- ತಂಬಾಕುರಹಿತ ದಿನ- ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಕೀಲ ಮಂಜುನಾಥ್ ಸಲಹೆ- - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಕೆಸಿವಿ ಐಟಿಐ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ತಂಬಾಕುರಹಿತ ದಿನ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕೆಲವರು ನಶೆಯ ಮಾಯಾಜಾಲಕ್ಕೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ -ತಾಯಿ ಕಂಡ ಭವಿಷ್ಯದ ಕನಸುಗಳಿಗೆ ತಣ್ಣೀರೆರಚುತ್ತಿರುವುದು ಬೇಸರ ಸಂಗತಿ. ಇಂದು ಶಾಲಾ- ಕಾಲೇಜುಗಳಲ್ಲಿ ಈ ವಿಷಯ ಕುರಿತು ವಿದ್ಯಾರ್ಥಿಗಳೊಂದಿಗೆ ನಿರಂತರ ಸಮಾಲೋಚನೆ ಮಾಡುವುದು ಅವಶ್ಯಕವಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಮಾತನಾಡಿ, ಮಾದಕ ದ್ರವ್ಯಗಳ ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ಬಹುಬೇಗ ಹತ್ತಿರವಾಗುತ್ತೀರಿ. ಕ್ಯಾನ್ಸರ್ ರೋಗದ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕ್ಯಾನ್ಸರ್ ರೋಗ ಬರಲು ಮೂಲ ಕಾರಣವಾದ ತಂಬಾಕು ಸೇವನೆ ತ್ಯಜಿಸಿ, ದೇಶವನ್ನು ರಕ್ಷಿಸಬೇಕು ಎಂದು ತಿಳಿಸಿದರು.
ಮಾದಕ ದ್ರವ್ಯಗಳ ಸೇವನೆ ಎನ್ನುವುದು ಆಧುನಿಕ ದೇಶದಲ್ಲಿ ರಾಷ್ಟ್ರೀಯ ಸಮಸ್ಯೆಯಾಗಿ ಕಾಡುತ್ತಿದೆ. ಇದರಿಂದ ಮುಕ್ತರಾಗಲು ಎಲ್ಲ ದೇಶದ ವಿಜ್ಞಾನಿಗಳು, ಚಿಂತಕರು. ಸರ್ಕಾರದವರು ಚಿಂತಿಸುತ್ತಿದ್ದಾರೆ. ಆದರೆ, ಇನ್ನೂ ಪರಿಣಾಮಕಾರಿಯಾದ ಪರಿಹಾರ ಕಂಡುಹಿಡಿಯಲಾಗುತ್ತಿಲ್ಲ ಎಂದರು.
ಸಾರ್ವಜನಿಕ ಆಸ್ಪತ್ರೆಯ ಡಾ.ಕಿರಣ್, ಪ್ರಾಂಶುಪಾಲ ರಾಘವೇಂದ್ರ, ಸಂಸ್ಥೆಯ ಕಾರ್ಯದರ್ಶಿ ಪರಶುರಾಮ್ ಕಾಟ್ವೆ, ಸದಸ್ಯರಾದ ಮನೋಹರ್ ಸಾ ಸೋಲಂಕಿ, ಇಲಾಖೆ ಅಧಿಕಾರಿ ಎಂ.ಉಮ್ಮಣ್ಣ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್. ಕಾಲೇಜಿನ ಸಿಬ್ಬಂದಿ, ಪಾಲ್ಗೊಂಡಿದ್ದರು.
ತಂಬಾಕು ರಹಿತ ದಿನ ಅಂಗವಾಗಿ ಹರಿಹರ ನಗರದ ಕೆಸಿವಿ ಐಟಿಐ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಮತ್ತು ಕಾನೂನು ಸೇವಾ ಸಮಿತಿಯಿಂದ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.