ಬಾಪೂಜಿ ಮಾನವ ಎದೆಹಾಲಿನ ಭಂಡಾರಕ್ಕೆ ಒಂದು ವರ್ಷದ ಸಂಭ್ರಮ: ಡಾ.ಗುರುಪ್ರಸಾದ

KannadaprabhaNewsNetwork | Published : Mar 6, 2025 12:32 AM

ಸಾರಾಂಶ

ಬಾಪೂಜಿ ಮಾನವ ಎದೆ ಹಾಲಿನ ಭಂಡಾರ (ಹ್ಯೂಮನ್ ಮಿಲ್ಕ್ ಬ್ಯಾಂಕ್) ಆರಂಭಿಸಿ, ಮಾರ್ಚ್ 7ಕ್ಕೆ 1 ವರ್ಷ ಪೂರೈಸುತ್ತಿದೆ. ಇದು ನಮಗೆ ತುಂಬಾ ಸಂತೋಷದ ವಿಷಯವಾಗಿದೆ. ಮಧ್ಯ ಕರ್ನಾಟಕದ ನೂರಾರು ಪುಟ್ಟ ಶಿಶುಗಳನ್ನು ಉಳಿಸಲು ಈ ಬ್ಯಾಂಕ್‌ ಸಹಾಯ ಮಾಡುತ್ತಿದೆ ಎಂದು ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ಗುರುಪ್ರಸಾದ ತಿಳಿಸಿದ್ದಾರೆ.

- ನವಜಾತ ಶಿಶುಗಳ ಸಂಜೀವಿನಿ ಕೇಂದ್ರವಾಗಿರುವ ಘಟಕ- - - ದಾವಣಗೆರೆ: ಬಾಪೂಜಿ ಮಾನವ ಎದೆ ಹಾಲಿನ ಭಂಡಾರ (ಹ್ಯೂಮನ್ ಮಿಲ್ಕ್ ಬ್ಯಾಂಕ್) ಆರಂಭಿಸಿ, ಮಾರ್ಚ್ 7ಕ್ಕೆ 1 ವರ್ಷ ಪೂರೈಸುತ್ತಿದೆ. ಇದು ನಮಗೆ ತುಂಬಾ ಸಂತೋಷದ ವಿಷಯವಾಗಿದೆ. ಮಧ್ಯ ಕರ್ನಾಟಕದ ನೂರಾರು ಪುಟ್ಟ ಶಿಶುಗಳನ್ನು ಉಳಿಸಲು ಈ ಬ್ಯಾಂಕ್‌ ಸಹಾಯ ಮಾಡುತ್ತಿದೆ ಎಂದು ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ಗುರುಪ್ರಸಾದ ತಿಳಿಸಿದ್ದಾರೆ.

ಎದೆಹಾಲು- ಅಮೃತ ಸಮಾನ. ದಾವಣಗೆರೆಯಲ್ಲಿ ಆರೋಗ್ಯದ ತುರ್ತು ಸಂದರ್ಭಗಳು ಬಂದರೆ ತಕ್ಷಣ ನೆನಪಾಗುವುದು ಬಾಪೂಜಿ ಆಸ್ಪತ್ರೆಗಳು. ಅದೇ ರೀತಿ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರವು ಮಧ್ಯ ಕರ್ನಾಟಕದಲ್ಲಿ ಚಿತಪರಿಚಿತ. ಎಷ್ಟೋ ನವಜಾತ ಶಿಶುಗಳ ಸಂಜೀವಿನಿ ಈ ಕೇಂದ್ರವಾಗಿದೆ ಎಂದಿದ್ದಾರೆ.

ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿಯ ಎದೆಹಾಲು ಬಹಳ ಮುಖ್ಯ. ಇದರ ಸಲುವಾಗಿಯೇ 2024ರ ಮಾ.7ರಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಚೇರ್ಮನ್ ಎಸ್.ಎಸ್. ಮಲ್ಲಿಕಾರ್ಜುನ ಮಾರ್ಗದರ್ಶನದಲ್ಲಿ ಮಾನವ ಎದೆಹಾಲಿನ ಭಂಡಾರ (ಬಾಪೂಜಿ ಹ್ಯೂಮನ್ ಮಿಲ್ಕ್ ಬ್ಯಾಂಕ್) ಆರಂಭಿಸಲಾಯಿತು ಎಂದು ತಿಳಿಸಿದ್ದಾರೆ.

ಬಾಪೂಜಿ ಮಾನವ ಮಿಲ್ಕ್ ಬ್ಯಾಂಕ್‌ನ ಆಪ್ತ ಸಮಾಲೋಚಕರಾದ ಬಿ.ಅನಿತಾ ಅವರು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿಯುವುದಕ್ಕೆ ಈ ಎದೆಹಾಲಿನ ಭಂಡಾರ ಸಾಕ್ಷಿ. ಒಂದು ವರ್ಷ ತುಂಬಿ ಎಷ್ಟೋ ಮಕ್ಕಳಿಗೆ ಜೀವಹನಿಗಳನ್ನು ಕೊಟ್ಟು ಮಕ್ಕಳ ಆರೋಗ್ಯ ಕಾಪಾಡಿದ ಸಾರ್ಥಕತೆ ಅವರಿಗೆ ಇದೆ. ಈ ವ್ಯವಸ್ಥೆಯನ್ನು ಜಿಲ್ಲಾದ್ಯಂತ ಎಲ್ಲ ಮಕ್ಕಳಿಗೆ ವಿಸ್ತರಿಸುವ ಮಹದಾಶಯವನ್ನು ಸಂಸದರು ಹೊಂದಿದ್ದಾರೆ. ಮುಂಬರುವ ವರ್ಷದಲ್ಲಿ ಈ ಕನಸು ಈಡೇರುವಂತಾಗಲಿ ಎಂಬ ಆಶಯ ನಮ್ಮದು ಎಂದಿದ್ದಾರೆ.

- - - -4ಕೆಡಿವಿಜಿ39.ಜೆಪಿಜಿ:

ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿರುವ ತೆರೆಯಲಾಗಿರುವ ಮಾನವ ಎದೆಹಾಲಿನ ಭಂಡಾರ ಘಟಕ.

Share this article