ಹುಬ್ಬಳ್ಳಿ:
ಅವರು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಪ್ರೊ. ಶ್ರೀನಿವಾಸ ತೋಫಖಾನೆ ಅವರ ಅಭಿಮಾನಿಗಳು, ಬಂಧುಗಳು ಹಾಗೂ ಸಾಹಿತ್ಯ ಪ್ರಕಾಶನದ ವತಿಯಿಂದ ಆಯೋಜಿಸಿದ್ದ "ಪ್ರೊ. ಶ್ರೀನಿವಾಸ ತೋಫಖಾನೆ ಅವರ ಶತಮಾನದ ನೆನಪು, ನಮನ " ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ತೋಫಖಾನೆ ಅವರ ಕೃತಿಗಳಲ್ಲಿ ಬದುಕಿನ ಅನುಭವ, ಚಿಂತನೆ ಹಾಗೂ ಮಾನವೀಯ ಮೌಲ್ಯಗಳು ಹಾಸುಹೊಕ್ಕಾಗಿವೆ. ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ಗೀತ ರಾಮಾಯಣ ಮರುಮುದ್ರಣ ಕೃತಿಯನ್ನು ಅವಲೋಕಿಸುವುದು ಸುಧೆಯ ಅನುಭವ. ಇಂತಹ ಕೃತಿಗಳ ಮೂಲಕ ರಾಮನ ಗುಣ, ಆದರ್ಶ ಹಾಗೂ ಜೀವನ ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದರು.ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ತೋಫಖಾನೆ ಅವರು ಸಂಸ್ಕೃತ ಭಾಷೆಯ ಆಳವಾದ ಅಧ್ಯಯನ ಹೊಂದಿದ್ದ ಅಪರೂಪದ ವಿದ್ವಾಂಸರು. ಸಂಸ್ಕೃತದ ವಿಶಿಷ್ಟ ಹಾಗೂ ವಿಶಾಲ ಅಧ್ಯಯನವೇ ಅವರ ಚಿಂತನಾ ಕ್ರಮಕ್ಕೆ ಗಟ್ಟಿಯಾದ ಅಡಿಪಾಯವಾಗಿತ್ತು. ಇದರಿಂದ ಕನ್ನಡದಲ್ಲಿ ವಿಶಿಷ್ಟವಾದ ಬರವಣಿಗೆ ನೀಡಲು ಸಾಧ್ಯವಾಯಿತು ಎಂದು ಹೇಳಿದರು.
ಕೃತಿಯ ಆಯ್ದ ಭಾಗಗಳನ್ನು ವಿದ್ವಾನ್ ಸುಜಯ ಶಾನಭಾಗ ಹಾಗೂ ವಿದ್ವಾನ್ ಶ್ರೀಹರ್ಷ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಕಲಾವಿದ ಸತೀಶ ಯಲ್ಲಾಪುರ ಅವರು ಚಿತ್ರಕಲೆಯ ಮೂಲಕ ಕೃತಿಯ ಭಾವವನ್ನು ಕಟ್ಟಿಕೊಟ್ಟರು.