಶ್ರಮ ಕಾಳಜಿ ಇವರದು. ಜಿಲ್ಲೆಯ ಹಿರಿಯ ಸಾಹಿತಿಗಳು ವಿದ್ವಾಂಸರು ಕನ್ನಡ ಹೋರಾಟಗಾರರು ಇವರಿಗೆ ವಿರಾಜಮಾನ ಎಂಬ ಅಭಿನಂದನಾ ಗ್ರಂಥವನ್ನು ನಾಡಿನ ಹಿರಿಯ ಸಾಹಿತಿ ಸಿಪಿಕೆ ಅವರ ಗೌರವ ಸಂಪಾದಕತ್ವದಲ್ಲಿ ಸಮರ್ಪಿಸಿದ್ದಾರೆ. ಆ ಮೂಲಕ ಮೈಸೂರು ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ರಾಗಿದ್ದಾರೆ.