ಕನ್ನಡಪ್ರಭ ವಾರ್ತೆ ಸುರಪುರ
ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯರು, ನಾಲ್ಕೈದು ವರ್ಷದಿಂದ ಅರಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ವರ್ಗಾವಣೆ ಆದೇಶವಾಗಿ ಐದು ಕಳೆದರು ಯಾಕೆ ಆದೇಶ ನೀಡುತ್ತಿಲ್ಲ. ಆದ್ದರಿಂದ ಈ ಕೂಡಲೇ ಆದೇಶ ನೀಡಬೇಕು. ಇಲ್ಲವಾದರೆ 13 ಸದಸ್ಯರ ರಾಜೀನಾಮೆ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗ್ರಾಮಸ್ಥರಿಂದ ನಿತ್ಯ ನಿಂದನೆ ಅನುಭವಿಸುತ್ತಿದ್ದೇವೆ. ಗ್ರಾಮದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಜನಸಾಮಾನ್ಯರಿಗೆ ಮುಖ ತೋರಿಸಲು ಆಗುತ್ತಿಲ್ಲ. ಜನರಿಗೆ ನೀವು ಉತ್ತರ ಕೊಡುವವರಲ್ಲ. ನಾವು ಉತ್ತರ ಕೊಡಬೇಕಿದೆ. ಪಿಡಿಒ ಅವರನ್ನು ವರ್ಗಾವಣೆ ಮಾಡದಿದ್ದರೆ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಎರಡು ದಿನ ರಜೆ ಇರುವ ಕಾರಣ ವರ್ಗಾವಣೆ ಆದೇಶ ನೀಡಲಾಗಿಲ್ಲ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಎರಡು ದಿನ ಕಾಯುವಂತೆ ತಿಳಿಸಿದ್ದಾರೆ. ಕಾನೂನು ರೀತಿ ವರ್ಗಾವಣೆಗೆ ಆದೇಶ ನೀಡಲಾಗುತ್ತದೆ ಎಂದು ತಿಳಿಸಿದರು.