)
ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಪ್ರಯೋಜಿತ ಯುವ ಸಂಸತ್ತು, ಮೈ ಭಾರತ್ ಕೇಂದ್ರ ಹಾಗೂ ಕೃಷಿ ತಾಂತ್ರಿಕ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಜಿಲ್ಲಾಮಟ್ಟದ ‘ವಿಕಸಿತ ಭಾರತ ಯುವ ಸಂಸತ್ತು 2027’ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಭಾರತೀಯ ಪ್ರಜೆಗಳಾದ ನಾವೆಲ್ಲರೂ ಒಂದು ನಮಗೆ ಒಂದೇ ರಾಷ್ಟ್ರ ಒಂದೇ ಸಂವಿಧಾನ ಹಾಗೆ ಒಂದೇ ಚುನಾವಣೆ ಆಗಬೇಕು ಅದರಲ್ಲಿ ಎಲ್ಲ ಯುವ ಸಮುದಾಯ ಪ್ರಾಮಾಣಿಕವಾಗಿ ಸ್ವಪ್ರೇರಣೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಕೆ.ವಿ.ಪ್ರಕಾಶ್ ಅವರು ಮಾತನಾಡಿ, ಯುವಕರು ಸಂಸತ್ತಿಗೆ ಹೋಗಬೇಕು ಅದು ಈ ವಿಕಸಿತ ಭಾರತ ಯುವ ಸಂಸತ್ತು ಕಾರ್ಯಕ್ರಮದ ಮೂಲಕ ನಾಂದಿ ಆಗಬೇಕು ಮತ್ತು ಚುನಾವಣೆಯಲ್ಲಿ ಗೆದ್ದು ಸಂಸದರು ಪಾರ್ಲಿಮೆಂಟಿಗೆ ಹೋಗುತ್ತಾರೆ, ಹಾಗೆಯೇ ವಿಕಸಿತ ಭಾರತ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಗೆದ್ದು ವಿದ್ಯಾರ್ಥಿಗಳು ಕೂಡ ರಾಷ್ಟ್ರಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾರ್ಲಿಮೆಂಟ್ಗೆ ಹೋಗಬಹುದು ಎಂದು ಹೇಳಿದರು.ಮೈ ಭಾರತ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಸ್ವಾತಿ ಜಿ. ಮಾತನಾಡಿದರು. ವಿದ್ಯಾರ್ಥಿಗಳು ಒಂದು ದೇಶ ಒಂದು ಚುನಾವಣೆ ಎಂಬ ವಿಷಯದ ಮೇಲೆ ಬಹು ಉತ್ಸುಖದಿಂದ ಕನ್ನಡ ಹಿಂದಿ ಇಂಗ್ಲಿಷ್ ಭಾಷೆಗಳಲ್ಲಿ ತಮಗೆ ನಿಗದಿ ಪಡಿಸಿದ ಮೂರು ನಿಮಿಷಗಳ ಕಾಲಾವಕಾಶದಲ್ಲಿ ವಿಚಾರಗಳನ್ನು ಮಂಡಿಸಿದರು. 5 ಜನ ನಿರ್ಣಾಯಕರ ನಿರ್ಣಯದ ಮೇರೆಗೆ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳ ಪೈಕಿ ಹನುಮೇಶ್ ಪೂಜಾರಿ ಪ್ರಥಮ ಸ್ಥಾನ, ನೇಹ ಶ್ರೀ ದ್ವಿತೀಯ ಹಾಗೂ ಹನುಮೇಶ ತೃತೀಯ ಸ್ಥಾನದ ವಿಜೇತರಾದವು ಇವರಿಗೆ ಗಣ್ಯರು ಪ್ರಶಸ್ತಿ ವಿತರಿಸಿದರು.