ಬಡತನ, ಹಸಿವು ಮೆಟ್ಟಿ ನಿಂತಾಗ ಗುರಿ ತಲುಪಲು ಸಾಧ್ಯ: ಕೆ.ಎಸ್. ಸಿದ್ದಲಿಂಗಪ್ಪ ಅಭಿಪ್ರಾಯ

KannadaprabhaNewsNetwork |  
Published : Oct 14, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಆರ್.ರೇವಣಸಿದ್ದಯ್ಯ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದು, ಅ ಮೂಲಕ ಶ್ರೀಗಳ ಕನಸು ನನಸಾಗಿದೆ. ಪಠ್ಯಗಳು ಜ್ಞಾನವನ್ನು ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಾಯಕತ್ವದ ಗುಣದ ಜೊತೆಗೆ, ಶಿಸ್ತು, ಸೇವಾ ಮನೋಭಾವ, ಅನುಕಂಪ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಕಲಿಸಿಕೊಡಲಿವೆ. ಮಕ್ಕಳಲ್ಲಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗೆ ಅಭಿವ್ಯಕ್ತಿ ವೇದಿಕೆಯಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಪದವಿ ಶಿಕ್ಷಣವೆಂಬುದು ಬದುಕಿನ ಕನಸುಗಳನ್ನು ಹೊತ್ತು ಸಾಗುವ ಪರಿಶ್ರಮದ ದಾರಿ. ಬಡತನ, ಹಸಿವು ಇವುಗಳನ್ನು ಮೆಟ್ಟಿ ನಿಂತಾಗ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ಅಭಿಪ್ರಾಯ ಪಟ್ಟಿದ್ದಾರೆ

ನಗರದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಎನ್.ಸಿ.ಸಿ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಅಭಿವ್ಯಕ್ತಿ-2026-27 ಕ್ಕೆ ದೀಪ ಬೆಳಗಿಸಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಮಾತನಾಡಿದ ಅವರು, ಹಸಿವು, ಬಡತನ ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯಗಳಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

1978-81ರ ಅವಧಿಯಲ್ಲಿ ನಾನು ಸಹ ಈ ಕಾಲೇಜಿನ ವಿದ್ಯಾರ್ಥಿ, ಅಂದು ಇಷ್ಟು ಅಧುನಿಕ ಸೌಕರ್ಯಗಳ ಇರಲಿಲ್ಲ. ಆದರೆ ಬೋಧಕರ ಪರಿಶ್ರಮ ಸ್ವಾಮೀಜಿ ಇಚ್ಛೆ ಇಂದು ಈ ಸಂಸ್ಥೆಯನ್ನು ಹೆಸರುವಾಸಿಯನ್ನಾಗಿಸಿದೆ. ಹಿರಿಯ ಸ್ವಾಮೀಜಿಗಳ ನಿರಂತರ ಪರಿಶ್ರಮದ ಫಲವಾಗಿ, ಒಳ್ಳೆಯ ಕಟ್ಟಡಗಳು ತಲೆ ಎತ್ತಿ, ಬ್ಲಾಕ್ ಬೋರ್ಡ್ ಹೋಗಿ ಸ್ಮಾರ್ಟ್ ಕ್ಲಾಸ್ ಗಳು ಬಂದಿವೆ. ಆದರೆ ವಿದ್ಯಾರ್ಥಿಗಳ ಅನಾಸಕ್ತಿಯಿಂದ ಅಂಕಗಳಿಕೆಗೆ ಮಾತ್ರ ಶಿಕ್ಷಣ ಸಿಮೀತವಾಗಿ, ಮೌಲ್ಯಗಳು ಮರೆಯಾಗಿವೆ. ವಿದ್ಯಾರ್ಥಿಗಳು ಮಾನವೀಯತೆ, ಮನುಷತ್ವ, ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡು ಸಮಾಜ ಸೇವೆಯತ್ತ ಮುಖ ಮಾಡಬೇಕಿದೆ. ಆತ್ಮಸಾಕ್ಷಿ ಮತ್ತು ಸಾಮಾಜಿಕ ಪ್ರಜ್ಞೆಯನ್ನು ರೂಢಿಸಿಕೊಂಡು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ನಡೆದುಕೊಂಡರೆ ಅದೇ ನಿಜವಾದ ರಾಷ್ಟ್ರಪ್ರೇಮ ಎಂದು ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.ಅಭಿವ್ಯಕ್ತಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಯುವ ಗಾಯಕ ವ್ಯಾಸರಾಜ್, ವಿದ್ಯಾರ್ಥಿ ಜೀವನ ಅಮೂಲ್ಯವಾದುದ್ದು, ನಾವು ಇಲ್ಲಿ ಕಲಿಕೆಯ ಜೊತೆಗೆ, ಗಳಿಕೆಗೂ ಅವಕಾಶವಿದೆ. ಶಿಕ್ಷಣದ ಮೂಲಕ ಜ್ಞಾನವನ್ನು ಕಲಿತರೆ, ನಮ್ಮಲಿನ ಪ್ರತಿಭೆಗಳ ಮೂಲಕ ಕೌಶಲ್ಯ ಗಳಿಸಲು ಸಾಧ್ಯವಿದೆ ಎಂದರು.

ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜನಾಧಿಕಾರಿ ಡಾ.ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಆಶಯದೊಂದಿಗೆ ಆರಂಭವಾದ ಈ ಶಿಕ್ಷಣ ಸಂಸ್ಥೆಯಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತವಾದ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಆರ್.ರೇವಣಸಿದ್ದಯ್ಯ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದು, ಅ ಮೂಲಕ ಶ್ರೀಗಳ ಕನಸು ನನಸಾಗಿದೆ. ಪಠ್ಯಗಳು ಜ್ಞಾನವನ್ನು ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಾಯಕತ್ವದ ಗುಣದ ಜೊತೆಗೆ, ಶಿಸ್ತು, ಸೇವಾ ಮನೋಭಾವ, ಅನುಕಂಪ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಕಲಿಸಿಕೊಡಲಿವೆ. ಮಕ್ಕಳಲ್ಲಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗೆ ಅಭಿವ್ಯಕ್ತಿ ವೇದಿಕೆಯಾಗಿದೆ ಎಂದು ಹೇಳಿದರು.

ಅಭಿವ್ಯಕ್ತಿಯ ಸಂಚಾಲಕರಾದ ಸೌಮ್ಯ ಎಲ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಸಂಚಾಲಕರಾದ ಡಾ. ರಾಕೇಶ್ ಎಚ್. ಡಾ. ಸೌಮ್ಯಶ್ರೀ ಆರ್., ನಯನ ಎಂ., ಡಾ. ಪದ್ಮಜ ವೈ.ಎಂ., ವ್ಯವಸ್ಥಾಪಕರಾದ ಪಿ.ಜಿ.ಗಂಗಣ್ ಅವರು ಉಪಸ್ಥಿತರಿದ್ದರು. ಗಾಯಕ ವ್ಯಾಸರಾಜ್ ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ಬಿಮೋಲ್ ವಿರುದ್ಧ ಬಿಜೆಪಿ ಹೋರಾಟ
ಎನ್‌ಡಿಎ ಅಭ್ಯರ್ಥಿ ರಂಗನಾಥ್ ಬೆಂಬಲಿಸಲು ಇ.ಕೃಷ್ಣಪ್ಪ ಕರೆ