-ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ 59 ಲಕ್ಷ ಮತದಾರರು । ಪುರುಷರು 28,67,256, ಮಹಿಳಾ ಮತದಾರರು 30,40,221
ರಾಜಧಾನಿ ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಬಳಿಕ ಅಂತಿಮವಾಗಿ 59,08,151 ಮತದಾರರು ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಪೂರ್ವದಲ್ಲಿನ ಮತದಾರರ ಸಂಖ್ಯೆಗೆ ಹೋಲಿಸಿದರೆ ಒಟ್ಟು 46,88,744 ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಈ ಪೈಕಿ 32,74,564 ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 3,19,116 ಮತದಾರರು ಮೃತಪಟ್ಟಿದ್ದಾರೆ. 63,549 ಜನರ ಹೆಸರು ಡುಪ್ಲಿಕೇಟ್ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಇರುವುದು ಕಂಡು ಬಂದಿದೆ. ಉಳಿದಂತೆ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ 7,27,262 ಮತದಾರರು ಗೈರಾಗಿದ್ದ ಕಾರಣ ಹೆಸರು ಡಿಲೀಟ್ ಮಾಡಲಾಗಿದೆ.ಮಂಗಳವಾರ ಜಿಬಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಶಿಲ್ಪಾ ನಾಗ್, 28 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಎಸ್‌ಐಆರ್ ಪ್ರಕ್ರಿಯೆಯ ಮಾಹಿತಿ ಹಂಚಿಕೊಂಡರು.
ಇದೇ ಆ.24ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಗೆ ಹೋಲಿಸಿದರೆ, ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 2,74,372 ಮತದಾರರ ಹೆಸರುಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. 1,81,053 ಮತದಾರರ ವಿವರಗಳಲ್ಲಿ ಮಾರ್ಪಾಡು ಮಾಡಲಾಗಿದ್ದು, 65,881 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಈ ಪ್ರಕ್ರಿಯೆಯಿಂದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟಾರೆ 2,08,491 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ಶಿಲ್ಪಾ ನಾಗ್ ಮಾಹಿತಿ ಹಂಚಿಕೊಂಡರು.
ಇನ್ನು ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರಗಳ ಪೈಕಿ ರಾಜಾಜಿನಗರದಲ್ಲಿ ಅತಿ ಕಡಿಮೆ 1,13,833 ಮತದಾರರಿದ್ದಾರೆ. ನಂತರದಲ್ಲಿ ಶಿವಾಜಿನಗರ 1,23,953 ಹಾಗೂ ಮಲ್ಲೇಶ್ವರ 1,25,536 ಮತದಾರರಿದ್ದಾರೆ.
1,624 ಸೇವಾ ಮತದಾರರು:
-ಬಾಕ್ಸ್-28 ವಿಧಾನಸಭಾ ಕ್ಷೇತ್ರದ
ಒಟ್ಟು ಮತದಾರರು59,08,151
ಪುರುಷ ಮತದಾರರು28,67256
18-19 ವರ್ಷದ ಮತದಾರರು78,809ಅಂಗವಿಕಲ ಮತದಾರರು23,111
85 ವರ್ಷ ಮೇಲ್ಪಟ್ಟವರು40,676ಎನ್ಆರ್‌ಐ ಮತದಾರರು1,783
ಸೇವಾ ಮತದಾರರು1,624-ಬಾಕ್ಸ್-ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು?
ಯಲಹಂಕ3,17,027, ಬ್ಯಾಟರಾಯನಪುರ 3,35,342, ಯಶವಂತಪುರ 4,01,857, ದಾಸರಹಳ್ಳಿ 2,34,283, ಮಹದೇವಪುರ 4,10,671, ಬೆಂಗಳೂರು ದಕ್ಷಿಣ 4,41,232, ಆನೇಕಲ್ 2,61,527, ಕೆ.ಆರ್. ಪುರ 3,14,078, ಮಹಾಲಕ್ಷ್ಮಿ ಲೇಔಟ್ 1,66,180, ಮಲ್ಲೇಶ್ವರ 1,25,536, ಹೆಬ್ಬಾಳ 1,76,015, ಪುಲಕೇಶಿನಗರ 1,68,573, ಸರ್ವಜ್ಞನಗರ 2,37,279, ಸಿ.ವಿ.ರಾಮನ್ ನಗರ 1,37,623, ರಾಜರಾಜೇಶ್ವರಿನಗರ 2,81,687, ಶಿವಾಜಿನಗರ 1,23,953, ಶಾಂತಿನಗರ 1,33,890, ಗಾಂಧಿನಗರ 1,27,774, ರಾಜಾಜಿನಗರ 1,13,833, ಚಾಮರಾಜಪೇಟೆ 1,48,970, ಚಿಕ್ಕಪೇಟೆ 1,37,267, ಗೋವಿಂದ ರಾಜನಗರ 1,61,714, ವಿಜಯನಗರ 1,60,578, ಬಸವನಗುಡಿ 1,26,519, ಪದ್ಮನಾಭನಗರ 1,70,419, ಬಿ.ಟಿ.ಎಮ್ ಲೇಔಟ್ 1,40,689, ಜಯನಗರ1,29,296, ಬೊಮ್ಮನಹಳ್ಳಿ 2,24,339.-ಬಾಕ್ಸ್-ಎಷ್ಟು ಹೆಸರುಗಳು ಡಿಲೀಟ್
ಮೃತಪಟ್ಟವರು3,19,116ಶಾಶ್ವತವಾಗಿ ಶಿಫ್ಟ್ ಆದವರು32,74,564
1ಕ್ಕಿಂತ ಹೆಚ್ಚು ಕಡೆ ಹೆಸರಿದ್ದವರು63,549ಗೈರುಹಾಜರಿ7,27,262
ಇನ್ನಿತರ3,04,253-ಬಾಕ್ಸ್-ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು ಡಿಲೀಟ್?ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 3,63,792 ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಶಿವಾಜಿನಗರದಲ್ಲಿ ಅತಿ ಕಡಿಮೆ ಹೆಸರು 81,236 ಡಿಲೀಟ್ ಆಗಿವೆ. ಮಹದೇವಪುರದಲ್ಲಿ 2,96,029, ಬೊಮ್ಮನಹಳ್ಳಿ 2,65,894, ಕೆ.ಆರ್. ಪುರ 2,58,998, ದಾಸರಹಳ್ಳಿ 2,45,729, ರಾಜರಾಜೇಶ್ವರಿನಗರ 2,45,468, ಯಶವಂತಪುರ 2,40,023, ಬ್ಯಾಟರಾಯನಪುರ 2,26,955, ಆನೇಕಲ್ 1,73,041, ಯಲಹಂಕ 1,71,876, ಸರ್ವಜ್ಞನಗರ 1,70,702, ವಿಜಯನಗರ 1,64,122, ಗೋವಿಂದರಾಜನಗರ 1,48,927, ಬಿ.ಟಿ.ಎಮ್ ಲೇಔಟ್ 1,45,564, ಸಿ.ವಿ. ರಾಮನ್ ನಗರ 1,40,171, ಮಹಾಲಕ್ಷ್ಮಿ ಲೇಔಟ್ 1,34,468, ಹೆಬ್ಬಾಳ 1,30,524, ಪದ್ಮನಾಭನಗರ 1,26,615, ಬಸವನಗುಡಿ 1,13,256, ಗಾಂಧಿನಗರ 1,12,778, ಪುಲಕೇಶಿನಗರ 1,09,041, ಶಾಂತಿನಗರ 1,08,713, ಮಲ್ಲೇಶ್ವರ 1,08,632, ಚಾಮರಾಜಪೇಟೆ 1,07,722, ಚಿಕ್ಕಪೇಟೆ 1,04,050, ರಾಜಾಜಿನಗರ 1,00,762, ಜಯನಗರದಲ್ಲಿ 93,656 ಹೆಸರುಗಳು ಡಿಲೀಟ್ ಆಗಿವೆ.