ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದು ನಿಶ್ಚಿತ-ಶಾಸಕ ಲಮಾಣಿ

KannadaprabhaNewsNetwork |  
Published : Feb 10, 2024, 01:46 AM IST
ಪೊಟೋ-ಪಟ್ಟಣದ ವಾರ್ಡ ನಂ2ರಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರು ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಗೋಡೆ ಬರಹಕ್ಕೆ ಚಾಲನೆ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ವಾರ್ಡ್‌ ನಂ 2ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಗೋಡೆ ಬರಹಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಅವರು ಕಮಲದ ಚಿತ್ರಕ್ಕೆ ಬಣ್ಣ ಬಳಿಯುವ ಮೂಲಕ ಶುಕ್ರವಾರ ಚಾಲನೆ ನೀಡಿದರು.

ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್‌ ನಂ 2ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಗೋಡೆ ಬರಹಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಅವರು ಕಮಲದ ಚಿತ್ರಕ್ಕೆ ಬಣ್ಣ ಬಳಿಯುವ ಮೂಲಕ ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನ ಮಂತ್ರಿಯಾಗುವುದು ಶತಸಿದ್ಧ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ದೇಶವು ಅಭಿವೃದ್ಧಿಯಲ್ಲಿ ವೇಗ ಪಡೆದುಕೊಂಡು ಪಾಶ್ಚಾತ್ಯ ದೇಶಗಳನ್ನು ವಿವಿಧ ರಂಗಗಳಲ್ಲಿ ಹಿಂದಿಕ್ಕಿ ಮುನ್ನಡೆಯುವ ಕಾರ್ಯ ಮಾಡಿದೆ. ಕೋವಿಡ್ ಕಾಲದಲ್ಲಿ ಭಾರತವು ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದನ್ನು ಜಗತ್ತು ಮೆಚ್ಚಿಕೊಂಡಿದೆ. ಅಲ್ಲದೆ ಬಡ ರಾಷ್ಟ್ರ ಹಾಗೂ ಮುಂದುವರೆದ ದೇಶಗಳಿಗೆ ಉಚಿತವಾಗಿ ನೀಡಿದ್ದು ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಸುನೀಲ ಮಹಾಂತಶೆಟ್ಟರ, ಅಶ್ವಿನಿ ಅಂಕಲಕೋಟಿ, ಬಸವರಾಜ ಪಲ್ಲೆದ, ನಾಗರಾಜ ಕುಲಕರ್ಣಿ, ಶರಣು ಅಂಗಡಿ, ಜಾನು ಲಮಾಣಿ, ದುಂಡೇಶ ಕೊಟಗಿ, ವಿಜಯ ಕುಂಬಾರ, ನವೀನ ಬೆಳ್ಳಟ್ಟಿ, ನೀಲಪ್ಪ ಹತ್ತಿ, ಉಳವೇಶಗೌಡ ಪಾಟೀಲ, ಸಂಗಮೇಶ ಬೆಳವಲಕೊಪ್ಪ, ಪ್ರವೀಣ ಬೊಮಲೆ, ವಿಜಯ ಬೂದಿಹಾಳ, ಶಾಂತಣ್ಣ ಬಳ್ಳಾರಿ, ವಿಶಾಲ ಬಟಗುರ್ಕಿ, ನಿಂಗಪ್ಪ ಬನ್ನಿ, ಬಾಬಣ್ಣ ವರ್ಣೇಕರ, ನಾಗಪ್ಪ ಓಂಕಾರಿ, ವಿಜಯ ಮೆಕ್ಕಿ, ಮಂಜುನಾಥ ಗೊರವರ, ಬಸವರಾಜ ಮಜ್ಜಿಗುಡ್ಡ, ಮಂಜುನಾಥ ಶಂಕಿನದಾಸರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ