ಕನ್ನಡಪ್ರಭ ವಾರ್ತೆ ಮಳವಳ್ಳಿಪಟ್ಟಣದಲ್ಲಿ ಫೆ.23 ಮತ್ತು 24ರಂದು ನಡೆಯಲಿರುವ ಐತಿಹಾಸಿಕ ಸಿಡಿಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಸಮುದಾಯ ಮುಖಂಡರ ಪೂವ೯ಭಾವಿ ಸಭೆ ನಡೆಯಿತು.
ಎಸಿ ಶಿವಮೂರ್ತಿ ಮಾತನಾಡಿ, ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿ ಹಬ್ಬವನ್ನು ಶಾಂತಿಯುತವಾಗಿ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಂದು ಸಮುದಾಯದ ಜನರು ಸಹಕಾರ ಬೇಕಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಗಂಗಾಮತ ಬೀದಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯೂ ಅಪೂರ್ಣಗೊಂಡಿದೆ. ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ. ಆದರೆ, ಕಾಮಗಾರಿ ಮುಂದುವರಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಹಬ್ಬದ ಅಂಗವಾಗಿ ಕಾಮಗಾರಿ ಹಮ್ಮಿಕೊಳ್ಳಲು 2 ತಿಂಗಳು ಮುಂಚಿತವಾಗಿ ಸಭೆ ಕರೆದು ಸಮಸ್ಯೆಗಳ ನಿವಾರಿಸಬೇಕು. ಹಬ್ಬದ ವೇಳೆ ಮನೆಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ದಿನಕ್ಕೆ 2 ಬಾರಿ ನೀರು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದರು.
ಪುರಸಭೆ ಸದಸ್ಯ ಕಿರಣ್‌ಶಂಕರ್ ಮಾತನಾಡಿ, ತುಕ್ಕು ಹಿಡಿಯುತ್ತಿರುವ ನೀರಿನ ಪೈಪ್ ಹಾಗೂ ಮೀಟರ್‌ಗಳನ್ನು ತೆರವುಗೊಳಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು, ತೆರೆದಿರುವ ಮ್ಯಾನ್‌ವೋಲ್‌ಗಳನ್ನು ಸರಿಪಡಿಸಬೇಕೆಂದು ತಿಳಿಸಿದರು.
ಸಿದ್ಧಾರ್ಥನಗರ ಮುಖಂಡ ಬಾಲರಾಜ್ ಮಾತನಾಡಿ, ಪಟ್ಟಲದಮ್ಮ ದೇವಸ್ಥಾನಕ್ಕೆ ಅಡ್ಡಲಾಗಿ ಕಟ್ಟಿರುವ ಕಾಂಪೌಂಡ್ ತೆರವುಗೊಳಿಸಲು ಮುಂದಾಗಬೇಕು ಎಂದರು.
ಸಿದ್ಧಾರ್ಥ ನಗರದ ಮುಖಂಡ ನಾಗರಾಜು, ಪಟೇಲ್ ಚಿನ್ನೇಗೌಡರ ಮೊಮ್ಮಗ ಕಿರಣ್‌ಕುಮಾರ್, ಯಜಮಾನ ವೀರೇಗೌಡ ಮಾತನಾಡಿ, ಯಾವುದೇ ವಿವಾದವನ್ನು ಮಾತುಕತೆ ಮೂಲಕ ಮಾತಕತೆ ಮೂಲಕ ಹಬ್ಬವನ್ನು ಶಾತಿಯುತವಾಗಿ ಆಚರಿಸಲು ಅಧಿಕಾರಿಗಳು ಶಾಸಕರು ಗಮನ ಹರಿಸಬೇಕು ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ರವಿಕುಮಾರ್ ಮಾತನಾಡಿ, ಶಾಂತಿಯುತ ಸಿಡಿಹಬ್ಬಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಘಟ್ಟ ಮೆರವಣಿಗೆ ಸಮಯ ಅನುಸಾರವಾಗಿ ನಡೆಯಬೇಕು. ಫ್ಲೆಕ್ಸ್ ಹಾಕಲು ಪುರಸಭೆಯಿಂದ ಅನುಮತಿ ಪಡೆಯಬೇಕು. ಧ್ವನಿವರ್ಧಕವನ್ನು ಬೆಳಗೆ 6ರಿಂದ ಸಂಜೆ ೧೦ಗಂಟೆಯೊಳಗೆ ಮಾತ್ರ ಹಾಕಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಲೋಕೇಶ್, ಡಿವೈಎಸ್ಪಿ ಕೃಷ್ಣಪ್ಪ, ತಾಪಂ ಇಒ ಮಮತ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಬಿಇಒ ಚಂದ್ರಪಾಟೀಲ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಸೇರಿದಂತೆ ಇತರರು ಇದ್ದರು.