ಗಾಂಧಿ ಜಯಂತಿ ನಿಮಿತ್ತ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಘೋಷಣೆ

KannadaprabhaNewsNetwork | Published : Oct 3, 2024 1:17 AM
2ಕೆಎಂಎನ್ ಡಿ15 | Kannada Prabha

ಮಹಾತ್ಮ ಗಾಂಧಿ ನಮಗೆಲ್ಲ ಮಾರ್ಗದರ್ಶಕರಾಗಿ ಜೀವನವನ್ನು ನಡೆಸಿಕೊಂಡು ಬಂದಂತಹ ದೇಶದ ಮಹಾತ್ಮರು. ನಾವು ಯಾವುದೇ ಬದಲಾವಣೆ ತರಬೇಕಾದರು ಮೊದಲು ನೀನು ಬದಲಾಗು ಎಂಬ ಗಾಂಧೀಜಿ ಮಾತನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗಾಂಧಿ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಪಟ್ಟಣದ ಐದುದೀಪ ವೃತ್ತದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ನೇತೃತ್ವದಲ್ಲಿ ಕಾರ್ಯಕರ್ತರು ಬಿಳಿ ಟೋಪಿ ಹಾಕಿಕೊಂಡು ರಾಷ್ಟ್ರಧ್ವಜ ಹಿಡಿದು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗಾಂಧಿ, ಲಾಲ್‌ಬಹದ್ದೂರು ಶಾಸ್ತ್ರಿ, ನೆಹರು ಪರ ಘೋಷಣೆ ಮೊಳಗಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ಮಹಾತ್ಮ ಗಾಂಧೀಜಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ ನೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಅದರ ನೆನಪಾಗಿ ರಾಜ್ಯ ಸರ್ಕಾರ ಇಡೀ ವರ್ಷ ವಿಶೇಷವಾಗಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಾಂಧೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟ್ಟಣದಲ್ಲಿ ಮೆರವಣಿ ನಡೆಸಿದ್ದೇವೆ. ಗಾಂಧೀಜಿ ಅವರ ತತ್ವಗಳಾದ ಸತ್ಯ, ಅಹಿಂಸೆ, ಸ್ವಚ್ಛತೆಯಡಿ ಗ್ರಾಪಂ ಮಟ್ಟದಲ್ಲೂ ಕೆಲಸ ಮಾಡಲಾಗುವುದು, ವಿದ್ಯಾರ್ಥಿಗಳ ಸಹಯೋಗ ಪಡೆದುಕೊಂಡು ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿ, ಮಹಾತ್ಮ ಗಾಂಧಿ ನಮಗೆಲ್ಲ ಮಾರ್ಗದರ್ಶಕರಾಗಿ ಜೀವನವನ್ನು ನಡೆಸಿಕೊಂಡು ಬಂದಂತಹ ದೇಶದ ಮಹಾತ್ಮರು. ನಾವು ಯಾವುದೇ ಬದಲಾವಣೆ ತರಬೇಕಾದರು ಮೊದಲು ನೀನು ಬದಲಾಗು ಎಂಬ ಗಾಂಧೀಜಿ ಮಾತನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.

ಮಹಾತ್ಮ ಗಾಂಧೀಜಿ ಕೊಡುಗೆ ಅಪಾರ. ಶಾಂತಿ, ಅಹಿಂಸೆ, ಸತ್ಯ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಮಹಾತ್ಮರ ನೆನಪು ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು. ಅವರ ಸಿದ್ಧಾಂತಗಳನ್ನು ಪಾಲಿಸಿಕೊಂಡು ಪ್ರತಿಯೊಬ್ಬರು ಮುನ್ನಡೆಯಬೇಕು ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ತ್ಯಾಗರಾಜು, ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ್, ಕೆನ್ನಾಳು ಗ್ರಾಪಂ ಅಧ್ಯಕ್ಷ ಪ್ರಕಾಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಜೇಂದ್ರಮೂರ್ತಿ, ಪುರಸಭೆ ಸದಸ್ಯರಾದ ಉಮಾಶಂಕರ್, ಜಯಲಕ್ಷ್ಮಿ, ತಾಪಂ ಮಾಜಿ ಸದಸ್ಯ ರಾಮೇಗೌಡ, ಮುಖಂಡರಾದ ಚಿಕ್ಕಾಡೆ ಮಹೇಶ್, ಕಣಿವೆರಾಮು, ಸಿ.ಆರ್.ರಮೇಶ್, ದೇವರಾಜು, ಚಂದ್ರಶೇಖರ್, ಸಿದ್ದಲಿಂಗಯ್ಯ, ಭರತ್‌ಪಟೇಲ್, ಬಸವರಾಜು, ದೊಡ್ಡವೆಂಕಟಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.