ಇಂದಿನಿಂದ ಗುಡೇಕೋಟೆಯಲ್ಲಿ ಒನಕೆ ಓಬವ್ವನ ಉತ್ಸವ

KannadaprabhaNewsNetwork |  
Published : Feb 24, 2025, 12:32 AM IST
ಕೂಡ್ಲಿಗಿ ತಾಲೂಕು ಗುಡೇಕೋಟೆ ಉತ್ಸವದ ಲೋಗೋ   | Kannada Prabha

ಸಾರಾಂಶ

ನಾಡಿನ ವೀರನಾರಿ ಒನಕೆ ಓಬವ್ವನ ತವರೂರು ಗುಡೆಕೋಟೆಯಲ್ಲಿ ಒನಕೆ ಓಬವ್ವನ ಉತ್ಸವವು ಫೆ. 24 ಮತ್ತು ಫೆ.25ರಂದು ನಡೆಯಲಿದೆ.

ಉತ್ಸವಕ್ಕೆ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ಖಾನ್‌ ಚಾಲನೆ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತ ಇವುಗಳ ಸಹಯೋಗದಲ್ಲಿ ಕೋಟೆಗಳ ನಾಡು, ಪಾಳೆಗಾರರ ನೆಲೆಬೀಡು ಹಾಗೂ ನಾಡಿನ ವೀರನಾರಿ ಒನಕೆ ಓಬವ್ವನ ತವರೂರು ಗುಡೆಕೋಟೆಯಲ್ಲಿ ಒನಕೆ ಓಬವ್ವನ ಉತ್ಸವವು ಫೆ. 24 ಮತ್ತು ಫೆ.25ರಂದು ನಡೆಯಲಿದೆ.

ಗುಡೇಕೋಟೆಯ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ನಿರ್ಮಿಸಿರುವ ಒನಕೆ ಓಬವ್ವ ವೇದಿಕೆಯಲ್ಲಿ ಉತ್ಸವದ ಸಮಾರಂಭವನ್ನು ಫೆ.24ರ ಸಂಜೆ 6 ಗಂಟೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್‌ಖಾನ್ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಕಾರ್ಮಿಕ ಉಸ್ತುವಾರಿ ಸಚಿವ ಸಂತೋಷ್‌ಲಾಡ್ ಉಪಸ್ಥಿತರಿರುವರು. ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಬಳ್ಳಾರಿ ಸಂಸದರಾದ ಈ.ತುಕರಾಮ್, ದಾವಣಗೆರೆಗೆ ಡಾ. ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಎಚ್.ಆರ್. ಗವಿಯಪ್ಪ, ಕೆ. ನೇಮಿರಾಜನಾಯ್ಕ, ಕೃಷ್ಣನಾಯ್ಕ, ಎಂ.ಪಿ. ಲತಾ ಮಲ್ಲಿಕಾರ್ಜುನ, ಬಿ.ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ್, ಶಶಿಲ್ ಜಿ. ನಮೋಶಿ, ಹಾಗೂ ವೈ.ಎಂ. ಸತೀಶ್, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್‌ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಅಂಚೆ ಇಲಾಖೆಯ ಉತ್ತರವಲಯದ ನಿರ್ದೇಶಕರಾದ ವಿ.ತಾರ, ಹಂಪಿ, ಕವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಲಕ್ಷ್ಮಣ್‌ ತೆಲಗಾವಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಎಸ್ಪಿ ಶ್ರೀಹರಿಬಾಬು, ನಿವೃತ್ತ ಉಪಲೋಕಾಯುಕ್ತ ಜಸ್ಟೀಸ್ ಜಿ. ಪತ್ರಿಬಸವನಗೌಡ್ರು, ಕಾನಾಮಡುಗು ಶ್ರೀಶರಣ ಬಸವೇಶ್ವರ ದಾಸೋಹಮಠದ ದಾ.ಮ. ಐಮುಡಿ ಶರಣಾರ್ಯರು, ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀವಿಜಯಮಹಾಂತೇಶ್ವರ ಶಾಖಾಮಠ ಬಸವಲಿಂಗ ಮಹಾಸ್ವಾಮಿ, ಗುಡೇಕೋಟೆ ಪಾಳೇಗಾರರ ವಂಶಸ್ಥರಾದ ಶಿವರಾಜವರ್ಮ, ಕುದುರೆಡವು ಒನಕೆ ಓಬವ್ವನ ವಂಶಸ್ಥರಾದ ರಾಜಣ್ಣ, ಜರಿಮಲೆ ಪಾಳೆಯಗಾರ ಸಂಸ್ಥಾ£ದದ ವಂಶಸ್ಥರಾದ ಸಿದ್ದಪ್ಪನಾಯಕ ಮತ್ತು ಕೃಷ್ಣವರ್ಮರಾಜು ಭಾಗವಹಿಸುವರು. ವಿಜಯನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ವರ ರಂಗಣ್ಣನವರ, ತಹಶೀಲ್ದಾರ್ ಎಂ.ರೇಣುಕಾ, ತಾಪಂ ಇಒ ನರಸಪ್ಪ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಇಂದಿನ ಕಾರ್ಯಕ್ರಮ:

ಫೆ.24ರಂದು ನಡೆಯುವ ಒನಕೆ ಓಬವ್ವನ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 3 ಗಂಟೆಗೆ ಗ್ರಾಮದ ಶ್ರೀಶಿವಪಾರ್ವತಿ ದೇವಸ್ಥಾನದಿಂದ ಒನಕೆ ಓಬವ್ವನ ವೇದಿಕೆವರೆಗೆ 48 ವಿವಿಧ ಕಲಾತಂಡಗಳಿಂದ ಶೋಭಾಯಾತ್ರೆ ಜರುಗುವುದು. ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಆರಂಭವಾಗುವುದು, ರಾತ್ರಿ 9 ಗಂಟೆಗೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನ್ಯಾಟ, ಕುಚುಪುಡಿ ನೃತ್ಯ, ಕಿರುನಾಟಕ ಪ್ರದರ್ಶನ ನಂತರ ಸರಿಗಮಪ ಹಾಗು ಬಿಗ್‌ಬಾಸ್ ಖ್ಯಾತಿಯ ಹನುಮಂತ ಲಮಾಣಿ ತಂಡದಿಂದ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11 ಗಂಟೆಯಿಂದ ಮಿಮಿಕ್ರಿ ಗೋಪಿ ತಂಡದಿಂದ ಹಾಸ್ಯ, ಸರಿಗಮಪ ತಂಡದಿಂದ ಗೀತಾಗಾಯನ, ಬೆಂಗಳೂರು ಡಿಕೆಡಿ ತಂಡದಿಂದ ಡ್ಯಾನ್ಸ್ ತರುವಾಯ ಸ್ಥಳೀಯ ಕಲಾವಿದರಿಂದ ಮನೋರಂಜನಾ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ