ಕೇಂದ್ರದ ಧೋರಣೆಗಳ ವಿರುದ್ಧ ಸದಾ ಎಚ್ಚರದಿಂದ ಇರಬೇಕು-ಡಾ. ಶಂಭು ಬಳಿಗಾರ

KannadaprabhaNewsNetwork |  
Published : Dec 01, 2024, 01:30 AM IST
ಫೋಟೊ ಶೀರ್ಷಿಕೆ: 30ಹೆಚ್‌ವಿಆರ್1ಹಾವೇರಿ ನಗರದ ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕನ್ನಡದ ಪರಿಚಾರಕರನ್ನು ಸನ್ಮಾನಿಸಿ, ಗೌರವಿಸಲಾಯಿತು. | Kannada Prabha

ಸಾರಾಂಶ

ಕನ್ನಡಿಗರ ಅಸ್ಮಿತೆಗೆ ಅಪಾಯಕಾರಿ ಆಗಿರುವ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಸದಾ ಎಚ್ಚರದಿಂದ ಇರಬೇಕಾದ ಸಂದಿಗ್ಧತೆ ಬಂದಿದೆ. ನಮ್ಮ ಮೇಲೆ ಸದಾ ತೂಗುಗತ್ತಿ ತೂಗುತ್ತಿರುವ ಬಗ್ಗೆ ಜಾಗೃತರಾಗುವ ಅನಿವಾರ್ಯತೆಯೂ ಇದೆ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.

ಹಾವೇರಿ: ಕನ್ನಡಿಗರ ಅಸ್ಮಿತೆಗೆ ಅಪಾಯಕಾರಿ ಆಗಿರುವ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಸದಾ ಎಚ್ಚರದಿಂದ ಇರಬೇಕಾದ ಸಂದಿಗ್ಧತೆ ಬಂದಿದೆ. ನಮ್ಮ ಮೇಲೆ ಸದಾ ತೂಗುಗತ್ತಿ ತೂಗುತ್ತಿರುವ ಬಗ್ಗೆ ಜಾಗೃತರಾಗುವ ಅನಿವಾರ್ಯತೆಯೂ ಇದೆ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು. ನಗರದ ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಪಾರ ಜೀವನ ಮೌಲ್ಯ ಹೊಂದಿರುವ ಕನ್ನಡ ನಮ್ಮ ಬದುಕಿನ ಭಾಷೆಯಾಗಬೇಕು. ನಮ್ಮ ಮುಂದಿನ ಪೀಳಿಗೆಯ ಜೀವನವನ್ನು ಕಟ್ಟಿಕೊಡುವ ಸಾಧನವಾಗಬೇಕು. ಹಿಂದಿ ಭಾಷೆ ಹೇರಿಕೆ ಸೇರಿದಂತೆ ತನ್ನ ಸಂಸ್ಕೃತಿಯನ್ನು ಹೇರಲು ಬಯಸುವ ಕೇಂದ್ರ ಸರ್ಕಾರಗಳ ವಿರುದ್ಧ ಪ್ರಬಲ ವಿರೋಧ ವ್ಯಕ್ತವಾಗಬೇಕು. ಜೊತೆಗೆ ರೈಲ್ವೆ, ಅಂಚೆ ಸೇರಿದಂತೆ ಕೇಂದ್ರ ಸರ್ಕಾರದ ಸೇವೆಗೆ ಜರುಗುವ ಸ್ಪರ್ಧಾತ್ಮಕ ಪರೀಕ್ಷೆ ಕನ್ನಡ ಮಾಧ್ಯಮ ಆದ್ಯತೆಯಾಗಬೇಕು ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮಾಚರಣೆ ನಿಮಿತ್ತ ಕಳೆದ ಒಂದು ವರ್ಷದಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕನ್ನಡ-ಕನ್ನಡಿಗ- ಕರ್ನಾಟಕ ವಿಷಯದಡಿ ವಿಚಾರ ಸಂಕಿರಣ ಆಯೋಜಿಸುತ್ತ ಬಂದೆವು. ಜಿಲ್ಲೆಯಲ್ಲಿ ಅಭೂತಪೂರ್ವ ಯಶಸ್ವಿ ಕಾರ್ಯಕ್ರಮ ನೆರವೇರಿಸಿದ ಬಗ್ಗೆ ಸಂತೃಪ್ತ ಭಾವ ನಮ್ಮದು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, 2023 ನ.1ರಿಂದ 2024 ನ.1ರ ವರೆಗೆ ಜರುಗಿದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮಗಳನ್ನು ಸಾಹಿತಿ ಸತೀಶ ಕುಲಕರ್ಣಿ ಅವರು ತಮ್ಮ ವೈಯಕ್ತಿಕ ಖರ್ಚಿನಡಿ ನಿಭಾಯಿಸಿ ನಮಗೆ ಮಾರ್ಗದರ್ಶನ ಮಾಡಿರುವರು. ಅವರ ಅನನ್ಯ ಕೊಡುಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮರೆಯಲಾರದು ಎಂದರು.ಸಮಾರೋಪ ಸಮಾರಂಭದಲ್ಲಿ ಕನ್ನಡದ ಪರಿಚಾರಕರು ಹಾಗೂ ಜಿಲ್ಲೆಯ ಎಂಟು ತಾಲೂಕಿನ ಕಸಾಪ ಅಧ್ಯಕ್ಷರನ್ನು, ಡಾ.ಶಂಭು ಬಳಿಗಾರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಹಾವೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಡಾ. ಸವಿತಾ ಹಿರೇಮಠ, ಸಿ.ವಿ. ರವಿ, ಕನ್ನಡದ ಪರಿಚಾರಕರಾದ ವೀರಣ್ಣ ಬೆಳವಡಿ, ಸುಭಾಷ್ ಮಡಿವಾಳರ, ವಿಶ್ವನಾಥ ಹಾವಣಗಿ, ಅಬ್ದುಲ್ ರಜಾಕ್ ತಹಶೀಲ್ದಾರ್, ಚನ್ನಬಸಪ್ಪ ನಾಡದ, ರಾಜಶೇಖರ ಹೊಸಳ್ಳಿ, ಬೀರೇಶ ಕರೆಡಣ್ಣವರ, ಅಮೃತಮ್ಮ ಶೀಲವಂತರ, ನೇತ್ರಾವತಿ ಅಂಗಡಿ, ಜ್ಯೋತಿ ಬಿಶೆಟ್ಟಿಯವರ, ಮಕ್ಬುಲ್ ಬೆಳವಗಿ, ಜಿಲ್ಲೆಯ ವಿವಿಧ ತಾಲೂಕಾಧ್ಯಕ್ಷರಾದ ಬಿ.ಎಂ.ಜಗಾಪುರ, ಎನ್. ಸುರೇಶಕುಮಾರ, ಷಣ್ಮುಖಪ್ಪ ಮುಚ್ಚಂಡಿ, ಪ್ರಭಾಕರ ಶಿಗ್ಲಿ, ಎನ್.ಸಿ. ಕಠಾರೆ, ಸಿ.ಎನ್. ಪಾಟೀಲ, ನಾಗಪ್ಪ ಬೆಂತೂರ ಇದ್ದರು. ಶಿವಯೋಗಿ ಹಿರೇಮಠ ನಿರೂಪಿಸಿದರು. ಚಂದ್ರಶೇಖರ ಮಾಳಗಿ ಸ್ವಾಗತಿಸಿದರು. ಪೃಥ್ವಿರಾಜ್ ಬೆಟಗೇರಿ ವಂದಿಸಿದರು.

ಸಮಾರೋಪ ಸಮಾರಂಭದಲ್ಲಿ ಕನ್ನಡದ ಪರಿಚಾರಕರು ಹಾಗೂ ಜಿಲ್ಲೆಯ ಎಂಟು ತಾಲೂಕಿನ ಕಸಾಪ ಅಧ್ಯಕ್ಷರನ್ನು, ಡಾ.ಶಂಭು ಬಳಿಗಾರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್