ಕನ್ನಡಪ್ರಭ ವಾರ್ತೆ ಕುಶಾಲನಗರ
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಗಿರಿಜನ ಜಾನಪದ ಸಂಪತ್ತು ಎಂದು ಖ್ಯಾತರಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹಿ.ಚಿ ಬೋರ ಲಿಂಗಯ್ಯ ಅವರಿಗೆ 70 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಈ ವಿಶೇಷ ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದರು.
ಬುಡಕಟ್ಟು ಗಿರಿಜನರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಡಾ.ಬೋರಲಿಂಗಯ್ಯ ಅವರನ್ನು ಈ ಸಂದರ್ಭ ಜನಪದ ಸಿರಿ ಕನ್ನಡದಿಂದ ಮತ್ತು ಜನಪದ ಕಲಾವಿದರ ಮೂಲ ಗೌರವಿಸಲಾಗುವುದು.ಶಾಸ್ತ್ರೀಯ ಕಲೆಗಾರರಿಗೆ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಜಾನಪದ ಕಲೆಗಾರರಿಗೆ ಕೂಡ ಲಭಿಸಬೇಕು ಎನ್ನುವ ಉದ್ದೇಶದೊಂದಿಗೆ ಕಳೆದ ನಾಲ್ಕು ದಶಕಗಳಿಂದ ಪಶ್ಚಿಮ ಘಟ್ಟಗಳ ಅರಣ್ಯಗಳ ನಡುವೆ ಅಲೆದು ಬುಡಕಟ್ಟು ಜನರ ಸಂಪರ್ಕ ಮಾಡುವ ಮೂಲಕ ನಾಡಿಗೆ ಪರಿಚಯಿಸಿದ ಡಾ ಬೋರಲಿಂಗಯ್ಯ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅವರು ತಿಳಿಸಿದರು .
ನಾಲ್ಕು ದಶಕಗಳ ಹಿಂದೆ ಗಿರಿಜನರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದ ಸರ್ಕಾರಗಳಿಗೆ ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನಡುವೆ ನೆಲೆಸಿದ್ದ ಗಿರಿಜನರ ಬುಡಕಟ್ಟು ಜನಾಂಗವನ್ನು ಜನಗಣತಿಯಲ್ಲಿ ಸೇರ್ಪಡೆ ಮಾಡಲು ಶ್ರಮಿಸಿದ ಬೋರಲಿಂಗಯ್ಯ ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರ ಸಮ್ಮುಖದಲ್ಲಿ ಅವರನ್ನು ಗೌರವಿಸಲಾಗುವುದು.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ವಿಶ್ರಾಂತ ಕುಲಪತಿಗಳು ನಾಡಿನ ಖ್ಯಾತ ಜಾನಪದ ಗಾಯಕರು, ಜನಪ್ರತಿನಿಧಿಗಳು, ಜಾನಪದ ತಜ್ಞರು ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ವೀರಭೂಮಿ ಜನಪದ ಗ್ರಾಮದ ಪ್ರಧಾನ ವ್ಯವಸ್ಥಾಪಕರಾದ ಎಂ ಪಿ ಅವಿನಾಶ್, ವ್ಯವಸ್ಥಾಪಕರಾದ ಎಚ್ ಆರ್ ನಾಗೇಂದ್ರ ಮತ್ತು ಜಿ ಕೆ ಪೃಥ್ವಿರಾಜ್ ಇದ್ದರು.