ಕನ್ನಡಪ್ರಭ ವಾರ್ತೆ ಹುಣಸೂರು
ಚಿಲ್ಕುಂದ ಹರಾಜು ಮಾರುಕಟ್ಟೆಯ ರೈತ ಸಣ್ಣತಮ್ಮೇಗೌಡ ಮಾತನಾಡಿ, 45 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರರು ಇರುವ ಈ ಕರ್ನಾಟದಲ್ಲಿ ಇದೊಂದೇ ಸಂಶೋಧನಾ ಕೇಂದ್ರವಿದೆ. ಕೇಂದ್ರದಲ್ಲಿ ವಿಜ್ಞಾನಿಗಳ ಕೊರತೆಯೂ ಕಾಡುತ್ತಿದೆ. ಹೊಸ ತಳಿಗಳ ಅವಶ್ಯಕತೆ ಇದೆ. ಇದೆಲ್ಲವನ್ನೂ ಸರಿಪಡಿಸಿಕೊಂಡು ರೈತರಿಗೆ ಬೆಂಬಲವಾಗಿ ವಿಜ್ಞಾನಿಗಳು ನಿಲ್ಲಬೇಕಿದ್ದು ಈ ಕುರಿತು ಗಮನಹರಿಸಲು ಕೋರಿದರು.
ಪ್ರಗತಿಪರ ರೈತ ನಾಗೇಶ್ ಮಾತನಾಡಿ, ಈ ವಾತಾವರಣಕ್ಕೆ ಅವಶ್ಯಕವಾದ ಮತ್ತು ಅನುಕೂಲಕರವಾದ ತಳಿಗಳ ಅಭಿವೃದ್ಧಿ ಇಂದಿನ ಜರೂರಾಗಿದೆ. ರೈತರಲ್ಲಿ ಹೊಸ ತಳಿಗಳು ಮತ್ತು ಹೊಸ ಪದ್ಧತಿಗಳ ಕುರಿತು ಅರಿವಿನ ಕೊರತೆ ಇದ್ದು, ಕ್ಲಸ್ಟರ್ ಮಟ್ಟದಲ್ಲಿ ಇಂತಹ ಕಾರ್ಯಾಗಾರಗಳು ಆಯೋಜನಗೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು. ತಂಬಾಕಿಗೆ ಅವಶ್ಯವಾದ ಮೂರು ಬಗೆಯ ರಾಸಾಯನಿಕ ಗೊಬ್ಬರಗಳ ನೀಡುವಿಕೆ ಕೃಷಿಕಾರ್ಮಿರಕ ಕೊರತೆಯಿಂದಾಗಿ ಕಷ್ಟಸಾಧ್ಯವಾಗುತ್ತಿದೆ. ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮೂರು ಗೊಬ್ಬರಗಳನ್ನು ಮಿಶ್ರಣ ಮಾಡಿ ಒಂದೇ ರೂಪದಲ್ಲಿ ನೀಡುವತ್ತ ಸಂಶೋಧನೆ ನಡೆಸಿದಲ್ಲಿ ಗೊಬ್ಬರಗಳ ಸಮರ್ಪಕ ನೀಡುವಿಕೆಯ ಮೂಲಕ ಗಿಡಗಳ ಸಮಾನಾಂತರ ಬೆಳವಣಿಗೆ ಸಾಧ್ಯವಾಗಲಿದೆ ಎಂದರು.ರೈತ ಕಾಳೇಗೌಡ, ರೈತ ನಿಲುವಾಗಿಲು ಪ್ರಭಾಕರ್ ಮಾತನಾಡಿದರು.
ರೈತ ಶ್ರೀಶೈಲ ಮಾತನಾಡಿ, ತಂಬಾಕು ಕೃಷಿಯಲ್ಲಿ ನರ್ಸರಿ ಕಾಂರ್ವು ಎರಡು ತಿಂಗಳ ದೀರ್ಘ ಅವಧಿಯನ್ನು ಹೊಂದಿದ್ದು ನೇರವಾಗಿ ಸಸಿಯನ್ನು ಭೂಮಿಗೆ ನಾಟಿ ಮಾಡಲು ಅವಶ್ಯಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಕೋರಿದರು.
ರೈತರಾದ ಮೂರ್ತಿ, ಮರೀಗೌಡ, ಅಶೋಕ್ ಮುಂತಾದವರು ಸಮಸ್ಯೆಗಳನ್ನು ತಿಳಿಸಿದರು.