ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಸ್ಕರಿಸದ ತ್ಯಾಜ್ಯವನ್ನು ಬೇರ್ಪಡಿಸುವ ಮತ್ತು ಮರುಬಳಕೆ ಮಾಡುವ ಕಾರ್ಯವನ್ನು ಕೋಲಾರ ಯೋಜನಾ ನಿರ್ದೇಶಕ ಅಂಬಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲೆಯ ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಪರಂಪರೆ ತ್ಯಾಜ್ಯವನ್ನು ಬೇರ್ಪಡಿಸಿ ವಿಂಗಡಣೆ ಮಾಡಿಲು ೧೪ ಕೋಟಿ ರುಪಾಯಿಗಳ ಟೆಂಡರ್ ಮಾಡಿದ್ದು, ಮೊದಲ ಭಾಗವಾಗಿ ಕೆಜಿಎಫ್ ನಗರಸಭೆ ತ್ಯಾಜ್ಯ ಘಟಕದಲ್ಲಿ ೧ ಲಕ್ಷ ಟನ್ ತ್ಯಾಜ್ಯವನ್ನು ವಿಂಗಡಣೆ ಮಾಡುವ ಕಾರ್ಯ ನಡೆಯುತ್ತಿದೆ.ಪ್ಲಾಸ್ಟಿಕ್ ತ್ಯಾಜ್ಯ ಆಂಧ್ರಕ್ಕೆ
ಎರಡು ತಿಂಗಳಲ್ಲಿ ಬೇರ್ಪಡಿಸಿದ ಪ್ಲಾಸ್ಟಿಕ್ ಅನ್ನು ಆಂಧ್ರಪ್ರದೇಶದ ಕಡಪದಲ್ಲಿರುವ ಸಿಮೆಂಟ್ ಕಾರ್ಖಾನೆಗೆ ನೀಡಬೇಕು, ನಿರುಪಯುಕ್ತ ವಸ್ತುಗಳಾದ ಪಿಂಗಾಣಿ, ಗಾಜು ಇತರೆ ವಸ್ತುಗಳನ್ನು ತ್ಯಾಜ್ಯ ಸಂಸ್ಕರಣ ಘಟಕದ ತೊಟ್ಟಿಯಲ್ಲಿ ಶೇಖರಣೆ ಮಾಡಬೇಕು, ಇನ್ನೂ ಮಣ್ಣು ಮತ್ತು ತ್ಯಾಜ್ಯದಿಂದ ಕೂಡಿರುವ ಗೊಬ್ಬರವನ್ನು ರೈತರಿಗೆ ನೀಡುವಂತಹ ಕೆಲಸವನ್ನು ಗುತ್ತಿಗೆ ಪಡೆದುವರು ಮಾಡಬೇಕು ಎಂದು ಯೋಜನಾ ನಿರ್ದೇಶಕರು ತಿಳಿಸಿದರು.ಅಪಾಯಕಾರಿ ತ್ಯಾಜ್ಯದಿಂದ ಸುತ್ತಲು ಇರುವ ಪರಿಸರವನ್ನು ಹಾಳು ಮಾಡುವುದರ ಜೊತೆಗ ಕುಡಿವ ನೀರು ಹಾಗೂ ಪರಿಸರದೊಂಗೆ ಬೆರೆತು ವಾಯು ಮಾಲಿನ್ಯ ಉಂಟಾಗಲಿದೆ. ಸಾವಯವ ತ್ಯಾಜ್ಯದ ಕೊಳಯುವಿಕೆಯಿಂದಾಗಿ ಭೂಕುಸಿತ ತಾಣಗಳು, ಮೀಥೇನ್ ಹೊರಸೂಸುತ್ತವೆ, ದಹನಕಾರಿ ಅನಿಲದಿಂದ ಉಂಟಾಗುವ ಬೆಂಕಿಯ ಘಟನೆಗಳು ಅಂತಹ ತಾಣಗಳ ಸುತ್ತಲೂ ಮಾಲಿನ್ಯವನ್ನು ಹೆಚ್ಚಿಸಲಿದೆ, ಅದ್ದರಿಂದ ತ್ಯಾಜ್ಯವನ್ನು ವಿಂಗಡಿಸಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲಾಗುವುದು ಎಂದರು.ಅಪಾಯವೂ ಇದೆ:
ಒಂದು ವೇಳೆ ಪಾರಂಪರಿಕ ತ್ಯಾಜ್ಯ ಸ್ಥಳದಲ್ಲಿ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಿದರೂ, ತ್ಯಾಜ್ಯದಿಂದ ಹೊರಸೂಸುವಿಕೆಯು ತಾನಾಗಿಯೇ ನಿಲ್ಲಲು ಇನ್ನೂ ೨೫ ರಿಂದ ೩೦ ವರ್ಷಗಳು ಬೇಕಾಗುತ್ತದೆ ಎಂದು ಪರಿಸರ ಎಂಜಿನಿಯರಿಂಗ್ ವಿಭಾಗ ತಿಳಿಸಿದೆ. ಹೊರಸೂಸುವಿಕೆಯ ತೀವ್ರತೆಯು ಕನಿಷ್ಟ ೫ ವರ್ಷಗಳವರೆಗೆ ಸಾಕಷ್ಟು ಹೆಚ್ಚಾಗಿರುತ್ತದೆ. ಮಿತಿಗೊಳಿಸುವಿಕೆಯು ಇತರ ಮಿತಿಗಳು ಮತ್ತು ಸಂಬಂಧಿತ ಅಪಾಯಗಳನ್ನು ಹೊಂದಿದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಅಂಜಿನೇಯಲು, ನಗರಸಭೆ ಸದಸ್ಯರ ಕರುಣಾಕರನ್, ವಿಜಯಕುಮಾರ್ ಆರೋಗ್ಯದಿಕಾರಿ ಮಂಗಳಗೌರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.