ಒಬ್ಬ ಕ್ಷಯ ರೋಗಿ ಸುಮಾರು 40 ಮಂದಿಗೆ ಕ್ಷಯ ಹರಡಿಸಬಲ್ಲ: ಡಾ.ಕೆ.ಎಚ್. ಪ್ರಸಾದ್

KannadaprabhaNewsNetwork |  
Published : Mar 25, 2025, 12:47 AM IST
4 | Kannada Prabha

ಸಾರಾಂಶ

ಸರ್ಕಾರ ಕೂಡ ಕ್ಷಯ ನಿಯಂತ್ರಣಕ್ಕೆ ಅನೇಕಾರು ಕಾರ್ಯಕ್ರಮ ಹಾಕಿಕೊಂಡಿದೆ. ಜನಾಂದೋಲನ ಆಯೋಜಿಸುತ್ತಿದೆ. ಇದು ಕೇವಲ ಆರೋಗ್ಯ ಇಲಾಖೆಯ ಕೆಲಸವಲ್ಲ. ಕ್ಷಯ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸಮುದಾಯದ ಸಹಕಾರ ಬಹಳ ಮುಖ್ಯ. ಪ್ರಮುಖವಾಗಿ ನಾವು ಕ್ಷಯ ರೋಗಿಯನ್ನು ಗುರುತಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕ್ಷಯ ರೋಗ ನಿರ್ಮೂಲನೆಗೆ ಸಮುದಾಯ ಸಹಭಾಗಿತ್ವ ಅಗತ್ಯ ಎಂದು ವಿಭಾಗೀಯ ಸಹ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್ಹೇಳಿದರು.

ನಗರದ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಇಡೀ ದೇಶವು ಸ್ವಾತಂತ್ರ್ಯ ಬಂದಾಗಲಿಂದಲೂ ಕ್ಷಯ ನಿಯಂತ್ರಣಕ್ಕೆ ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ, ನಿಯಂತ್ರಣ ಅಸಾಧ್ಯವಾಗುತ್ತಿದೆ. ಇದೊಂದು ರೀತಿಯಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಅಣುಬಾಂಬ್ಸ್ಫೋಟಿಸಿ ಅನೇಕರು ತೊಂದರೆಗೀಡಾದಂತೆ ಕ್ಷಯ ಗುರುತಿಸಿ ಚಿಕಿತ್ಸೆ ಪಡೆಯದಿದ್ದರೆ ಒಬ್ಬ ಕ್ಷಯ ರೋಗಿಯು ಸುಮಾರು 40 ಮಂದಿಗೆ ಕ್ಷಯ ಹರಡಿಸಬಲ್ಲ ಎಂದರು.

ಸರ್ಕಾರ ಕೂಡ ಕ್ಷಯ ನಿಯಂತ್ರಣಕ್ಕೆ ಅನೇಕಾರು ಕಾರ್ಯಕ್ರಮ ಹಾಕಿಕೊಂಡಿದೆ. ಜನಾಂದೋಲನ ಆಯೋಜಿಸುತ್ತಿದೆ. ಇದು ಕೇವಲ ಆರೋಗ್ಯ ಇಲಾಖೆಯ ಕೆಲಸವಲ್ಲ. ಕ್ಷಯ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸಮುದಾಯದ ಸಹಕಾರ ಬಹಳ ಮುಖ್ಯ. ಪ್ರಮುಖವಾಗಿ ನಾವು ಕ್ಷಯ ರೋಗಿಯನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.

ಅನೇಕ ಕ್ಷಯ ರೋಗಿಗಳು ಚಿಕಿತ್ಸೆ ಮುಂದಾಗುವುದಿಲ್ಲ. ಆದ್ದರಿಂದ ಕ್ಷಯ ನಿಯಂತ್ರಣದಲ್ಲಿ ಅನೇಕ ಸಾಮಾಜಿಕ ಸವಾಲುಗಳು ಇವೆ. ಆರಂಭಿಕ ಹಂತದಲ್ಲಿ ಕ್ಷಯ ಇದೆಯೋ ಅಥವಾ ಮಿತಿ ಮೀರಿದೆಯೋ ಎಂಬುದನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.

ಆಶ್ರಯ ಹಸ್ತ ಟ್ರಸ್ಟ್ ಎನ್.ಕೆ.ಶರ್ಮಾ ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಡಾ.ಎಂ.ಎಸ್. ಜಯಂತ್ಮತ್ತು ಸಿರಾಜ್ಅವರು ಜತೆಗೂಡಿ ಕ್ಷಯ ನಿರ್ಮೂಲನೆ ಆಯೋಜಿಸಿದ್ದೇವು. ಈ ನಿರಂತರ ಪ್ರಯತ್ನದ ಫಲವಾಗಿ ಇಂದು 32ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ, ಈಗ 13ನೇ ಸ್ಥಾನಕ್ಕೆ ಬಂದಿದೆ ಎಂದರು.

ಬಂಡೀಪುರದ ಹಾಡಿ ಜನರಿಗೂ ಸಾಕಷ್ಟು ನೆರವು ನೀಡಿದ್ದೇವೆ. ಅಂತೆಯೇ ಮೈಸೂರು ಜಿಲ್ಲೆಯ ಹಲವು ಗ್ರಾಮ ಮತ್ತು ಹಾಡಿಗಳಲ್ಲಿಯೂ ನೆರವು ನೀಡಿದ್ದೇವೆ. ಮುಂದಿನ 2 ವರ್ಷದಲ್ಲಿ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬೇಕು ಎಂಬುದು ನಮ್ಮ ಗುರಿ. ಇದಕ್ಕೆ ಅಗತ್ಯವಿರುವ ನೆರವು ನೀಡಲು ನಾವು ಬದ್ಧರಾಗಿದ್ದೇವೆ ಎಂದರು.

ರಾಜ್ಯ ಕ್ಷಯ ಘಟಕದ ಸಹ ನಿರ್ದೇಶಕ ಡಾ.ಎಸ್. ಅನಿಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ. ಅಮರನಾಥ್, ಜೆಎಸ್ಎಸ್ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣಪ್ಪ, ವಿಭಾಗೀಯ ಉಪ ನಿರ್ದೇಶಕಿ ಡಾ. ಮಲ್ಲಿಕಾ, ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಎಚ್.ಪಿ. ಶೋಭಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್. ಜಯಂತ್ ಮೊದಲಾದವರು ಇದ್ದರು.ಕ್ಷಯ ರೋಗವನ್ನು ನಿಯಂತ್ರಿಸುವಲ್ಲಿ ಆಶ್ರಯ ಹಸ್ತ ಟ್ರಸ್ಟ್ಕಾರ್ಯ ಶ್ಲಾಘನೀಯ. ಕ್ಷಯ ನಿಯಂತ್ರಣದಲ್ಲಿ 32 ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆಯನ್ನು 13ನೇ ಸ್ಥಾನಕ್ಕೆ ತಂದಿರುವುದು ಸಾಮಾನ್ಯ ವಿಷಯವಲ್ಲ.

- ಡಾ. ನಾರಾಯಣಪ್ಪ, ಪ್ರಾಂಶುಪಾಲರು, ಜೆಎಸ್ಎಸ್ವೈದ್ಯಕೀಯ ಕಾಲೇಜು

ಜಾಗೃತಿ ಜಾಥಾ

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಆರಂಭವಾದ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್, ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ ಚಾಲನೆ ನೀಡಿದರು.

ಕೆ.ಆರ್. ವೃತ್ತ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ದಿವಾನ್ಸ್ರಸ್ತೆ ಮೂಲಕ ಜಾಥಾವು ಜೆ.ಕೆ. ಮೈದಾನ ತಲುಪಿತು. ನಗರದ ವಿವಿಧ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ