ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಯೋಜನಾಧಿಕಾರಿಗಳು ರಾಘವೇಂದ್ರ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಿಂದ ರಾಜ್ಯದ ಜನತೆಗೆ ಹಾಗೂ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಸ್ವಾಮಿಯ ಪ್ರಸಾದ ರೂಪದಲ್ಲಿ ಕೋಟ್ಯಂತರ ರು.ಗಳನ್ನು ಹಣ ಸಹಾಯ ದೊರೆಯುತ್ತಿದೆ. ಸರ್ಕಾರ ಮಾಡದೇ ಇರುವ ಕೆಲಸವನ್ನು ಧರ್ಮಸ್ಥಳ ಸಂಘ ಮಾಡುತ್ತಿದ್ದೆ ಶಿಕ್ಷಣ ವಿಭಾಗ, ಮಹಿಳಾ ಸಬಲೀಕರಣ, ಕೃಷಿ ಚಟುವಟಿಕೆಗಳು, ರಾಜ್ಯದ ಜನಗೆ ಅತಿ ಕಡಿಮೆ ಬಡ್ಡಿ ದರದಲ್ಲಿ, ಪ್ರಗತಿನಿಧಿ ಸೌಲಭ್ಯ ಕೆರೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಗಂಗಾ ಘಟಕ, ಜನಜಾಗೃತಿ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ಇಷ್ಟಲ್ಲದೆ ರಾಜ್ಯದ ನಮ್ಮ ಧಾರ್ಮಿಕ ಕ್ಷೇತ್ರಗಳ ಉಳಿವಿಗಾಗಿ ದೇವಸ್ಥಾನದ ಜೀರ್ಣೋದ್ಧಾರಗಳಿಗೆ ಸಹಾಯಧನವನ್ನು ಒದಗಿಸುವ ಅತ್ಯಂತ ಪುಣ್ಯದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ದೇವರಾಜ್, ಕಾರ್ಯದರ್ಶಿ ಯೋಗೇಶ್, ನವಜೀವನ ಸಮಿತಿ ಅಧ್ಯಕ್ಷ ಉಮೇಶ್, ಕೃಷಿ ಮೇಲ್ವಿಚಾರಕ ಸೇವಾಪ್ರತಿನಿಧಿ, ಕಮಿಟಿ ಸದಸ್ಯರು ಗ್ರಾಮಸ್ಥರು ಭಾಗವಹಿಸಿದರು.