ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಸೇವೆ ಅಗಾಧ: ಭೈರನಹಟ್ಟಿ ಶ್ರೀಗಳು

KannadaprabhaNewsNetwork |  
Published : Jan 14, 2024, 01:33 AM ISTUpdated : Jan 14, 2024, 05:35 PM IST
ಕಾರ್ಯಕ್ರಮದಲ್ಲಿ ಉಪನ್ಯಾಸಕ ನಾಗರಾಜ.ಎಸ್.ಹೊನ್ನೂರು ಮಾತನಾಡಿದರು. | Kannada Prabha

ಸಾರಾಂಶ

ಬಸವಣ್ಣನವರು ಜಾತಿ ಮತ ಪಂಥಗಳನ್ನು ತೊರೆದು ಸಮಾನತೆಯ ಸಂದೇಶವನ್ನು ಸಾರಿ ವಿಶ್ವಗುರು ಎನಿಸಿದ್ದಾರೆ. ಅದೇ ರೀತಿ ಕುವೆಂಪು ಅವರು ನಾವೆಲ್ಲರೂ ಭಾರತೀಯರು ಒಂದೇ ಎಂಬ ಸಂದೇಶವನ್ನು ಸಾರಿ ವಿಶ್ವಮಾನವರಾದರು.

ಗದಗ: ಬಸವಣ್ಣನವರು ಜಾತಿ ಮತ ಪಂಥಗಳನ್ನು ತೊರೆದು ಸಮಾನತೆಯ ಸಂದೇಶವನ್ನು ಸಾರಿ ವಿಶ್ವಗುರು ಎನಿಸಿದ್ದಾರೆ. ಅದೇ ರೀತಿ ಕುವೆಂಪು ಅವರು ನಾವೆಲ್ಲರೂ ಭಾರತೀಯರು ಒಂದೇ ಎಂಬ ಸಂದೇಶವನ್ನು ಸಾರಿ ವಿಶ್ವಮಾನವರಾದರು. 

ಬಸವೇಶ್ವರರ ಬಗ್ಗೆ ಅಪಾರ ಭಕ್ತಿ ಶ್ರದ್ಧೆಯನ್ನು ಕುವೆಂಪು ಅವರು ಹೊಂದಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಅವರ ಸೇವೆ ಮತ್ತು ಕೊಡುಗೆ ಅಗಾಧವಾದುದು ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮಿಗಳು ಹೇಳಿದರು.

ನಗರದ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ೨೬೭೫ನೇ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದರು.

ನರೇಗಲ್ ಅನ್ನದಾನೀಶ್ವರ ಮಹಾವಿದ್ಯಾಲಯದ ಉಪನ್ಯಾಸಕ ನಾಗರಾಜ ಎಸ್. ಹೊನ್ನೂರು ಅವರು ಕುವೆಂಪು ಬದುಕು-ಬರಹ ಕುರಿತು ಮಾತನಾಡಿ, ಕುವೆಂಪು ಅವರ ಆತ್ಮವೇ ಕನ್ನಡವಾಗಿತ್ತು, ದೇಹ ಭಾರತವಾಗಿತ್ತು, ವಿಚಾರಗಳು ವಿಶ್ವಮಯವಾಗಿದ್ದವು. 

ಕನ್ನಡ ನಾಡು-ನುಡಿಗೆ ಕುವೆಂಪು ಅವರ ಕೊಡುಗೆ ಅನನ್ಯ ಮತ್ತು ಅನುಪಮ. ಪ್ರಸ್ತುತ ದಿನಮಾನದ ಮಕ್ಕಳನ್ನು ವಿಶ್ವಮಾನವರನ್ನಾಗಿ ರೂಪಿಸುವಲ್ಲಿ ಕುವೆಂಪು ಅವರ ಪ್ರತಿಯೊಂದು ವಿಚಾರಧಾರೆಗಳು ಅತ್ಯಂತ ಪ್ರಮುಖವಾಗಿವೆ ಎಂದರು.

ಈ ವೇಳೆ ರೆವರೆಂಡ್‌ಜಾನ್ ಕೆ. ದೊಡಮನಿ ಮಾತನಾಡಿದರು. ಪ್ರೇಜ್ ಗಾಸ್ಪೆಲ್ ಮ್ಯೂಜಿಕ್ ತಂಡ ಕ್ರಿಸ್‌ಮಸ್ ಗೀತೆಯನ್ನು ಪ್ರಸ್ತುತಪಡಿಸಿದರು. ಗುರುನಾಥ ಸುತಾರ ಮತ್ತು ಅಶೋಕ ಸುತಾರ ತಂಡದಿಂದ ವಚನ ಸಂಗೀತ ಜರುಗಿತು. 

ವರ್ಷಾ ಆರ್. ಮಳಜಿ ಧರ್ಮಗ್ರಂಥ ಪಠಣಗೈದರು. ಸನ್ಮತಿ ಎಸ್. ಕಾಟ್ರಳ್ಳಿ ಅವರಿಂದ ವಚನ ಚಿಂತನ ನಡೆಯಿತು. ಶಿವಾನುಭವ ಭಕ್ತಿಸೇವೆಯನ್ನು ವಸಿದ ಸಂಗಮೇಶ ದುಂದೂರು ಹಾಗೂ ಕುಟುಂಬವರ್ಗ ಅವರನ್ನು ಶ್ರೀಗಳು ಸನ್ಮಾನಿಸಿದರು.

ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಜಯಕುಮಾರ ರೇಮಠ, ರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ಶಿವಾನುಭವ ಸುತಿ ಚೇರಮನ್ ವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ