ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಸಮಿತಿ, ಪುದುರಾಮಾಪುರ ರೈತ ಸಂಘ ಗ್ರಾಮ ಘಟಕದ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.ಪುದುರಾಮಾಪುರ ಗ್ರಾಮ ಘಟಕದ 2ನೇ ವಾರ್ಷಿಕೋತ್ಸವದ ಅಂಗವಾಗಿ ಆ.8ರಂದು ಪುದುರಾಮಾಪುರಯಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಜಾಗೃತಿ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ರೈತರು, ಸಾರ್ವಜನಿಕರು ಭಾಗವಹಿಸಬೇಕು. ಕಾರ್ಯಕ್ರಮವನ್ನು ನ್ಯಾಯಾಧೀಶ ಎಂ.ಎಲ್. ನಂದಿನಿ ಉದ್ಘಾಟಿಸಲಿದ್ದು, ರಕ್ತದಾನ ಶಿಬಿರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಎಸ್ಪಿ ಡಾ.ಬಿ.ಟಿ.ಕವಿತಾ, ಜಿಪಂ ಸಿಇಒ ಮೋನರೋತ್, ಸರ್ವೋದಯ ಪಕ್ಷದ ಕಾರ್ಯದರ್ಶಿ ಪ್ರಸನ್ನ ಎನ್ ಗೌಡ, ಉಪ ವಿಭಾಗಾಧಿಕಾರಿ ಬಿ.ಆರ್. ಮಹೇಶ್, ಸಿಡಿಪಿಒ ನಂಜಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರಕಾಶ್, ಇಒ ಉಮೇಶ್, ತಹಸೀಲ್ದಾರ್ ಗುರುಪ್ರಸಾದ್, ಶಿವಪುರ ಮಹಾದೇವಪ್ಪ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ, ಮಹೇಶ್ ಪ್ರಭು ಶೈಲೇಂದ್ರ, ಜಿಲ್ಲಾ ರೈತ ಸಂಘ ಘಟಕ, ಕೊಳ್ಳೇಗಾಲ ರೈತ ಸಂಘದ ಘಟಕದ ಸದಸ್ಯರು ಹನೂರು ಘಟಕದ ರೈತ ಸಂಘದ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ.ರಕ್ತದಾನ ಮಾಡುವ ದಾನಿಗಳು ಮೂರು ದಿನಗಳ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹನೂರು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ 9845123128, ಭಾಸ್ಕರ್ ಸಿ,8660461532 ಸಂಪರ್ಕಿಸಬೇಕು. ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಶೈಲೆಂದ್ರ, ತಾಲೂಕು ಅಧ್ಯಕ್ಷ ಪಳನಿಸ್ವಾಮಿ, ಸಂಘದ ಗೌರವಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಬಸವರಾಜು ಇದ್ದರು.