ಸಮಿತಿ ಸಭೆ । ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್ । ಶಾಲೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಆದ್ಯತೆ ಕನ್ನಡಪ್ರಭ ವಾರ್ತೆ ಹಳೇಬೀಡು
ಕೆಪಿಎಸ್ ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಳೇಬೀಡು ಕೆಪಿಎಸ್ ಶಾಲೆ ಹಾಸನ ಜಿಲ್ಲೆಗೆ ಮಾದರಿ ಶಾಲೆಯಾಗಿದೆ. ಇಲ್ಲಿ ೧ ರಿಂದ ೧೨ನೇ ತರಗತಿವರೆಗೆ ೧೬೦೦ ಮಕ್ಕಳು ಓದುತ್ತಿರುವ ಶಾಲೆಯಾಗಿದ್ದು, ಪ್ರತಿ ವರ್ಷ ಒಳ್ಳೆಯ ಫಲಿತಾಂಶ ನೀಡುತ್ತ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ಕೆಪಿಎಸ್ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ೧ ಕೋಟಿ ರು. ಶಾಲಾ ಅಭಿವೃದ್ಧಿಯ ಅನುದಾನದ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.ಶಾಲಾ ಅಭಿವೃದ್ಧಿ ಸದಸ್ಯ ಎಚ್. ಪರಮೇಶ ಮಾತನಾಡಿ, ಈ ಶಾಲೆಯನ್ನು ನೋಡಿಕೊಳ್ಳಲು ಭದ್ರತೆ ಬಗ್ಗೆ (ಸೆಕ್ಯೂರಿಟಿ) ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಶೌಚಾಲಯ ಬಗ್ಗೆ ತಕ್ಷಣವೇ ಸ್ವಚ್ಛತೆಗಾಗಿ ಶಾಲಾ ಸಮಿತಿಯಿಂದ ವೇತನವನ್ನು ನೀಡಲಾಗುವುದು. ಕುಡಿಯುವ ನೀರಿನ ಬಗ್ಗೆ ಪಂಚಾಯಿತಿಗೆ ಸೂಕ್ತ ಸಲಹೆ ನೀಡಿ ಅದರ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಶಾಲೆಯ ಆವರಣದ ಮುಂಭಾಗದಲ್ಲಿ ಮಳಿಗೆ ನಿರ್ಮಾಣದ ಬಗ್ಗೆ ಸಲಹೆ ಪಡೆದು ಅಡಿ ೧೦೦ ರುಪಾಯಿ ಹಣವನ್ನು ನಿಗದಿ ಮಾಡಿ ಒಂದೇ ತರದ ಮಳಿಗೆಯನ್ನು ಮಾಡಲಾಗುವುದು. ಎಲ್ಲಾ ವ್ಯಾಪಾರಗಳು ಅನುಕೂಲ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ವಿನುತ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ, ಎಲ್ಲಾ ಉಪನ್ಯಾಸ ವರ್ಗದವರು, ಶಿಕ್ಷಕರು ಹಾಗೂ ಎಲ್ಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಜರಿದ್ದರು.