ಕನ್ನಡಪ್ರಭ ವಾರ್ತೆ ವಿಜಯಪುರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ, ರಾಹುಲ್ ಗಾಂಧಿಯವರು, ಸಚಿವರು, ಶಾಸಕರು, ಕಾರ್ಯಕರ್ತರು, ಪದಾಧಿಕಾರಿಗಳು ಎಲ್ಲರೂ ಅವರ ಪರವಾಗಿದ್ದೇವೆ ಎಂದರು.ಸತೀಶಗೆ ಲಕ್ಷ್ಮಣ ಸವದಿ ಬೆಂಬಲ ವಿಚಾರ
ಸತೀಶ ಜಾರಕಿಹೋಳಿ ಇರಲಿ, ಎಂ.ಬಿ.ಪಾಟೀಲ್ ಇರಲಿ, ಯಾರೇ ಇರಲಿ ಸಿಎಂ ಕುರ್ಚಿ ಖಾಲಿ ಇಲ್ಲ.ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಎಂ.ಬಿ.ಪಾಟೀಲಗಿಂತ ಬಹಳ ಜನ ಹಿರಿಯರಿದ್ದಾರೆ ಎಂಬ ಶಿವಾನಂದ ಪಾಟೀಲ್ ಹೇಳಿಕೆ ವಿಚಾರ. ಸಿದ್ದರಾಮಯ್ಯ ಅವರದ್ದು ಸ್ಪೆಷಲ್ ಕೇಸ್, ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ತಪ್ಪು. ಕಟ್ಟ ಕಡೆಯ ಬಾರಿ ಹೇಳುತ್ತಿದ್ದೇನೆ 2004 ರಲ್ಲಿ ನನಗಾಗಿ ಶಿವಾನಂದ ಪಾಟೀಲ್ ತ್ಯಾಗ ಮಾಡಿದರು ಎಂದು ಅವರ ಸಹೋದರ ವಿಜುಗೌಡ ಪಾಟೀಲ್ ಹೇಳುತ್ತಾನೆ. ವಿಜುಗೌಡ ಪಾಟೀಲ್ ಎಂ.ಬಿ.ಪಾಟೀಲ್ ವಿರುದ್ದ ಸ್ಪರ್ಧಿಸಿ ನಾಲ್ಕು ಬಾರಿ ಸೋತ ಅಭ್ಯರ್ಥಿ. ಎರಡು ಬಾರಿ ಜೆಡಿಎಸ್‌ನಿಂದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ವಿಜುಗೌಡ ಪಾಟೀಲ್ ಎಂದರು. ಇದೆಲ್ಲ ಸತ್ಯವೋ ಸುಳ್ಳೋ ಎಂದು ಸೋರಗಾಂವ್ ಅವರನ್ನ ಕೇಳಿ?. ಸುಮ್ಮನೇ ಕ್ಷೇತ್ರ ಬಿಟ್ಟು ಕೊಡಲಾಗಿದೆ ಎಂಬುದಕ್ಕೆ ಇತಿಶ್ರೀ ಹಾಡಬೇಕಿದೆ ಎಂದರು.ಸದ್ಯ ನಾವು ಒಗ್ಗಟ್ಟಾಗಿರಬೇಕಿದ್ದು, ಸಿದ್ದರಾಮಯ್ಯರನ್ನು ಬೆಂಬಲಿಸಬೇಕಿದೆ. ಅವರಿಗೆ ನೈತಿಕ ಸ್ಥೈರ್ಯ ತುಂಬಬೇಕಿದೆ. ಸಿದ್ದರಾಮಯ್ಯ ಬಹಳ ಬಲಿಷ್ಟರಾಗಿದ್ದಾರೆ ಎಂದರು.ಕೋಟ್ನಾನು ಡಿಕೆಶಿ ಸೀನಿಯರ್ ಇದ್ದೇವೆ. ಸತೀಶ ಜಾರಕಿಹೊಳಿಗಿಂತ ನಾನು ಸೀನಿಯರ್. ಪರಮೇಶ್ವರ ಅವರು ನಾವೆಲ್ಲ ಒಂದೇ ಹಂತದಲ್ಲಿದ್ದೇವೆ. ನಮಗಿಂತ ಸೀನಿಯರ್ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಸಿಎಂ ಮಾಡುವ ವೇಳೆ ಸೀನಿಯರ್ ಜೂನಿಯಾರಿಟಿ ಪ್ರಶ್ನೆ ಬರಲ್ಲ. ಶರದ್ ಪವಾರ ಉದಾಹರಣೆ ಇದೆ. ನಮ್ಮಲ್ಲೇ ಗುಂಡೂರಾವ್, ದೇವರಾಜ ಅರಸ್ ಇದ್ದಾರೆ. ಬೇರೆ ಪಕ್ಷಗಳ ನೂರಾರು ಜನ 28 ವರ್ಷಕ್ಕೆ ಸಿಎಂ ಆಗಿದ್ದಾರೆ.ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ