ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಮೂಲಕ ‘ಆರ್ಟ್ ಜರ್ನಲಿಸಂ’ ಕುರಿತು ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಕಲಾ ಪತ್ರಿಕೋದ್ಯಮಕ್ಕೆ ಕಾಲಿಡುವುದಕ್ಕೆ ಮೊದಲು ಕಲೆಯ ಜ್ಞಾನ ಹೊಂದಿರಬೇಕಾದುದು ಅವಶ್ಯಕ ಎಂದು ಕಲಾ ಪತ್ರಕರ್ತೆ, ಕೂಚಿಪುಡಿ ಕಲಾವಿದೆ ಶ್ರೀವೀಣಾ ಮಣಿ ಹೇಳಿದರು.
ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಆನ್‌ಲೈನ್ ಮೂಲಕ ‘ಆರ್ಟ್ ಜರ್ನಲಿಸಂ’ ಕುರಿತು ಮಾತನಾಡಿದರು.
ನನ್ನ ಕಲೆ ನನ್ನ ಪತ್ರಿಕೋದ್ಯಮವನ್ನು ಬೆಳೆಸಿದೆ ಮತ್ತು ನನ್ನ ಪತ್ರಿಕೋದ್ಯಮ ನನ್ನ ಕಲೆಯನ್ನು ಪೋಷಿಸಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಒಬ್ಬರು ಕಲಾ ಪತ್ರಕರ್ತರಾಗಲು ಬಯಸಿದರೆ ‘ಕಲೆಗಳ ಭಾಷೆ’ಯ ಬಗ್ಗೆ ಅರಿವು ಹೊಂದಿರುವುದು ಅಗತ್ಯ ಎಂದರು.
ನೃತ್ಯ ಪ್ರಪಂಚದೊಂದಿಗಿನ ನನ್ನ ಸ್ವಂತ ಪರಿಚಯವು ಕಲೆಯ ಮೇಲಿನ ನನ್ನ ಬರಹಗಳಿಗೆ ಸಹಾಯ ಮಾಡಿದೆ ಎನ್ನುತ್ತಾ, ರವೀಂದ್ರನಾಥ ಟಾಗೋರ್ ಅವರ ‘ಚಂಡಾಲಿಕ’ದ ತನ್ನ ನೃತ್ಯ ಸಂಯೋಜನೆಯು ತನ್ನ ಸಬಾಲ್ಟರ್ನ್ ಅಧ್ಯಯನದಿಂದ ಹೇಗೆ ಪ್ರೇರಿತವಾಗಿದೆ ಎಂಬುದನ್ನು ವಿವರಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ವರದಿಗಳು, ಪ್ರೊಫೈಲ್‌ಗಳು, ವೈಶಿಷ್ಟ್ಯಗಳು, ಸಂದರ್ಶನಗಳು ಮತ್ತು ವಿಮರ್ಶಾತ್ಮಕ ವಿಮರ್ಶೆಗಳಂತಹ ಕಲೆಗಳ ಮೇಲೆ ವಿವಿಧ ರೀತಿಯ ಬರಹಗಳು ಇರಬಹುದು ಎಂದು ವಿವರಿಸಿದರು. ನೃತ್ಯ ಕಲಾವಿದೆ ಡಾ.ಭ್ರಮರಿ ಶಿವಪ್ರಕಾಶ್ ಈ ಸಂದರ್ಭದಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.