ಆನ್‌ಲೈನ್‌ ವಂಚನೆ ಹೆಚ್ಚಳ: ಡಿವೈಎಸ್ಪಿ ವೆಂಕಟಪ್ಪ

KannadaprabhaNewsNetwork |  
Published : Aug 22, 2024, 12:48 AM IST
ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಮೊಬೈಲ್‌ಗಳನ್ನು ವಾರುಸುದಾರರಿಗೆ ವಿತರಿಸಿದರು. | Kannada Prabha

ಸಾರಾಂಶ

ಅಪರಿಚಿತರು ತಮಗೆ ಕರೆ ಮಾಡಿದಾಗ ಎಚ್ಚರಿಕೆಯಿಂದ ಇರುವ ಜತೆಗೆ ವ್ಯವಹಾರಿಕವಾಗಿ ಬಹಳ ಜಾಣ್ಮೆಯಿಂದ ಇರಬೇಕು.

ಹೂವಿನಹಡಗಲಿ: ಇತ್ತೀಚೆಗೆ ಆನ್‌ಲೈನ್‌ ವಂಚಕರ ಹಾವಳಿ ಹೆಚ್ಚಾಗುತ್ತಿದೆ. ಸಾರ್ವಜನಿಕರು ಅಪರಿಚಿತರು ನಿಮ್ಮ ಕಡೆಯಿಂದ ಬ್ಯಾಂಕ್‌ ಖಾತೆಯ ಮಾಹಿತಿ ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ. ಅಂಥವರಿಂದ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ವಾರಸುದಾರರಿಗೆ ವಿತರಿಸಿ ಮಾತನಾಡಿ, ಇತ್ತೀಚೆಗೆ ಬ್ಯಾಂಕ್ ಖಾತೆಯ ಮೂಲಕ ಹಣವನ್ನು ದೋಚುವವರ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿವೆ. ಅಪರಿಚಿತರು ತಮಗೆ ಕರೆ ಮಾಡಿದಾಗ ಎಚ್ಚರಿಕೆಯಿಂದ ಇರುವ ಜತೆಗೆ ವ್ಯವಹಾರಿಕವಾಗಿ ಬಹಳ ಜಾಣ್ಮೆಯಿಂದ ಇರಬೇಕು. ಎಟಿಎಂಗಳ ಬಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳರು, ನಿಮ್ಮ ವಸ್ತುಗಳನ್ನು ಕದಿಯಲು ಮುಂದಾಗುತ್ತಾರೆ. ಮೊಬೈಲ್ ಪೋನ್‌ಗಳನ್ನು ಜಾಗೃತೆಯಿಂದ ಇಟ್ಟುಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ನಿಮ್ಮ ಮನೆಯ ಸುತ್ತಮುತ್ತ ಓಡಾಡುವುದು ಕಂಡು ಬಂದರೆ ಕೂಡಲೇ ಹತ್ತಿರದ ಠಾಣೆಗೆ ಮಾಹಿತಿ ನೀಡಿ, ನಿಮ್ಮ ದೂರುಗಳನ್ನು ನೀಡಲು ಇಲಾಖೆಯ ವೆಬ್‌ಸೈಟ್‌ಗಳನ್ನು ಬಳಸಿ ದೂರು ದಾಖಲಿಸಬಹುದು ಎಂದರು.

ಮಹಿಳೆಯರು ತಮ್ಮ ಆಧಾರ್ ಕಾರ್ಡ್‌ಗಳನ್ನು ಜಾಗೃತೆಯಿಂದ ಇಟ್ಟುಕೊಳ್ಳಬೇಕು, ವಂಚಕರು ಅವುಗಳನ್ನು ಬಳಸಿ ಅಕ್ರಮ ಚಟುವಟಿಕೆಗಳನ್ನು ನಡೆಸಲು ಮುಂದಾಗುತ್ತಿದ್ದಾರೆ ಎಂದರು.

ಸಿಪಿಐ ದೀಪಕ್ ಬೂಸರೆಡ್ಡಿ ಮಾತನಾಡಿ, ಠಾಣೆಯಿಂದ 24 ಮೊಬೈಲ್ ಪೋನ್‌ಗಳನ್ನು ಮರಳಿ ವಾರಸುದಾರರಿಗೆ ನೀಡಲಾಗಿದೆ. ಸಾರ್ವಜನಿಕರ ಸೇವೆ ಹಾಗೂ ಭದ್ರತೆಗೆಂದು ಪೊಲೀಸ್ ಇಲಾಖೆಯ ಸಿಬ್ಬಂದಿ ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳ್ಳತನ ಹಾಗೂ ಇತರೆ ಆಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಮುಖ್ಯವಾಗಿ, ಈಗಾಗಲೇ ಎರಡು ಬಾರಿ ಮೊಬೈಲ್ ಪೋನ್‌ಗಳನ್ನು ಕಳೆದುಕೊಂಡವರಿಗೂ ಸಹ ಮರಳ ನೀಡಲಾಗಿದೆ. ಮತ್ತೆ ಅವುಗಳನ್ನು ಕಳೆದುಕೊಳ್ಳದೆ ಎಚ್ಚರಿಕೆಯಿಂದ ಇರಬೇಕು ಎಂದರು.

ಪಿಎಸ್ಐ ವಿಜಯಕೃಷ್ಣ ಹಾಗೂ ಪೊಲೀಸ್ ಸಿಬ್ಬಂದಿ ಇತರರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ