ಕಂಪ್ಲಿ: ಪಟ್ಟಣದ ವಾರದ ಸಂತೆ ಮಾರುಕಟ್ಟೆ ಬಳಿ ಕಂಪ್ಲಿಯ ಛಲವಾದಿ ಸಮಾಜದ ಆಶ್ರಯದಲ್ಲಿ ಗುರುವಾರ ನಡೆದ ಒನಕೆ ಓಬವ್ವ ನಾಮಫಲಕ ಉದ್ಘಾಟನೆ ಹಾಗೂ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಮಹಿಳಾ ಶೌರ್ಯದ ಪ್ರತೀಕವಾದ ಒನಕೆ ಓಬವ್ವನ ಹೆಸರಿನಲ್ಲಿ ವೃತ್ತವನ್ನು ನಾಮಕರಣ ಮಾಡುವುದು, ಅದನ್ನು ಸಮುದಾಯದ ಸಂಭ್ರಮದೊಂದಿಗೆ ಜನರಿಗೆ ಸಮರ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ವೃತ್ತದ ಬಳಿ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ನಾಮಫಲಕ ಉದ್ಘಾಟನೆ ಬಳಿಕ, ಒನಕೆ ಓಬವ್ವ ವೃತ್ತದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಾಗಿತು.ಶಂಭುಲಿಂಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಿರ್ಮಲಾ ಒನಕೆ ಓಬವ್ವಳ ಛದ್ಮವೇಷ ಧರಿಸಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದಳು. ಮೆರವಣಿಗೆ ಮರಳಿ ಓಬವ್ವ ವೃತ್ತಕ್ಕೆ ತಲುಪಿ ಸಮಾವೇಶವಾಗಿ ಕೊನೆಗೊಂಡಿತು. ಸಮುದಾಯದ ಅನೇಕ ಹಿರಿಯರು, ಮಹಿಳೆಯರು ಮತ್ತು ಯುವಕರು ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಂ.ಸಿ. ಮಾಯಪ್ಪ, ಕೆ.ಲಕ್ಷ್ಮಣ, ಎಂ.ಸಿ. ನಿಂಗಪ್ಪ, ಕೆ.ಶಂಕ್ರಪ್ಪ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ಶಿವಕುಮಾರ, ತಾಲೂಕು ಅಧ್ಯಕ್ಷ ಸಿ.ಎ. ಚನ್ನಪ್ಪ, ಪ್ರಮುಖರಾದ ಸಿ.ಹನುಮೇಶ್, ಶಂಕರ ನಂದಿಹಾಳ, ಸಿದ್ದಿ ಅಂಜಿನಪ್ಪ, ಸೂರ್ಯನಾರಾಯಣ, ಪಾರ್ವತಮ್ಮ, ಹುಲಿಗೆಮ್ಮ, ಗಂಗಮ್ಮ, ಜಯಮ್ಮ, ಹೊನ್ನಮ್ಮ, ಪಾರ್ವತಿ, ಸಣ್ಣ ಹುಲಿಗೆಮ್ಮ, ಅಂಗಜಾಲರ ಹುಸೇನಪ್ಪ, ವೆಂಕಟ ಇದ್ದರು.