ಕೌಶಲ್ಯ ಬೆಳೆಸಿಕೊಂಡರೆ ಮಾತ್ರ ಪದವಿಗೆ ಸಾರ್ಥಕತೆ: ಡಾ. ಎಸ್.ಎಂ. ಗಾಂವಕರ್‌

KannadaprabhaNewsNetwork |  
Published : Jul 07, 2024, 01:16 AM IST
(ಫೋಟೊ 6ಬಿಕೆಟಿ5-ಡಾ. ಎಸ್.ಎಂ. ಗಾಂವಕರ್ ಮಾತನಾಡುತ್ತಿರುವುದು.) | Kannada Prabha

ಸಾರಾಂಶ

ಸಮರ್ಥ ಉದ್ಯೋಗ ಹುಡುಕಿ ನಮ್ಮದಾಗಿಸಿಕೊಳ್ಳುವ ಕೌಶಲ್ಯ ಬೆಳೆಸಿಕೊಂಡಾಗ ಮಾತ್ರ ನಾವು ಪದವಿ ಪಡೆದಿರುವುದಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಡಾ. ಎಸ್.ಎಂ. ಗಾಂವಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮರ್ಥ ಉದ್ಯೋಗ ಹುಡುಕಿ ನಮ್ಮದಾಗಿಸಿಕೊಳ್ಳುವ ಕೌಶಲ್ಯ ಬೆಳೆಸಿಕೊಂಡಾಗ ಮಾತ್ರ ನಾವು ಪದವಿ ಪಡೆದಿರುವುದಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಬಾಗಲಕೋಟೆ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕಾಲೇಜು ಆಡಳಿತ ಮಂಡಳಿ ಪದನಿಮಿತ್ತ ಕಾರ್ಯದರ್ಶಿ ಡಾ. ಎಸ್.ಎಂ. ಗಾಂವಕರ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬವಿವಿ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೌಶಲ-2023-24ರ ಅಡಿಯಲ್ಲಿ ಗುರುವಾರ ಜರುಗಿದ ಪದವಿ ನಂತರದ ಸುವರ್ಣ ಅವಕಾಶಗಳ ಕುರಿತು ನಡೆದ ಎರಡು ದಿನಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಹಲವು ವರ್ಷಗಳಲ್ಲಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ. ಆದರೂ ಸೂಕ್ತ ಮತ್ತು ಸಮರ್ಥ ಉದ್ಯೋಗ ಹುಡುಕಿಕೊಳ್ಳುವ ಚಾಣಾಕ್ಷತೆಯಲ್ಲಿ ನಮ್ಮ ಯುವ ಪಡೆ ಇನ್ನೂ ತುಂಬಾ ಹಿಂದುಳಿದಿದೆ. ಕೇವಲ ಒಂದು ಪದವಿ ಕೈಯಲ್ಲಿದ್ದರೆ ರಾಜ್ಯ, ರಾಷ್ಟ್ರಮಟ್ಟದ ಉದ್ಯೋಗಗಳ ಜಾಹಿರಾತುಗಳು ನಮಗಾಗಿ ಕಾದು ಕುಳಿತಿವೆ. ಅವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಉದ್ಯೋಗ ಪಡೆಯುವಲ್ಲಿ ನಾವು ಯಶಸ್ವಿಯಾಗಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಪಾರ್ಶವಂತ ಪಾಲಭಾವಿ ಮಾತನಾಡಿ, ವಿದ್ಯಾರ್ಥಿಗಳು ಇಂಥ ಕರಿಯರ್ ಗೈಡನ್ಸ್ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಉದ್ಯೋಗ ಹುಡುಕುತ್ತ ಕಾಲ ಕಳೆಯುವುದಕ್ಕಿಂತ ಕೌಶಲ್ಯಪೂರ್ಣವಾದ ನಮ್ಮ ವ್ಯಕ್ತಿತ್ವವನ್ನು ಉದ್ಯೋಗವೇ ಹುಡುಕಿಕೊಂಡು ಬರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಹೊಂದಬೇಕು ಎಂದರು.

ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಎಸ್.ಜಿ. ಹುನಸಿಕಾಯಿ, ಐಕ್ಯೂಎಸಿ ಸಂಯೋಜಕ ಡಾ.ಡಿ.ಎಸ್. ಲಮಾಣಿ, ಟ್ರೇನಿಂಗ್ ಮತ್ತು ಪ್ಲೇಸ್ಮೆಂಟ್ ಅಧಿಕಾರಿ ಪ್ರೊ.ನೈನಾ ಕಲ್ಯಾಣಶೆಟ್ಟಿ, ಗಣಕಯಂತ್ರ ವಿಭಾಗದ ಮುಖ್ಯಸ್ಥ ಪ್ರವೀಣ ಅಕ್ಕಿಮರಡಿ ವೇದಿಕೆ ಮೇಲಿದ್ದರು.ಡಾ.ಡಿ.ಎಸ್. ಲಮಾಣಿ ಸ್ವಾಗತಿಸಿದರು, ನೈನಾ ಕಲ್ಯಾಣಶೆಟ್ಟಿ ಪರಿಚಯಿಸಿ, ಪ್ರವೀಣ ಅಕ್ಕಿಮರಡಿ ವಂದಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ