ಪರಶಿವಮೂರ್ತಿ ದೋಟಿಹಾಳ
ಪಟ್ಟಣದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಏಕೈಕ ಅಗ್ನಿಶಾಮಕ ವಾಹನವಿದ್ದು ಬೆಂಕಿ ಅವಘಡಗಳು ನಡೆದಾಗ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಕುಷ್ಟಗಿ, ಹನುಮಸಾಗರ, ಹನುಮನಾಳ, ತಾವರಗೇರಾ ಹೋಬಳಿ ಪೈಕಿ 177 ಹಳ್ಳಿಗಳು ಬರುತ್ತಿದ್ದು ಇದರ ಜತೆಗೆ ಯಲಬುರ್ಗಾ ತಾಲೂಕಿನ ನಾಲ್ಕೈದು ಹಳ್ಳಿಗಳು ಸಹಿತ ಈ ಠಾಣಾ ವ್ಯಾಪ್ತಿಯಲ್ಲಿ ಬರುತ್ತವೆ. ಈ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಅವಘಡಗಳು ಉಂಟಾದಲ್ಲಿ ಅವುಗಳ ಸಂರಕ್ಷಣೆಗೆ ಇರುವುದು ಒಂದೇ ವಾಹನ.
ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು ಎರಡು ಜಲವಾಹನಗಳು ಇದ್ದು ಅದರಲ್ಲಿ ಒಂದು ಹದಿನೈದು ವರ್ಷಕ್ಕೂ ಮೀರಿದ್ದಾಗಿದೆ. ಒಂದು ವಾಹನದ ಸೇವೆಯನ್ನು ಸರ್ಕಾರದ ನಿರ್ದೇಶನದ ಪ್ರಕಾರ ಸ್ಥಗಿತಗೊಳಿಸಲಾಗಿದೆ. ಒಟ್ಟು 27 ಸಿಬ್ಬಂದಿಗಳ ಪೈಕಿ ಒಂದು ಫೈರ್‌ಮನ್ ಹುದ್ದೆ ಮಾತ್ರ ಖಾಲಿ ಇದ್ದು 26 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಬೆಂಕಿಯ ಅವಘಡಗಳ ಸುದ್ದಿ ಬಂದ ತಕ್ಷಣವೇ ಸಕಾಲಕ್ಕೆ ಹೋಗಿ ಬೆಂಕಿ ನಂದಿಸುತ್ತಿದ್ದಾರೆ. ಸದ್ಯ ಬೇಸಿಗೆ ಆರಂಭವಾಗಿದ್ದು ಈಗಾಗಲೆ ತಾಲೂಕಿನಲ್ಲಿ ಬೆಂಕಿ ಅವಘಡಗಳ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಫೆಬ್ರವರಿ ತಿಂಗಳಿನಲ್ಲಿ ಒಟ್ಟು 47 ಅಗ್ನಿ ಅವಘಡ ನಡೆದಿವೆ. ಹೀಗಾಗಿ ಮತ್ತೊಂದು ವಾಹನದ ಅವಶ್ಯಕತೆ ಇದೆ ಎನ್ನುತ್ತಾರೆ ಸಿಬ್ಬಂದಿ.ಕಳೆದ ವರ್ಷ 89 ಅವಘಡ:
ಪರಿಸರ ಕಾಳಜಿ:
- ಹೊಲದಲ್ಲಿ ಕಳೆ ಸುಡುವ ರೈತರು ಬೆಂಕಿ ಆರುವ ತನಕ ಅಲ್ಲಿಯೇ ಇರಬೇಕು
- ಮನೆಯ ಸುತ್ತಮುತ್ತ ಕಸಕ್ಕೆ ಬೆಂಕಿ ಹಾಕಬೇಡಿಅಗ್ನಿಶಾಮಕ ಠಾಣೆಯಲ್ಲಿ ಎರಡು ವಾಹನಗಳಿದ್ದು ಅದರಲ್ಲಿ ಒಂದು ಹಳೆಯದಾಗಿದೆ. ಇನ್ನೊಂದನ್ನು ಮಾತ್ರ ಬಳಸುತ್ತಿದ್ದೇವೆ. ಸಲಕರಣೆ ಹಾಗೂ ಸಿಬ್ಬಂದಿಗೆ ಕೊರತೆಯಿಲ್ಲ. ಠಾಣಾ ವ್ಯಾಪ್ತಿಯಲ್ಲಿ ಫೆಬ್ರುವರಿ ತಿಂಗಳಲ್ಲಿ 47 ಅಗ್ನಿ ಅವಘಡಗಳು ಉಂಟಾಗಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕುಷ್ಟಗಿ ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಹೇಳಿದರು.